Apr 16, 2026 Languages : ಕನ್ನಡ | English

ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ - ಆಸ್ಪತ್ರೆಯ 'ಕಳ್ಳಾಟ' ಬಯಲಿಗೆಳೆದ ಯುವ ವೈದ್ಯೆಯ ಧೈರ್ಯದ ವಿಡಿಯೋ!!

ನಮ್ಮ ಸಮಾಜದಲ್ಲಿ ವೈದ್ಯರನ್ನು ದೇವರು ಎಂದು ಕರೆಯುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳ ಪ್ರಾಣಕ್ಕಿಂತ ಹಣಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಒಬ್ಬ ಯುವ ವೈದ್ಯೆ ತಾನು ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅವರ ಈ ನಿರ್ಧಾರ ಈಗ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. 

ಐಸಿಯು ದುರುಪಯೋಗಕ್ಕೆ ವಿರೋಧ: ವೈದ್ಯೆ ಮಾಡಿದ ಶಾಕ್ ನಿರ್ಧಾರ!! | Photo Credit: https://x.com/NewsAlgebraIND
ಐಸಿಯು ದುರುಪಯೋಗಕ್ಕೆ ವಿರೋಧ: ವೈದ್ಯೆ ಮಾಡಿದ ಶಾಕ್ ನಿರ್ಧಾರ!! | Photo Credit: https://x.com/NewsAlgebraIND

ಇಂದಿನ ಕಾಲದಲ್ಲಿ ಒಂದು ಒಳ್ಳೆ ಕೆಲಸ ಸಿಗೋದೇ ಕಷ್ಟ. ಅದರಲ್ಲೂ ಕೈತುಂಬಾ ಸಂಬಳ ಕೊಡೋ ರೆಪ್ಯುಟೆಡ್ ಹಾಸ್ಪಿಟಲ್ ಅಂದ್ರೆ ಯಾರಾದ್ರೂ ಬಿಡ್ತಾರಾ? ಆದ್ರೆ ಇಲ್ಲೊಬ್ಬ ಯುವ ವೈದ್ಯೆ ತಾನು ಕೆಲಸಕ್ಕೆ ಸೇರಿದ ಮೊದಲ ದಿನವೇ ರಿಸೈನ್ ಮಾಡಿ ಮನೆಗೆ ಬಂದಿದ್ದಾರೆ. ಯಾಕೆ ಅಂದುಕೊಂಡಿದ್ದೀರಾ? ಆ ಆಸ್ಪತ್ರೆಯ ಮ್ಯಾನೇಜ್‌ಮೆಂಟ್ ಇವರಿಗೆ ಕೊಟ್ಟ ಐಡಿಯಾ ಅಂತದ್ದು. ಜನರಿಗೆ ಅನ್ಯಾಯ ಮಾಡಿ ದುಡ್ಡು ಮಾಡೋಕೆ ಆಕೆ ಒಪ್ಪಲಿಲ್ಲ.

ಈ ಯಂಗ್ ಡಾಕ್ಟರ್ ಆಸ್ಪತ್ರೆಗೆ ಸೇರಿದಾಗ ಅವರಿಗೆ ಸಂಜೆ ಕ್ಲಿನಿಕ್ ಇರುತ್ತೆ, ಒಳ್ಳೆ ಪೇಮೆಂಟ್ ಸಿಗುತ್ತೆ ಅಂತ ಖುಷಿಯಾಗಿದ್ರು. ಆದ್ರೆ ಅಲ್ಲಿರೋ ಹಿರಿಯ ಗೈನಾಕಾಲಜಿಸ್ಟ್ (ಆಸ್ಪತ್ರೆ ಮಾಲೀಕರು) ಇವರಿಗೆ ಒಂದು ಆರ್ಡರ್ ಮಾಡಿದ್ರು. ರೋಗಿಗಳಿಗೆ ಐಸಿಯು ಅವಶ್ಯಕತೆ ಇಲ್ಲದಿದ್ರೂ, ಅವರನ್ನ ಸುಮ್ಮನೆ ಅಲ್ಲಿಯೇ ಇಟ್ಕೊಳ್ಳಿ ಅಂತ ಪ್ರೆಶರ್ ಹಾಕಿದ್ರು. ಯಾಕಂದ್ರೆ ರೋಗಿ ಐಸಿಯುನಲ್ಲಿ ಇದ್ದಷ್ಟು ಆಸ್ಪತ್ರೆಗೆ ಜಾಸ್ತಿ ದುಡ್ಡು ಬರುತ್ತೆ ಅಲ್ವಾ? ಇದು ಅವರಿಗೆ ಸರಿ ಅನಿಸಲಿಲ್ಲ.

