ಬೊಜ್ಜು ಬಂದಿದೆ, ಸದಾ ನೈಟಿ ಹಾಕ್ತೀಯ ಅಂತ ಹೆಂಡತಿಯನ್ನೇ ಕೊಂ*ದ ಗಂಡ - ಬಳಿಕ ಅಕ್ರಮ ಸಂಬಂಧ ಬಯಲು!!

ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯರ ನಡುವಿನ ಸಂಘರ್ಷ ಎಷ್ಟು ಭೀಕರವಾಗುತ್ತಿದೆ ಎಂದರೆ, ಕ್ಷುಲ್ಲಕ ಕಾರಣಗಳಿಗಾಗಿ ಪ್ರಾಣ ತೆಗೆಯುವ ಮಟ್ಟಕ್ಕೆ ಜನರು ಇಳಿಯುತ್ತಿದ್ದಾರೆ. ಅಧುನಿಕ ಸಮಾಜದಲ್ಲಿ ಮನುಷ್ಯನ ತಾಳ್ಮೆ ಎಲ್ಲಿಗೆ ಬಂದು ನಿಂತಿದೆ ಎಂದು ಯೋಚಿಸುವಂತೆ ಮಾಡುವ ಘಟನೆಗಳು ವರದಿಯಾಗುತ್ತಿವೆ.

ಶಾಕಿಂಗ್ ಘಟನೆ: ನೈಟಿ ವಿಚಾರಕ್ಕೆ ಪತ್ನಿ ಕೊಲೆ; | Photo Credit: AI
ಶಾಕಿಂಗ್ ಘಟನೆ: ನೈಟಿ ವಿಚಾರಕ್ಕೆ ಪತ್ನಿ ಕೊಲೆ; | Photo Credit: AI

ಆಂಧ್ರಪ್ರದೇಶದ ಕಡಪದಲ್ಲಿ ನಡೆದ ಒಂದು ಮನಕಲಕುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕೇವಲ ಹೆಂಡತಿಯ ರೂಪ ಮತ್ತು ಬಟ್ಟೆಯ ವಿಚಾರಕ್ಕೆ ಗಂಡ ಅಮಾನವೀಯವಾಗಿ ವರ್ತಿಸಿದ್ದಾನೆ..

ಏನಿದು ಕಡಪದ ಶಾಕಿಂಗ್ ಘಟನೆ?

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬದ್ರಿಪಲ್ಲಿಯಲ್ಲಿ ಕಿರಣ್ ಕುಮಾರ್ ಎಂಬ ವ್ಯಕ್ತಿ ತನ್ನ 31 ವರ್ಷದ ಪತ್ನಿ ಪದ್ಮಜಾ ಅವರನ್ನು ವಿಷವಿಟ್ಟು ಕೊ*ಲೆ ಮಾಡಿದ್ದಾನೆ. ಆರಂಭದಲ್ಲಿ ಈ ಕೊ*ಲೆಗೆ ಗಂಡ ನೀಡಿದ ಕಾರಣಗಳು ಅತ್ಯಂತ ಸಿಲ್ಲಿಯಾಗಿದ್ದವು:

ಹೆಂಡತಿಯ ಬೊಜ್ಜು - ಪತ್ನಿ ದಪ್ಪಗಾಗುತ್ತಿದ್ದಾರೆ, ಆದರೂ ದೇಹದ ಕಡೆ ಗಮನ ಕೊಡುತ್ತಿಲ್ಲ ಎಂಬುದು ಗಂಡನ ಅಸಮಾಧಾನವಾಗಿತ್ತು.

ಲುಕ್ ಬಗ್ಗೆ ನಿರ್ಲಕ್ಷ್ಯ - ಪತ್ನಿ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಮತ್ತು ಸರಿಯಾಗಿ ರೆಡಿಯಾಗುತ್ತಿಲ್ಲ ಎಂದು ಗಂಡ ಕಿರಿಕಿರಿ ಮಾಡಿಕೊಳ್ಳುತ್ತಿದ್ದ.

ನೈಟಿ ಪ್ರಸಂಗ - ಯಾವಾಗಲೂ ನೈಟಿ ಹಾಕಿಕೊಂಡೇ ಇರುತ್ತಾಳೆ, ನೀಟಾಗಿ ಇರುವುದಿಲ್ಲ ಎಂಬ ಅಸಹ್ಯದಿಂದ ಅವಳಿಗೆ ವಿಷ ಉಣಿಸಿದ್ದಾಗಿ ಹೇಳಿದ್ದಾನೆ.

