Feb 16, 2026 Languages : ಕನ್ನಡ | English

ಮುಂದಿನ 3 ದಿನಗಳವರೆಗೆ ಕರ್ನಾಟಕದಲ್ಲಿ ಮಳೆ?? ಸುರಕ್ಷಿತವಾಗಿರಲು ಆರೋಗ್ಯ ಸಲಹೆಗಳು!!

ಕರ್ನಾಟಕದಲ್ಲಿ ಇಂದೂ ಸಹ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಶುಷ್ಕ (ಒಣ) ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಮುಂದಿನ ಮೂರು ದಿನಗಳವರೆಗೂ ಇದೇ ರೀತಿಯ ಒಣ ಹವಾಮಾನ ಇರಬಹುದೆಂದು ಸೂಚಿಸಲಾಗಿದೆ.

ಕರ್ನಾಟಕದ ಇಂದಿನ ಹವಾಮಾನದ ಮುಖ್ಯಾಂಶಗಳು:
ಕರ್ನಾಟಕದ ಇಂದಿನ ಹವಾಮಾನದ ಮುಖ್ಯಾಂಶಗಳು:

ಕರಾವಳಿ ಭಾಗ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದಲೂ ಒಣ ಗಾಳಿ ಬೀಸುತ್ತಿದೆ. ಹಗಲು ಹೊತ್ತಿನಲ್ಲಿ ಬಿಸಿಲಿನ ತಾಪಮಾನ ಸಾಧಾರಣವಾಗಿದ್ದರೂ, ಬೆಳಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಸ್ವಲ್ಪ ಚಳಿ ಅನುಭವವಾಗುತ್ತಿದೆ.

ದಕ್ಷಿಣ ಒಳನಾಡು

ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ಮಲೆನಾಡು ಭಾಗದಲ್ಲೂ ಮಳೆಯ ಲಕ್ಷಣಗಳು ಕಂಡುಬರುವುದಿಲ್ಲ.

ಉತ್ತರ ಒಳನಾಡು

ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿಯೂ ಒಣಹವೆಯೇ ಆವರಿಸಿದೆ. ಕೆಲವೆಡೆ ತೀವ್ರ ಚಳಿ ಕಾಣಿಸಿಕೊಳ್ಳುತ್ತಿದ್ದು, ಬೆಳಗಿನ ಜಾವ ಮಂಜು ಸಹ ಕಂಡುಬರುತ್ತಿದೆ.

ಬೆಂಗಳೂರಿನ ಹವಾಮಾನ

ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ಸುಮಾರು 16°C ಮತ್ತು ಗರಿಷ್ಠ ತಾಪಮಾನ 30°Cರವರೆಗೆ ಇರಬಹುದಾಗಿದೆ. ಕಳೆದ ಕೆಲ ದಿನಗಳಿಗಿಂತ ಚಳಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಆದರೂ ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಚಳಿಯ ಅನುಭವ ಇರುವುದರಿಂದ ಮುನ್ನೆಚ್ಚರಿಕೆ ಅಗತ್ಯವಾಗಿದೆ.

ಆರೋಗ್ಯ ಸಲಹೆಗಳು

  • ತೀವ್ರ ಚಳಿಯಿಂದ ಜ್ವರ, ಶೀತ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ:
  • ಬೆಚ್ಚಗಿನ ಉಡುಪು ಧರಿಸುವುದು
  • ಬಿಸಿ ಆಹಾರ ಮತ್ತು ಪಾನೀಯ ಸೇವನೆ
  • ಚಿಕ್ಕಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಜಾಗ್ರತೆ ವಹಿಸುವುದು
  • ಬೆಳಗಿನ ಮಂಜಿನಲ್ಲಿ ಅನಾವಶ್ಯಕವಾಗಿ ಹೊರಗಡೆ ತಂಗುವುದನ್ನು ತಪ್ಪಿಸುವುದು

ರಾಜ್ಯದಾದ್ಯಂತ ಇನ್ನೂ ಕೆಲವು ದಿನಗಳು ಮಳೆಯ ಲಕ್ಷಣಗಳಿಲ್ಲದ ಶುಷ್ಕ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

Latest News