ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿಯದಿದ್ದರೆ ಹಳೇ ಮೈಸೂರು ಭಾಗದವರಿಗಾಗಲಿ ಅಥವಾ ಕರಾವಳಿ-ಉತ್ತರ ಕರ್ನಾಟಕದವರಿಗಾಗಲಿ ದಿನವೇ ಶುರುವಾಗಲ್ಲ. ಆದ್ರೆ, ನಾವು ಕುಡಿಯೋ ಆ ಟೀ ಎಷ್ಟು ಸೇಫ್? ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ಕೇಳಿದ್ರೆ ನೀವು ರೋಡ್ ಸೈಡ್ ಟೀ ಕುಡಿಯೋ ಮೊದಲು ನೂರು ಸಲ ಯೋಚನೆ ಮಾಡ್ತೀರಾ.
ಏನಿದು ಹೈದರಾಬಾದ್ ಟೀ ಸ್ಕ್ಯಾಮ್?
ಕಳೆದ ಏಪ್ರಿಲ್ 23ರಂದು ಹೈದರಾಬಾದ್‌ನ H-FAST (Hyderabad Food Safety and Anti-Adulteration Team) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸುಮಾರು 10 ಜನ ಕಿಡಿಗೇಡಿಗಳನ್ನು ಅರೆಸ್ಟ್ ಮಾಡಿರೋ ಪೊಲೀಸರು, ಗೋದಾಮುಗಳ ಮೇಲೆ ದಾಳಿ ಮಾಡಿ ಬರೋಬ್ಬರಿ 4,500 ಕೆಜಿ ಕಲಬೆರಕೆ ಟೀ ಪುಡಿಯನ್ನ ವಶಪಡಿಸಿಕೊಂಡಿದ್ದಾರೆ.
ಈ ಗ್ಯಾಂಗ್ ಎಷ್ಟು ಖತರ್ನಾಕ್ ಅಂದ್ರೆ, ಇವರು ರೆಡಿ ಮಾಡ್ತಿದ್ದ ವಿಷಕಾರಿ ಟೀ ಪುಡಿಯನ್ನ ಹೈದರಾಬಾದ್‌ನ ಸಾವಿರಾರು ರೋಡ್ ಸೈಡ್ ಟೀ ಅಂಗಡಿಗಳಿಗೆ ಮತ್ತು ಸಣ್ಣಪುಟ್ಟ ಹೋಟೆಲ್‌ಗಳಿಗೆ ಸಪ್ಲೈ ಮಾಡ್ತಿದ್ರು.
ಟೀ ಪುಡಿ ಒಳಗೆ ಏನೇನಿರುತ್ತೆ ಗೊತ್ತಾ?
ಇವರು ಟೀ ಪುಡಿ ಮಾಡೋ ಸ್ಟೈಲ್ ಕೇಳಿದ್ರೆ ಅಸಹ್ಯ ಅನ್ಸುತ್ತೆ. ಅಸ್ಸಾಂ, ಪಶ್ಚಿಮ ಬಂಗಾಳ, ಕೋಲ್ಕತ್ತಾ ಮತ್ತು ಕೇರಳದಿಂದ ಕಮ್ಮಿ ರೇಟಿಗೆ ಸಿಗೋ ಕಳಪೆ ಗುಣಮಟ್ಟದ ಟೀ ಪುಡಿಯನ್ನ ತರ್ತಿದ್ರು. ಅದಕ್ಕೆ ಕಲರ್ ಬರಲಿ ಅಂತ ಸಿಂಥೆಟಿಕ್ ಕೆಮಿಕಲ್ ಬಣ್ಣಗಳು, ರುಚಿ ಬರಲಿ ಅಂತ ಬೆಲ್ಲದ ಪಾಕ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಇನ್ನೂ ಕೆಲವು ಎಕ್ಸ್ಟ್ರಾ ಐಟಂಗಳನ್ನ ಮಿಕ್ಸ್ ಮಾಡ್ತಿದ್ರು.
ಇಷ್ಟೆಲ್ಲಾ ಕಲಬೆರಕೆ ಮಾಡಿದ ಮೇಲೆ ಅದನ್ನ 'ಕೃಷ್ಣಾಂಜಲಿ ಕ್ವಾಲಿಟಿ ಟೀ' ನಂತಹ ಹೈ-ಫೈ ಹೆಸರುಗಳಿರೋ ಪ್ಯಾಕೆಟ್ ಒಳಗೆ ಹಾಕಿ ಮಾರಾಟ ಮಾಡ್ತಿದ್ರು. ನೋಡೋಕೆ ಅಸಲಿ ಟೀ ಪುಡಿಯಂತೆಯೇ ಕಾಣುತ್ತಿದ್ದರಿಂದ ಯಾರಿಗೂ ಡೌಟ್ ಬರ್ತಿರಲಿಲ್ಲ.
ಆರೋಗ್ಯದ ಮೇಲೆ ಏನೇನು ಎಫೆಕ್ಟ್ ಆಗುತ್ತೆ?
