ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಒಂದು ಅಚ್ಚರಿಯ ಸುದ್ದಿ ಹರಿದಾಡ್ತಾ ಇತ್ತು. ಅದೇನಪ್ಪಾ ಅಂದ್ರೆ, ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೀತಿರೋದ್ರಿಂದ, ಇರಾನ್‌ನ 'ಸ್ಟ್ರೈಟ್ ಆಫ್ ಹಾರ್ಮುಜ್' ಎಂಬ ಕಡಲ್ಗಾಲುವೆಯಲ್ಲಿ ಭಾರತದ ತೈಲ ಹಡಗು ಪಾಸ್ ಆಗೋಕೆ ಚೀನಾ ಕರೆನ್ಸಿ ಅಂದ್ರೆ 'ಯುವಾನ್' ಮೂಲಕ ಹಣ ಪಾವತಿ ಮಾಡಿದೆ ಅಂತ ಕೆಲವರು ಪೋಸ್ಟ್ ಹಾಕಿದ್ರು. ಇದು ಭಾರತದ ಇಮೇಜ್‌ಗೆ ಧಕ್ಕೆ ತರೋ ಕೆಲಸ ಅಂತ ಕೂಡ ಕೆಲವರು ಕಮೆಂಟ್ ಮಾಡಿದ್ರು. ಆದ್ರೆ, ಈ ಸುದ್ದಿಯ ಸತ್ಯಾಸತ್ಯತೆ ಏನು ಅನ್ನೋದು ಈಗ ಬಯಲಾಗಿದೆ.
ವಿದೇಶಾಂಗ ಇಲಾಖೆ (MEA) ಸ್ಪಷ್ಟನೆ
ಈ ಆತಂಕಕಾರಿ ವಿಷಯದ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs - MEA) ಈಗ ಖಡಕ್ ಸ್ಪಷ್ಟನೆ ನೀಡಿದೆ. ಈ ಸುದ್ದಿಯೆಲ್ಲಾ ಬರೀ "ಅಪ್ಪಟ ಸುಳ್ಳು" ಮತ್ತು "ಆಧಾರ ರಹಿತ" ಅಂತ ಎಂಇಎ ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ತಪ್ಪು ಮಾಹಿತಿಗಳನ್ನ ಹರಡೋ ಮೂಲಕ ಭಾರತದ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನ ನಡೀತಿದೆ, ಹಾಗಾಗಿ ಯಾರು ಕೂಡ ಇಂತಹ ಪೋಸ್ಟ್‌ಗಳನ್ನ ನಂಬಬೇಡಿ ಅಂತ ಸರ್ಕಾರ ಜನರಿಗೆ ವಾರ್ನಿಂಗ್ ನೀಡಿದೆ.
ಸರಕಾರದ ವಿರುದ್ಧದ ಷಡ್ಯಂತ್ರವೇ?
ನೋಡೋಕೆ ಹೋದ್ರೆ ಇದು ಸರ್ಕಾರದ ವಿರುದ್ಧ ಒಂದು ಗುಂಪು ಮಾಡ್ತಿರೋ ವ್ಯವಸ್ಥಿತ ಅಭಿಯಾನದಂತೆ ಕಾಣ್ತಿದೆ. "ಭಾರತದ ಮರ್ಯಾದೆ ಹರಾಜಾಗಿದೆ, ಇದು ರಾಷ್ಟ್ರೀಯ ಅವಮಾನ" ಅಂತ ಕೆಲವರು ಬೇಕಂತಲೇ ಪೋಸ್ಟ್ ಮಾಡಿ ಜನರಲ್ಲಿ ಗೊಂದಲ ಮೂಡಿಸ್ತಾ ಇದ್ರು. ಮೋದಿಯವರ ವಿರುದ್ಧ ಕಟು ಟೀಕೆಗಳನ್ನ ಮಾಡೋಕೆ ಇಂತಹ ಫೇಕ್ ನ್ಯೂಸ್‌ಗಳನ್ನ ಅಸ್ತ್ರವಾಗಿ ಬಳಸ್ತಾ ಇರೋದು ಈಗ ಬೆಳಕಿಗೆ ಬಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇಮೇಜ್ ಹಾಳು ಮಾಡೋಕೆ ಇಂತಹ ಕೆಲಸ ನಡೀತಿದೆ ಅಂತ ಸರ್ಕಾರ ಹೇಳಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ
ಸದ್ಯ ಇರಾನ್ ಮತ್ತು ಸುತ್ತಮುತ್ತಲ ದೇಶಗಳಲ್ಲಿ ಯುದ್ಧದ ಕಾರ್ಮೋಡ ಕವಿದಿರೋದ್ರಿಂದ ದಿನಕ್ಕೊಂದು ಹೊಸ ವದಂತಿಗಳು ಬರ್ತಾ ಇವೆ. ಮೊನ್ನೆ ತಾನೆ "ಇರಾನ್ ಮೇಲೆ ದಾಳಿ ಮಾಡೋಕೆ ಅಮೆರಿಕ ಭಾರತದ ಸಹಾಯ ಕೇಳ್ತಿದೆ" ಅಂತ ಒಂದು ಸುದ್ದಿ ಇತ್ತು, ಅದನ್ನೂ ಕೂಡ ಸರ್ಕಾರ ಅಲ್ಲಗೆಳೆದಿತ್ತು. ಈಗಿನ ಪರಿಸ್ಥಿತಿಯಲ್ಲಿ ಇರಾನ್ ಕೂಡ ತನ್ನ ಕಡಲ ತೀರಗಳ ಮೇಲೆ ದಾಳಿಯಾದ್ರೆ ಕಡಲ ಮಾರ್ಗಗಳನ್ನೇ ಬಂದ್ ಮಾಡೋದಾಗಿ ಬೆದರಿಕೆ ಹಾಕಿದೆ. ಅತ್ತ ಅಮೆರಿಕ ಕೂಡ ಇರಾನ್‌ನ ತೈಲ ರಫ್ತಿನ ಮೇಲೆ ಕಣ್ಣಿಟ್ಟಿರೋದ್ರಿಂದ ದಿನಕ್ಕೊಂದು ಹೈ-ವೋಲ್ಟೇಜ್ ಸುದ್ದಿಗಳು ಬರ್ತಾನೆ ಇವೆ.
Please stay alert against such false and baseless claims and posts on social media. pic.twitter.com/TVQTMPNqsM
— MEA FactCheck (@MEAFactCheck) March 23, 2026
ಇಂತಹ ಗಂಭೀರ ವಿಷಯಗಳ ಬಗ್ಗೆ ನಾವು ಸೋಷಿಯಲ್ ಮೀಡಿಯಾದಲ್ಲಿ ಏನನ್ನೇ ನೋಡಿದ್ರೂ, ಅದನ್ನ ಶೇರ್ ಮಾಡೋ ಮೊದಲು ಒಂದು ಸಲ ಯೋಚನೆ ಮಾಡಬೇಕು. ಸರ್ಕಾರದ ಅಧಿಕೃತ ಮೂಲಗಳಿಂದ ಮಾಹಿತಿ ಬರೋವರೆಗೂ ಯಾವುದನ್ನೂ ನಂಬೋದು ಬೇಡ. ಸುಳ್ಳು ಸುದ್ದಿಗಳು ಯಾವತ್ತಿದ್ರೂ ಸಮಾಜಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ. ನಿಮಗೂ ಇಂತಹ ಪೋಸ್ಟ್‌ಗಳು ಏನಾದ್ರೂ ಕಂಡ್ರೆ ಕೂಡಲೇ ಜಾಗೃತರಾಗಿ.