ಆದರೆ ಪೊಲೀಸ್ ತನಿಖೆ ಮುಂದುವರಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಗಂಡನಿಗೆ ಅ*ಕ್ರಮ ಸಂಬಂಧವಿತ್ತು, ಇದನ್ನು ಪದ್ಮಜಾ ವಿರೋಧಿಸಿದ್ದಕ್ಕೆ ಈ 'ಬೊಜ್ಜು' ಮತ್ತು 'ನೈಟಿ'ಯ ನೆಪ ಹೇಳಿ ಅವಳನ್ನು ಮುಗಿಸಿದ್ದಾನೆ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.

ಬೆಳಗಾವಿಯಲ್ಲೂ ನಡೆದಿತ್ತು ಇಂಥದ್ದೇ ಕೃತ್ಯ!

ನೈಟಿ ಹಾಕಿಕೊಳ್ಳುವ ವಿಚಾರಕ್ಕೆ ಕೇವಲ ಆಂಧ್ರದಲ್ಲಿ ಮಾತ್ರವಲ್ಲ, ನಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು!

ಖಾನಾಪುರದ ನಂದಗಡದಲ್ಲಿ ಕೃಷ್ಣಾಜಿ ಪಾಟೀಲ್ ಎಂಬ ವ್ಯಕ್ತಿ ತನ್ನ ಹೆಂಡತಿ ಮಂಜುಳಾ ಪಾಟೀಲ್‌ಗೆ ಬೆಂಕಿ ಹಚ್ಚಿದ್ದ. ಕಾರಣವೇನೆಂದರೆ, ಹೆಂಡತಿ ಸೀರೆ ಬಿಟ್ಟು ಸದಾ ನೈಟಿ ಹಾಕಿಕೊಳ್ಳುತ್ತಿದ್ದಳು ಎಂಬುದು. ಒಂದು ಸಣ್ಣ ಬಟ್ಟೆಯ ವಿಚಾರಕ್ಕೆ ಗಂಡ ರೊಚ್ಚಿಗೆದ್ದು ಹೆಂಡತಿಯನ್ನು ಸಾವು-ಬದುಕಿನ ನಡುವೆ ಹೋರಾಡುವಂತೆ ಮಾಡಿದ್ದ.

ನಾಲ್ಕು ಗೋಡೆಗಳ ಮಧ್ಯೆ ರಣರಂಗ!

ಒಂದು ಕಾಲದಲ್ಲಿ ಪತಿ-ಪತ್ನಿಯರ ಜಗಳ ನಾಲ್ಕು ಗೋಡೆಗಳ ಮಧ್ಯೆ ಮುಗಿದುಹೋಗುತ್ತಿತ್ತು. ಆದರೆ ಈಗ ಸಣ್ಣ ಕಾರಣಗಳೂ ಸಹ ಕೊ*ಲೆ ಅಥವಾ ಆತ್ಮಹ*ತ್ಯೆಯಲ್ಲಿ ಅಂತ್ಯವಾಗುತ್ತಿರುವುದು ಆತಂಕಕಾರಿ ಸಂಗತಿ. ಸೌಂದರ್ಯದ ಕಲ್ಪನೆಗಳು ಮತ್ತು ಬದಲಾದ ಜೀವನಶೈಲಿ ಮನುಷ್ಯ ಸಂಬಂಧಗಳಿಗಿಂತ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಗಂಡಂದಿರು ಹೆಂಡತಿಯರ ಮೇಲೆ ಸಣ್ಣಪುಟ್ಟ ವಿಷಯಕ್ಕೆ ಹಿಂಸೆ ನೀಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಈ ಘಟನೆಗಳು ಕೇವಲ ಸುದ್ದಿಯಾಗದೆ, ಸಮಾಜದಲ್ಲಿ ಗಂಡ-ಹೆಂಡತಿಯರ ನಡುವೆ ಇರಬೇಕಾದ ಪರಸ್ಪರ ಗೌರವ ಮತ್ತು ತಾಳ್ಮೆಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.

ಕೊ*ಲೆಗೆ ಯಾವ ಕಾರಣವೂ ಸಮರ್ಥನೆಯಾಗಲಾರದು. ಸೌಂದರ್ಯಕ್ಕಿಂತ ಜೀವ ದೊಡ್ಡದು ಎಂಬ ಅರಿವು ಎಲ್ಲರಿಗೂ ಇರಬೇಕಿದೆ. 

Latest News