ಫುಡ್ ಸೇಫ್ಟಿ ಆಫೀಸರ್ಸ್ ಪ್ರಕಾರ, ಈ ಕೆಮಿಕಲ್ ಕಲರ್ ಇರೋ ಟೀ ಕುಡಿಯೋದ್ರಿಂದ ಎಷ್ಟೋ ಡೇಂಜರ್ ಇದೆ:
- ಲಿವರ್ ಮತ್ತು ಕಿಡ್ನಿ ಸಮಸ್ಯೆ: ಇದ್ರಲ್ಲಿರೋ ಸಿಂಥೆಟಿಕ್ ಬಣ್ಣಗಳು ಮೆಲ್ಲಗೆ ನಿಮ್ಮ ಅಂಗಾಂಗಗಳನ್ನ ತಿಂದು ಹಾಕ್ತವೆ.
- ಕ್ಯಾನ್ಸರ್ ಭೀತಿ: ದೀರ್ಘಕಾಲದವರೆಗೆ ಇಂಥ ಟೀ ಕುಡಿದ್ರೆ ಕ್ಯಾನ್ಸರ್ ಬರೋ ಚಾನ್ಸಸ್ ಜಾಸ್ತಿ ಇರುತ್ತೆ.
- ಹೊಟ್ಟೆಯ ತೊಂದರೆ: ಗ್ಯಾಸ್ಟ್ರಿಕ್ ಇಂದ ಹಿಡಿದು ಅಲ್ಸರ್ ವರೆಗೂ ಎಲ್ಲಾ ತರಹದ ಸಮಸ್ಯೆಗಳು ಕಾಡಬಹುದು.
ಪೊಲೀಸರ ಆಕ್ಷನ್ ಏನು?
ಅಧಿಕಾರಿಗಳು ಈಗಾಗಲೇ ಈ ಹತ್ತು ಜನರ ಮೇಲೆ ಫುಡ್ ಸೇಫ್ಟಿ ಆಕ್ಟ್ ಅಡಿಯಲ್ಲಿ ಕೇಸ್ ಹಾಕಿದ್ದಾರೆ. ಇಡೀ ದೇಶದಲ್ಲಿ ಈಗ ಇಂಥ ಕಲಬೆರಕೆ ಜಾಲ ದೊಡ್ಡದಾಗಿ ಹರಡಿಕೊಂಡಿರೋದ್ರಿಂದ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಹೈದರಾಬಾದ್ ಮಾತ್ರವಲ್ಲ, ಬೆಂಗಳೂರಿನಂತಹ ಸಿಟಿಗಳಲ್ಲೂ ಇಂಥ ಜಾಲ ಇರುವ ಸಾಧ್ಯತೆ ಇದೆ, ಹಾಗಾಗಿ ಜನರು ಹುಷಾರಾಗಿರಬೇಕು.
This is how your “strong” tea gets its colour.
— Manas Muduli (@manas_muduli) April 24, 2026
Not premium leaves, but synthetic dyes.
3,000 kg of adulterated tea powder with artificial colours and other substances seized in Hyderabad.
What you see isn’t always what you drink. pic.twitter.com/zYZCG4tYeg
ಟೀ ಪ್ರಿಯರೇ, ಕಲಬೆರಕೆ ಪತ್ತೆ ಮಾಡೋದು ಹೇಗೆ?
ನೀವು ತಂದಿರೋ ಟೀ ಪುಡಿ ಅಸಲಿಯೋ ಅಥವಾ ನಕಲಿಯೋ ಅಂತ ಚೆಕ್ ಮಾಡೋಕೆ ಒಂದು ಸಿಂಪಲ್ ಐಡಿಯಾ ಇದೆ:
ಒಂದು ಗ್ಲಾಸ್ ತಣ್ಣೀರು ತಗೊಳ್ಳಿ. ಅದಕ್ಕೆ ಒಂದು ಚಮಚ ಟೀ ಪುಡಿ ಹಾಕಿ, ಅಸಲಿ ಟೀ ಪುಡಿ ಆದ್ರೆ ನೀರಿನ ಬಣ್ಣ ತಕ್ಷಣ ಬದಲಾಗಲ್ಲ. ಆದ್ರೆ ಕಲಬೆರಕೆ ಆಗಿದ್ರೆ ನೀರು ಹಾಕಿದ ತಕ್ಷಣ ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತೆ. ಯಾಕಂದ್ರೆ ಅದಕ್ಕೆ ಆರ್ಟಿಫಿಶಿಯಲ್ ಕಲರ್ ಹಾಕಿರ್ತಾರೆ. ಕಮ್ಮಿ ರೇಟಿಗೆ ಸಿಗುತ್ತೆ ಅಂತ ಯಾವುದೋ ಬ್ರಾಂಡ್ ಇಲ್ಲದ ಟೀ ಪುಡಿ ಕೊಳ್ಳಬೇಡಿ. ನೀವು ಕುಡಿಯೋ ಒಂದು ಕಪ್ ಚಹಾ ನಿಮ್ಮ ಬಾಳನ್ನೇ ಕಹಿ ಮಾಡಬಹುದು. ಯಾವಾಗಲೂ ನಂಬಿಕಸ್ತ ಬ್ರಾಂಡ್ ಅಥವಾ ಅಂಗಡಿಗಳಿಂದಲೇ ದಿನಸಿ ಸಾಮಾನುಗಳನ್ನ ತಗೊಳ್ಳಿ.