ಹಾಸನ ನಗರದಲ್ಲಿ ನಡೆದ ಒಂದು ಘಟನೆ ಸ್ಥಳೀಯರಲ್ಲಿ ಬೆಚ್ಚಿ ಬೀಳುವಂತೆ ಮಾಡಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಕಿಡಿಗೇಡಿ ಹಿಂಬಾಲಿಸಿದ ಘಟನೆ ಜನವರಿ 17ರ ಶನಿವಾರ ಮಧ್ಯಾಹ್ನ ನಡೆದಿದೆ. ಹೌದು ಈ ಘಟನೆ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯ 80 ಅಡಿ ರಸ್ತೆಯ ಪ್ರದೇಶದಲ್ಲಿ ನಡೆದಿದ್ದು, ಈಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೃಶ್ಯದಲ್ಲಿ ಕಂಡು ಬಂದ ಬಾಲಕಿ ಮನೆ ಕಡೆಗೆ ಬರುತ್ತಿದ್ದಾಗ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆಂದು ಗಮನಿಸಿ ಆತಂಕಗೊಂಡಳು.
ತಕ್ಷಣವೇ ಓಡೋಡಿ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದಳು. ಆಕೆಯನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿ ಮನೆ ಗೇಟ್ ವರೆಗೂ ಬಂದಿದ್ದು, ಇದರಿಂದ ಬಾಲಕಿ ಇನ್ನಷ್ಟು ಭಯಗೊಂಡಳು. ಮನೆಗೆ ಪ್ರವೇಶಿಸಿದ ಬಾಲಕಿ ತಕ್ಷಣ ಗೇಟ್ ಲಾಕ್ ಮಾಡಿ, “ಅಮ್ಮಾ ಬಾಗಿಲು ತೆಗಿ” ಎಂದು ಆತಂಕದಿಂದ ಕೂಗಾಡಿದಳು. ಆಕೆಯ ಕಿರುಚಾಟವನ್ನು ಕೇಳಿ ಮನೆಯವರು ಬೆಚ್ಚಿಬಿದ್ದರು. ಗೇಟ್ ಒಳಗೆ ನಿಂತು ಕಿರುಚಾಡುತ್ತಿದ್ದ ಬಾಲಕಿಯನ್ನು ನೋಡಿ, ಹಿಂಬಾಲಿಸುತ್ತಿದ್ದ ವ್ಯಕ್ತಿ ಗೇಟ್ ಇಣುಕಿ ವಾಪಸ್ ಹೋಗಿದ್ದಾನೆ. ಹೌದು ಈ ಘಟನೆ ಸ್ಥಳೀಯರಲ್ಲಿ ಭಯ ಮತ್ತು ಆಕ್ರೋಶ ಮೂಡಿಸಿದೆ. ಶಾಲಾ ಬಾಲಕಿಯನ್ನೇ ಹಿಂಬಾಲಿಸಿ ಮನೆ ಗೇಟ್ ವರೆಗೂ ಬಂದಿರುವುದು ಜನರಲ್ಲಿ ಅಸಹನೆ ಉಂಟುಮಾಡಿದೆ.
ಮಕ್ಕಳ ಸುರಕ್ಷತೆಗಾಗಿ ಇಂತಹ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಮಾಹಿತಿ ತಿಳಿದು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಕಿಡಿಗೇಡಿಯನ್ನು ಪತ್ತೆಹಚ್ಚಲು ಪೊಲೀಸರು ತಲಾಷ್ ಆರಂಭಿಸಿದ್ದಾರೆ. ಮಕ್ಕಳ ಸುರಕ್ಷತೆ ನಮ್ಮ ಆದ್ಯತೆ. ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ. “ಮಕ್ಕಳು ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಬರಲು ನಾವು ಚಿಂತಿಸುತ್ತಿದ್ದೇವೆ. ಇಂತಹ ಘಟನೆಗಳು ಮರುಕಳಿಸಬಾರದು” ಎಂದು ಪೋಷಕರು ಹೇಳಿದ್ದಾರೆ.
ಸಮಾಜದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ಮಕ್ಕಳ ಸುರಕ್ಷತೆಗಾಗಿ ಕಠಿಣ ಕ್ರಮ ಅಗತ್ಯವಾಗಿದೆ. ಶಾಲಾ ಮಕ್ಕಳನ್ನು ಹಿಂಬಾಲಿಸುವುದು, ಅವರಲ್ಲಿ ಭಯ ಹುಟ್ಟಿಸುವುದು ಸಮಾಜಕ್ಕೆ ಅಪಾಯಕಾರಿಯಾಗಿದೆ. ಇಂತಹ ಕೃತ್ಯಗಳಿಗೆ ಕಾನೂನು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಅಭಿಪ್ರಾಯ. ಹೌದು ಒಟ್ಟಾರೆಯಾಗಿ ಹೇಳಬೇಕು ಅಂದರೆ, ಅತ್ತ ಹಾಸನದಲ್ಲಿ ನಡೆದ ಈ ಘಟನೆ ಮಕ್ಕಳ ಸುರಕ್ಷತೆ ಬಗ್ಗೆ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಬಾಲಕಿಯ ಧೈರ್ಯ, ಮನೆಯವರ ತಕ್ಷಣದ ಪ್ರತಿಕ್ರಿಯೆ ಮತ್ತು ಪೊಲೀಸರ ತನಿಖೆ – ಇವೆಲ್ಲವೂ ಮಕ್ಕಳ ರಕ್ಷಣೆಗೆ ಅಗತ್ಯವಾದ ಕ್ರಮಗಳ ಮಹತ್ವವನ್ನು ತೋರಿಸುತ್ತವೆ.