Apr 8, 2026 Languages : ಕನ್ನಡ | English

ಫಾರ್ಮ್ ಹೌಸ್‌ನಲ್ಲಿ ಕಾಮದಾಟ - ಸೈನಿಕನನ್ನೇ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ ಸುಂದರಿ - ಸಿಕ್ಕಿಹಾಕಿಕೊಂಡಿದ್ದು ಹೇಗೆ ಗೊತ್ತಾ?

ಇಂದಿನ ಡಿಜಿಟಲ್ ಯುಗದಲ್ಲಿ ಅಪರಿಚಿತರ ಜೊತೆ ಸ್ನೇಹ ಬೆಳೆಸುವ ಮುನ್ನ ಸಾವಿರ ಬಾರಿ ಯೋಚಿಸಬೇಕು. ಇಲ್ಲವಾದರೆ ಇಂದೋರ್‌ನ ಈ ಸೈನಿಕನಿಗೆ ಆದ ಗತಿ ನಿಮಗೂ ಆಗಬಹುದು. ಇಂದೋರ್‌ನ ಭವನಾ ಭಾರ್ಗವ್ ಎಂಬಾಕೆ ಡೇಟಿಂಗ್ ಆಪ್ ಮೂಲಕ ದೇಶದ ಹೆಮ್ಮೆಯ ಸೈನಿಕನನ್ನೇ ವಂಚನೆಯ ಜಾಲಕ್ಕೆ ಕೆಡವಿ ಹಣ ಪೀಕಲು ಹೋದ ಕಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಸೈನಿಕನ ಧೈರ್ಯದಿಂದ ಬಯಲಾಗಿದ ಹನಿಟ್ರ್ಯಾಪ್ ಜಾಲ; | Photo Credit: https://x.com/NCMIndiaa
ಸೈನಿಕನ ಧೈರ್ಯದಿಂದ ಬಯಲಾಗಿದ ಹನಿಟ್ರ್ಯಾಪ್ ಜಾಲ; | Photo Credit: https://x.com/NCMIndiaa

ಇಂದೋರ್ ನಿವಾಸಿ ಭವನಾ ಭಾರ್ಗವ್ ಎಂಬಾಕೆ ಡೇಟಿಂಗ್ ಆಪ್ ಮೂಲಕ ಸೇನಾ ಪಡೆಯ ಸೈನಿಕನೊಬ್ಬನನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ತುಂಬಾ ದಿನಗಳ ಕಾಲ ಪ್ರೀತಿಯ ನಾಟಕವಾಡಿ ಆತನನ್ನು ಪೂರ್ತಿಯಾಗಿ ನಂಬಿಸುತ್ತಾಳೆ. ಆ ಸೈನಿಕ ಆಕೆಯನ್ನು ಭೇಟಿಯಾಗಲು ಬಂದಾಗ, ಭವನಾ ಆತನನ್ನು ಇಂದೋರ್‌ನ ಕೆಲೋದ್ ಪ್ರದೇಶದಲ್ಲಿರುವ 'ರೈನ್ಬೋ ಫಾರ್ಮ್ ಹೌಸ್'ಗೆ ಕಾಮದಾಟಕ್ಕಾಗಿ ಆಹ್ವಾನಿಸುತ್ತಾಳೆ.

ಪಾಳಯದ ನಿಯಮಗಳ ನಡುವೆ ಬದುಕುವ ಸೈನಿಕ, ಈಕೆಯ ಮಾಯದ ಮಾತಿಗೆ ಮರುಳಾಗಿ ಫಾರ್ಮ್ ಹೌಸ್‌ಗೆ ಹೋಗುತ್ತಾನೆ. ಅಲ್ಲಿ ಅವರಿಬ್ಬರ ನಡುವೆ ದೈಹಿಕ ಸಂಬಂಧ ನಡೆಯುತ್ತದೆ. ಆದರೆ ಆ ಸೈನಿಕನಿಗೆ ಗೊತ್ತಿರದ ವಿಷಯವೇನೆಂದರೆ, ಆ ರೂಮಿನ ಮೂಲೆ ಮೂಲೆಗಳಲ್ಲಿ ಕ್ಯಾಮೆರಾಗಳನ್ನು ಅವಿತಿಡಲಾಗಿತ್ತು.

ಭವನಾ ಮತ್ತು ಆ ಸೈನಿಕ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವಾಗ, ಆಕೆಯ ಸಹಚರರಾದ ಸಾಧನಾ ಗುಪ್ತಾ ಮತ್ತು ವಿಜಯ್ ತಿಲವಾರೆ ಎಂಬುವವರು ಆ ಸೈನಿಕನ ಎಲ್ಲಾ ದೃಶ್ಯಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ದೈಹಿಕ ಸಂಬಂಧ ಮುಗಿದ ಕೂಡಲೇ ಈ ಗ್ಯಾಂಗ್ ಅಸಲಿ ಬಣ್ಣ ಬಯಲು ಮಾಡಿತು.

