May 5, 2026 Languages : ಕನ್ನಡ | English

ಫೇಸ್‌ಬುಕ್‌ನಲ್ಲಿ ಬೈಕ್ ತಗೊಳ್ಳೋ ಮುನ್ನ ಎಚ್ಚರ - ಹೆಬ್ಬಗೋಡಿ ಪೊಲೀಸರ ಬಲೆಗೆ ಬಿದ್ದ ಅಂತರರಾಜ್ಯ 'ಫೇಕ್' ಕಿಂಗ್‌ಗಳು!!

ನೀವು ಫೇಸ್‌ಬುಕ್‌ನಲ್ಲಿ ಕಮ್ಮಿ ರೇಟ್‌ಗೆ ಬೈಕ್ ಸಿಗುತ್ತೆ ಅಂತ ಏನಾದ್ರೂ ನೋಡಿದ್ರೆ ಸ್ವಲ್ಪ ಹುಷಾರು! ಯಾಕಂದ್ರೆ, ಕಳ್ಳತನದ ಬೈಕ್‌ಗಳಿಗೆ ಅಸಲಿ ಆರ್ ಸಿ ಕಾರ್ಡ್ ಅನ್ನೋ ಹಾಗೆಯೇ ನಕಲಿ ಕಾರ್ಡ್ ರೆಡಿ ಮಾಡಿ ಮಾರುತ್ತಿದ್ದ ದೊಡ್ಡ ಗ್ಯಾಂಗ್ ಅನ್ನೇ ಹೆಬ್ಬಗೋಡಿ ಪೊಲೀಸರು ಈಗ ಅರೆಸ್ಟ್ ಮಾಡಿದ್ದಾರೆ. ಆಂಧ್ರದ ನಂಡ್ಯಾಳ್ ಸಿಟಿಯೇ ಇವರ ಈ ಫೇಕ್ ಕಾರ್ಡ್ ಫ್ಯಾಕ್ಟರಿಯ ಹೆಡ್ ಆಫೀಸ್ ಆಗಿತ್ತು!

ಆಂಧ್ರದ ನಂಡ್ಯಾಲ್‌ನಲ್ಲಿ ನಕಲಿ ಆರ್ ಸಿ ಕಾರ್ಡ್ ಫ್ಯಾಕ್ಟರಿ
ಆಂಧ್ರದ ನಂಡ್ಯಾಲ್‌ನಲ್ಲಿ ನಕಲಿ ಆರ್ ಸಿ ಕಾರ್ಡ್ ಫ್ಯಾಕ್ಟರಿ

ಯಾರಿದು 'ಫೇಕ್' ಕಿಂಗ್‌ಗಳು?

ಹೆಬ್ಬಗೋಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರೋದು ಚಿತ್ತಪಗಾರಿ ಆನಂದ್ ಮತ್ತು ಶೇಕ್ ಶಫೀರ್ ಬಾಷಾ ಅನ್ನೋ ಇಬ್ಬರು ಭೂಪರು. ಇವರ ಕೆಲಸ ಏನಿತ್ತು ಅಂದ್ರೆ, ಒಂದು ಕಡೆ ಬೈಕ್ ಕಳ್ಳತನ ಮಾಡೋದು, ಇನ್ನೊಂದು ಕಡೆ ಆ ಬೈಕ್‌ಗಳಿಗೆ ತಕ್ಕಂತೆ ಫೇಕ್ ಆರ್ ಸಿ ಕಾರ್ಡ್ ರೆಡಿ ಮಾಡೋದು. ಇವರ ಹತ್ತಿರ ಸಿಕ್ಕಿರೋದು ಬರೋಬ್ಬರಿ 501 ನಕಲಿ ಆರ್ ಸಿ ಕಾರ್ಡ್‌ಗಳು ಅಂದ್ರೆ ನೀವೇ ಯೋಚಿಸಿ ಇವರು ಎಷ್ಟು ದೊಡ್ಡ ಮಟ್ಟದಲ್ಲಿ ಈ ಸ್ಕ್ಯಾಮ್ ನಡೆಸುತ್ತಿದ್ದರು ಅಂತ!

ಫೇಸ್‌ಬುಕ್‌ನಲ್ಲಿ ಸೇಲ್ ಪ್ಲಾನ್!

