ಬೇಸಿಗೆಯ ಬಿಸಿಲು ಹೆಚ್ಚಾಗಿರುವುದರದಿಂದ ಜನರು ತಂಪು ಪಾನೀಯ ಅಥವಾ ಬಿಯರ್ ಮೊರೆ ಹೋಗುವುದು ಸಾಮಾನ್ಯ. ಆದರೆ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಎದುರಾದ ಅನುಭವ ಮಾತ್ರ ಅಕ್ಷರಶಃ ಬೆಚ್ಚಿಬೀಳಿಸುವಂತಿತ್ತು.
ಮಲ್ಲಾಪುರ ಪ್ರದೇಶದಲ್ಲಿ ನಡೆದ ಈ ಘಟನೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಬ್ಬ ಗ್ರಾಹಕರು ಬಿಸಿಲಿನ ಬೇಗೆಯಿಂದ ಸ್ವಲ್ಪ ನಿರಾಳರಾಗಲು ವೈನ್ ಶಾಪ್ ಇಂದ ತಣ್ಣಗಿನ ಬಿಯರ್ ಖರೀದಿಸಿದ್ದು. ಅವರು ಬಾಟಲಿಯನ್ನು ತೆರೆಯುವ ಮೊದಲೇ ಅದರೊಳಗೆ ಏನೋ ಚಲಿಸುತ್ತಿರುವುದು ಕಂಡುಬಂದಿದೆ. ಸೂಕ್ಷ್ಮವಾಗಿ ಗಮನಿಸಿದಾಗ, ಸೀಲ್ ಆಗಿದ್ದ ಆ ಬಾಟಲಿಯ ಒಳಗೆ ಪುಟ್ಟದೊಂದು ಜೀವಂತ ಮೀನು ಈಜಾಡುತ್ತಿತ್ತು.
హైదరాబాద్ నాచారం పరిధిలోని మల్లాపూర్ సమీపంలో గల ఒక వైన్స్ షాపులో విస్తుపోయే ఘటన వెలుగుచూసింది. ఒక వ్యక్తి కొనుగోలు చేసిన కింగ్ఫిషర్ బీర్ బాటిల్లో చేప పిల్ల ప్రత్యక్షమవ్వడంతో సంచలనం రేగింది. సీలు వేసి ఉన్న బాటిల్లో చేప పిల్లను చూసి సదరు వినియోగదారుడు షాక్కు గురయ్యాడు. మద్యం… pic.twitter.com/L15OyzThSi
— ChotaNews App (@ChotaNewsApp) March 7, 2026
ಈ ಘಟನೆಯು ಹೈದರಾಬಾದ್‌ನ ನಾಚಾರಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆ ಗ್ರಾಹಕರು ಆರಾಮವಾಗಿ ಬಿಯರ್ ಸವಿಯೋಣ ಎಂದುಕೊಂಡಿದ್ದರು, ಆದರೆ ಬಾಟಲಿಯೊಳಗೆ ಜೀವಂತ ಮೀನು ಕಂಡ ಕೂಡಲೇ ಅವರಿಗೆ ಶಾಕ್ ಆಗಿದೆ. ಆಶ್ಚರ್ಯವೆಂದರೆ, ಆ ಬಾಟಲಿಯ ಸೀಲ್ ಇನ್ನೂ ಒಡೆದಿರಲಿಲ್ಲ. ಅಂದರೆ, ಕಂಪನಿಯಿಂದ ಬಾಟಲಿ ಪ್ಯಾಕ್ ಆಗಿ ಬರುವಾಗಲೇ ಅದರೊಳಗೆ ಮೀನು ಸೇರಿಕೊಂಡಿತ್ತು ಎಂಬುದು ಸ್ಪಷ್ಟವಾಗಿತ್ತು. ತಕ್ಷಣವೇ ಆ ವ್ಯಕ್ತಿ ತನ್ನ ಫೋನ್‌ನಲ್ಲಿ ಇದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೋಡನೋಡುತ್ತಿದ್ದಂತೆ ಈ ವಿಡಿಯೋ ವೈರಲ್ ಆಗಿದ್ದು, ಮದ್ಯ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಘಟನೆಯಿಂದ ಆಕ್ರೋಶಗೊಂಡ ಗ್ರಾಹಕರು ತಕ್ಷಣವೇ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ತಾವು ಖರೀದಿಸಿದ ವೈನ್ ಶಾಪ್‌ಗೆ ವಾಪಸ್ ಹೋಗಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಬಾಟಲಿಯೊಳಗಿನ ಮೀನನ್ನು ತೋರಿಸಿ ಪ್ರಶ್ನಿಸಿದ್ದಾರೆ. ನಂತರ ಅಂಗಡಿಯ ಸಿಬ್ಬಂದಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. "ನಾವು ಕೇವಲ ಕಂಪನಿಯಿಂದ ಬಂದ ಮಾಲನ್ನು ಮಾರಾಟ ಮಾಡುತ್ತೇವೆ ಹೊರತು, ನಾವು ಬಿಯರ್ ತಯಾರಿಸುವುದಿಲ್ಲ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ" ಎಂದು ವಾದಿಸಿದ್ದಾರೆ. ಈ ವಿಚಾರವಾಗಿ ಗ್ರಾಹಕ ಮತ್ತು ಅಂಗಡಿ ಸಿಬ್ಬಂದಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರಲ್ಲಿ ಹತ್ತಾರು ಅನುಮಾನಗಳು ಶುರುವಾಗಿವೆ. ಬಿಯರ್ ತಯಾರಿಕಾ ಕಂಪನಿಗಳು ಸ್ವಚ್ಛತೆಗೆ ಎಷ್ಟು ಆದ್ಯತೆ ನೀಡುತ್ತವೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
ತಯಾರಿಕಾ ದೋಷ - ಫ್ಯಾಕ್ಟರಿಗಳಲ್ಲಿ ಬಾಟಲಿಗಳನ್ನು ಸ್ವಚ್ಛಗೊಳಿಸುವಾಗ ಅಥವಾ ಬಿಯರ್ ತುಂಬಿಸುವ ಯಂತ್ರಗಳಲ್ಲಿ ಏನಾದರೂ ತಾಂತ್ರಿಕ ದೋಷವಿದ್ದಾಗ ಹೀಗಾಗುವ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ನೀರಿನ ಮೂಲ - ಬಿಯರ್ ತಯಾರಿಕೆಗೆ ಬಳಸುವ ನೀರು ಕೆರೆ ಅಥವಾ ನದಿಗಳಿಂದ ಬಂದಿರಬಹುದು, ಅಲ್ಲಿಂದಲೇ ಮೀನು ಸಣ್ಣದಾಗಿರುವಾಗ ಒಳಗೆ ಸೇರಿರಬಹುದು ಎಂಬುದು ಕೆಲವರ ಊಹೆ.
ಜಾಗೃತಿ - ಈ ಘಟನೆಯನ್ನು ನೋಡಿದ ಮೇಲೆ ಜನರು, "ಯಾವುದೇ ಪಾನೀಯ ಅಥವಾ ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಒಮ್ಮೆ ಬಾಟಲಿಯನ್ನು ಸರಿಯಾಗಿ ಪರೀಕ್ಷಿಸಿ" ಎಂದು ಪರಸ್ಪರ ಎಚ್ಚರಿಕೆ ನೀಡುತ್ತಿದ್ದಾರೆ.
ಈ ಘಟನೆಯು ಕೇವಲ ಒಂದು ಆಶ್ಚರ್ಯದ ಸಂಗತಿಯಲ್ಲ, ಬದಲಿಗೆ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಗಂಭೀರವಾದ ವಿಚಾರವಾಗಿದೆ. ದೊಡ್ಡ ಕಂಪನಿಗಳು ಲಕ್ಷಾಂತರ ಬಾಟಲಿಗಳನ್ನು ಉತ್ಪಾದಿಸುವಾಗ ಇಂತಹ 'ಬ್ಲಂಡರ್' ತಪ್ಪುಗಳನ್ನು ಮಾಡುವುದು ಕ್ಷಮಾರ್ಹವಲ್ಲ. ಪ್ರಸ್ತುತ ಈ ವಿಷಯವು ಆಹಾರ ಮತ್ತು ಸುರಕ್ಷತಾ ಇಲಾಖೆಯ ಗಮನಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಕೂಡ ಏನನ್ನಾದರೂ ಕುಡಿಯುವ ಮುನ್ನ ಬಾಟಲಿಯ ಸೀಲ್ ಮತ್ತು ಅದರ ಒಳಗಿನ ದ್ರವವನ್ನು ಒಮ್ಮೆ ಪರಿಶೀಲಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.