ಸೈನಿಕನಿಗೆ ಅವರ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕಲು ಶುರುಮಾಡಿದರು. "ನಮಗೆ ಎರಡು ಲಕ್ಷ ರೂಪಾಯಿ ಹಣ ಕೊಡಬೇಕು, ಇಲ್ಲವಾದರೆ ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇವೆ ಮತ್ತು ನಿನ್ನ ಕೆಲಸಕ್ಕೆ ತೊಂದರೆ ಕೊಡುತ್ತೇವೆ" ಎಂದು ಬ್ಲ್ಯಾಕ್‌ಮೇಲ್ ಮಾಡಿದರು. ಆ ಕ್ಷಣದಲ್ಲಿ ಭಯಗೊಂಡ ಸೈನಿಕ, ಹೇಗೋ ಮಾಡಿ ಹಣ ಹೊಂದಿಸುವುದಾಗಿ ಹೇಳಿ ಅಲ್ಲಿಂದ ಹೊರಬಂದಿದ್ದಾನೆ.

ಆ ಸೈನಿಕ ಗಾಬರಿಯಾಗಿ ಹಣ ಕೊಡಲು ಹೋಗದೆ, ನೇರವಾಗಿ ಇಂದೋರ್ ಪೊಲೀಸ್ ಕಮಿಷನರ್ ಅವರನ್ನ ಭೇಟಿಯಾಗಿ ನಡೆದ ವಿಷಯವನ್ನೆಲ್ಲಾ ವಿವರಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಲೆ ಬೀಸಿ, ಆ ಸೈನಿಕನ ಮೂಲಕವೇ ಹಣ ಪಡೆಯಲು ಆ ಗ್ಯಾಂಗ್ ಅನ್ನು ಕರೆಯಿಸಿದ್ದಾರೆ. ಯಾವಾಗ ಹಣ ಪಡೆಯಲು ಭವನಾ ಮತ್ತು ಅವಳ ಗ್ಯಾಂಗ್ ಬಂದಿತೋ, ಆಗ ಪೊಲೀಸರು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಜೈಲಿಗಟ್ಟಿದ್ದಾರೆ.

ಪೊಲೀಸರ ತನಿಖೆಯಲ್ಲಿ ಈ ಗ್ಯಾಂಗ್ ಇದೇ ರೀತಿ ಅನೇಕ ಶ್ರೀಮಂತರು ಮತ್ತು ಅಮಾಯಕರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿರುವುದು ಬೆಳಕಿಗೆ ಬಂದಿದೆ. ಈ ಭವನಾ ಭಾರ್ಗವ್ ಎಂಬಾಕೆ ಇಂತಹ ಕೆಲಸಗಳಲ್ಲೇ ಪಳಗಿದವಳು ಎನ್ನಲಾಗಿದೆ. ಡೇಟಿಂಗ್ ಆಪ್‌ಗಳಲ್ಲಿ ಸಿಗುವ ಪ್ರತಿಯೊಬ್ಬರೂ ಒಳ್ಳೆಯವರಲ್ಲ. ಅದರಲ್ಲೂ ಅಪರಿಚಿತ ಹುಡುಗಿಯರು ಫಾರ್ಮ್ ಹೌಸ್ ಅಥವಾ ಖಾಸಗಿ ಜಾಗಕ್ಕೆ ಕರೆಯುತ್ತಿದ್ದಾರೆ ಎಂದರೆ ಅಲ್ಲಿ ಏನೋ ಅಪಾಯವಿದೆ ಎಂದೇ ಅರ್ಥ. ಹಣ ಮತ್ತು ಮರ್ಯಾದೆ ಎರಡನ್ನೂ ಕಳೆದುಕೊಳ್ಳುವ ಬದಲು ಇಂತಹ ಆಪ್‌ಗಳಿಂದ ದೂರವಿರುವುದೇ ಲೇಸು.

ಒಂದು ವೇಳೆ ನೀವು ಇಂತಹ ವಂಚನೆಗೆ ಒಳಗಾದರೆ ಭಯಪಡಬೇಡಿ. ಈ ಸೈನಿಕನಂತೆ ಧೈರ್ಯದಿಂದ ಪೊಲೀಸರ ಹತ್ತಿರ ಹೋಗಿ ದೂರು ನೀಡಿ. ನಿಮ್ಮ ಮೌನವೇ ವಂಚಕರಿಗೆ ಬಂಡವಾಳವಾಗುತ್ತದೆ. ಎಚ್ಚರದಿಂದಿರಿ, ಸುರಕ್ಷಿತವಾಗಿರಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ಅವರನ್ನು ಇಂತಹ ಹನಿಟ್ರ್ಯಾಪ್ ಜಾಲದಿಂದ ರಕ್ಷಿಸಿ.

Latest News