May 5, 2026 Languages : ಕನ್ನಡ | English

ವಿಮಾನ ಪ್ರಯಾಣಿಕರೇ ಎಚ್ಚರ - ಚಂಡೀಗಢದಲ್ಲಿ ಇಂಡಿಗೋ ಫ್ಲೈಟ್ ಎಮರ್ಜೆನ್ಸಿ ಲ್ಯಾಂಡಿಂಗ್; ಬೆಂಕಿ ಅವಾಂತರಕ್ಕೆ ಕಾರಣವೇನು?

ವಿಮಾನದೊಳಗೆ ಬೆಂಕಿ ಅಂದ್ರೆ ಅದು ಸಾಮಾನ್ಯ ವಿಷಯವಲ್ಲ. ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಅಕ್ಷರಶಃ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಹೈದರಾಬಾದ್‌ನಿಂದ ಬಂದಿಳಿದ ಇಂಡಿಗೋ ಫ್ಲೈಟ್ 6E 108 ನಲ್ಲಿ ನಡೆದ ಈ ಘಟನೆ ಈಗ ಎಲ್ಲೆಡೆ ಆತಂಕ ಮೂಡಿಸಿದೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬೆಂಕಿ; | Photo Credit: https://x.com/Vinamralongani
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬೆಂಕಿ; | Photo Credit: https://x.com/Vinamralongani

ಬೆಂಕಿಗೆ ಅಸಲಿ ಕಾರಣವೇನು.?

ಹೈದರಾಬಾದ್‌ನಿಂದ ಬಂದ ಇಂಡಿಗೋ ವಿಮಾನ ಚಂಡೀಗಢದಲ್ಲಿ ಲ್ಯಾಂಡ್ ಆಗಿ, ಪ್ರಯಾಣಿಕರು ಕೆಳಗಿಳಿಯಲು ಸಿದ್ಧರಾಗುತ್ತಿದ್ದಾಗಲೇ ಈ ಆತಂಕಕಾರಿ ಘಟನೆ ನಡೆದಿದೆ. ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿದ್ದ ಎಲೆಕ್ಟ್ರಾನಿಕ್ ಸಾಧನ (ಫೋನ್ ಅಥವಾ ಪವರ್ ಬ್ಯಾಂಕ್) ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ವಿಮಾನದ ಕ್ಯಾಬಿನ್ ತುಂಬಾ ದಟ್ಟವಾದ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರು ಉಸಿರಾಡಲು ಪರದಾಡಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ವಿಮಾನದ ಸಿಬ್ಬಂದಿ ಕೂಡಲೇ 'ಎಮರ್ಜೆನ್ಸಿ ಇವಾಕ್ಯುಯೇಷನ್' ಘೋಷಿಸಿದ್ದಾರೆ. ವಿಮಾನದ ತುರ್ತು ನಿರ್ಗಮನ ದ್ವಾರಗಳನ್ನು ತೆರೆದು, ರಬ್ಬರ್ ಸ್ಲೈಡ್‌ಗಳ ಮೂಲಕ ಪ್ರಯಾಣಿಕರನ್ನು ಶರವೇಗದಲ್ಲಿ ಕೆಳಗಿಳಿಸಲಾಯಿತು. ಜೀವ ಭಯದಿಂದ ಜನರು ಒಬ್ಬರ ಮೇಲೊಬ್ಬರು ಬೀಳುತ್ತಾ ಹೊರಬಂದ ದೃಶ್ಯ ರಣರಂಗದಂತಿತ್ತು. ಅದೃಷ್ಟವಶಾತ್, ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂಬುದು ದೊಡ್ಡ ಸಮಾಧಾನದ ಸಂಗತಿ. 

ವಿಮಾನಕ್ಕೀಗ ಫುಲ್ ಸರ್ವಿಸ್;

ಇಂಡಿಗೋ ಏರ್‌ಲೈನ್ಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದೆ. ಸದ್ಯಕ್ಕೆ ಆ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ಸಂಪೂರ್ಣ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ. ಎಲೆಕ್ಟ್ರಾನಿಕ್ ಸಾಧನದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಈ ತಪ್ಪು ಮಾಡಬೇಡಿ;

  • ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ಅತಿಯಾಗಿ ಬಿಸಿಯಾಗುತ್ತಿದ್ದರೆ ವಿಮಾನದೊಳಗೆ ಅದನ್ನು ಬಳಸಬೇಡಿ.
  • ಬ್ಯಾಟರಿ ಉಬ್ಬಿರುವ ಫೋನ್‌ಗಳನ್ನು ಫ್ಲೈಟ್‌ನಲ್ಲಿ ಕೊಂಡೊಯ್ಯುವುದು ಅಪಾಯಕಾರಿ.
  • ಯಾವುದೇ ರೀತಿಯ ಹೊಗೆ ಅಥವಾ ಸುಟ್ಟ ವಾಸನೆ ಬಂದರೆ ತಕ್ಷಣ ಸಿಬ್ಬಂದಿಗೆ ಮಾಹಿತಿ ನೀಡಿ.
  • ಸಕಾಲದಲ್ಲಿ ಸ್ಪಂದಿಸಿದ ಪೈಲಟ್ ಮತ್ತು ಸಿಬ್ಬಂದಿಯ ಧೈರ್ಯಕ್ಕೆ ಈಗ ಹ್ಯಾಟ್ಸ್ ಆಫ್ ಹೇಳಲೇಬೇಕು!

Latest News