ಈ ಗ್ಯಾಂಗ್‌ನವರ ಪ್ಲಾನ್ ತುಂಬಾ ಸಿಂಪಲ್ ಆಗಿತ್ತು. ಕದ್ದ ಬೈಕ್‌ಗಳ ಫೋಟೋ ತೆಗೆದು ಫೇಸ್‌ಬುಕ್‌ನಲ್ಲಿ 'ಸೇಲ್' ಅಂತ ಜಾಹೀರಾತು ಹಾಕ್ತಿದ್ದರು. ಮಾರ್ಕೆಟ್ ರೇಟ್‌ಗಿಂತ ತುಂಬಾ ಕಡಿಮೆ ಬೆಲೆಗೆ ಸಿಗುತ್ತೆ ಅಂದ ಕೂಡಲೇ ಜನ ಮುಗಿಬಿದ್ದು ಕಾಲ್ ಮಾಡ್ತಿದ್ದರು. ಬೈಕ್ ತಗೊಳ್ಳೋಕೆ ಬಂದವರಿಗೆ ನಂಡ್ಯಾಳ್‌ನಲ್ಲಿ ರೆಡಿಯಾದ ಈ ನಕಲಿ ಆರ್ ಸಿ ಕಾರ್ಡ್ ತೋರಿಸಿ ನಂಬಿಸಿ, ಹಣ ಇಸ್ಕೊಂಡು ಬೈಕ್ ಹ್ಯಾಂಡೋವರ್ ಮಾಡ್ತಿದ್ದರು. ಪೇಪರ್ ನೋಡಿ ಇದು ಅಸಲಿ ಅಂತ ನಂಬಿದ ಜನ ಆಮೇಲೆ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ತಲೆ ಮೇಲೆ ಕೈ ಹೊತ್ತು ಕೂರೋ ಸ್ಥಿತಿ ಬರ್ತಿತ್ತು.

ಮೂರು ರಾಜ್ಯಗಳಲ್ಲಿ ಇವರದ್ದೇ ಹವಾ!

ಈ ಗ್ಯಾಂಗ್ ಕರ್ನಾಟಕ ಅಷ್ಟೇ ಅಲ್ಲದೆ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ ಕೈಚಳಕ ತೋರಿಸಿದೆ. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದ ಹೆಸರಲ್ಲಿರುವ 501 ನಕಲಿ ಆರ್ ಸಿ ಕಾರ್ಡ್‌ಗಳನ್ನು ಪೊಲೀಸರು ಇವರಿಂದ ವಶಕ್ಕೆ ಪಡೆದಿದ್ದಾರೆ. ಇವರಿಂದ ಸದ್ಯಕ್ಕೆ 51 ಬೈಕ್‌ಗಳನ್ನು ರಿಕವರಿ ಮಾಡಲಾಗಿದೆ. ಇವರ ಅಡ್ಡಾದಲ್ಲಿ 3 ಮೊಬೈಲ್, ಒಂದು ಸಿಪಿಯು ಮತ್ತು ನಕಲಿ ಕಾರ್ಡ್ ಪ್ರಿಂಟ್ ಹಾಕೋ ಪ್ರಿಂಟರ್ ಕೂಡ ಸಿಕ್ಕಿದೆ.

ಪೊಲೀಸರ ಬಿಗಿ ತನಿಖೆ

ಹೆಬ್ಬಗೋಡಿ ಪೊಲೀಸರು ಈಗ ಈ ಇಬ್ಬರೂ ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಇವರ ಜೊತೆ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ? ಇಷ್ಟೊಂದು ದೊಡ್ಡ ಮಟ್ಟದಲ್ಲಿ ಡೇಟಾ ಇವರಿಗೆ ಎಲ್ಲಿಂದ ಸಿಕ್ಕಿತ್ತು ಅನ್ನೋದರ ಬಗ್ಗೆ ಪೊಲೀಸರು ಇಂಚಿಂಚೂ ಮಾಹಿತಿ ಕಲೆಹಾಕ್ತಿದ್ದಾರೆ. ಹೆಬ್ಬಗೋಡಿ ಪೊಲೀಸ್ ಸ್ಟೇಷನ್‌ನಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.

ಸೆಕೆಂಡ್ ಹ್ಯಾಂಡ್ ಬೈಕ್ ತಗೊಳ್ಳುವಾಗ ಬರಿ ಪೇಪರ್ ನೋಡಿ ನಂಬಬೇಡಿ. ಆನ್ ಲೈನ್‌ನಲ್ಲಿ ಚೆಕ್ ಮಾಡಿ ಅಥವಾ ಸಂಬಂಧಪಟ್ಟ ಆಫೀಸ್‌ಗೆ ಹೋಗಿ ವೆರಿಫೈ ಮಾಡಿ. ಇಲ್ಲಾಂದ್ರೆ ಇಂತಹ ಖದೀಮರ ಪ್ಲಾನ್‌ಗೆ ನೀವು ಬಲಿಯಾಗೋದು ಗ್ಯಾರಂಟಿ!

Latest News