ಈ ವೈದ್ಯೆ ಯೋಚನೆ ಮಾಡಿದ್ದು ಒಂದೇ— "ಒಂದು ವೇಳೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ, ಐಸಿಯು ರಿಪೋರ್ಟ್ ಮೇಲೆ ಸೈನ್ ಹಾಕೋದು ನಾನು. ತಪ್ಪು ಅವರದ್ದು, ಆದ್ರೆ ಹೆಸರು ನಂದು ಕೆಡುತ್ತೆ." ಕೇವಲ ಹೆಸರಷ್ಟೇ ಅಲ್ಲ, ರೋಗಿಗಳ ಪ್ರಾಣದ ಜೊತೆ ಆಟವಾಡೋಕೆ ನನ್ನ ವೃತ್ತಿಧರ್ಮ ಒಪ್ಪಲ್ಲ ಅಂತ ಧೈರ್ಯವಾಗಿ ಹೇಳಿ ಹೊರಬಂದಿದ್ದಾರೆ. ಇವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಲಕ್ಷಾಂತರ ಜನ ಆಕೆಯ ಧೈರ್ಯಕ್ಕೆ ಶಹಬ್ಬಾಸ್ ಅಂದಿದ್ದಾರೆ.

ಈ ಸ್ಟೋರಿ ಕೇಳಿದ ಮೇಲೆ ಜನರಿಗೆ ಸಿಟ್ಟು ಬರೋದು ಸಹಜ. ಎಷ್ಟು ಜನ ತಮಗೆ ಆರಾಮಾಗಿದ್ದರೂ ಐಸಿಯುನಲ್ಲಿ ಇಟ್ಟು ಲಕ್ಷಾಂತರ ರೂಪಾಯಿ ಬಿಲ್ ಕಟ್ಟಿರಬಹುದು ಅಲ್ವಾ? ಭಾರತದ ಹೊಸ ಗೈಡ್‌ಲೈನ್ಸ್ ಪ್ರಕಾರ, ತುಂಬಾ ಎಮರ್ಜೆನ್ಸಿ ಇದ್ರೆ ಮಾತ್ರ ಐಸಿಯುಗೆ ಸೇರಿಸಬೇಕು. ಆದ್ರೆ ಕೆಲವು ಪ್ರೈವೇಟ್ ಆಸ್ಪತ್ರೆಗಳು ಇದನ್ನ ಬಿಸಿನೆಸ್ ಮಾಡ್ಕೊಂಡಿವೆ. ಇಂತಹ ಸಮಯದಲ್ಲಿ ಈ ವೈದ್ಯೆಯ ನಿರ್ಧಾರ ಎಲ್ಲರಿಗೂ ಒಂದು ಎಚ್ಚರಿಕೆ ಗಂಟೆ ತರಹ ಕೇಳಿಸಿದೆ.

ನಮಗೆ ಆರೋಗ್ಯ ಸರಿಯಿಲ್ಲ ಅಂತ ಹಾಸ್ಪಿಟಲ್‌ಗೆ ಹೋದಾಗ ಅವರು ಹೇಳಿದ್ದನ್ನೆಲ್ಲಾ ಕಣ್ಮುಚ್ಚಿ ನಂಬೋ ಕಾಲ ಈಗಿಲ್ಲ. ಯಾಕೆ ಐಸಿಯು ಬೇಕು? ಎಷ್ಟು ದಿನ ಇಡಬೇಕು? ಅಂತ ಪ್ರಶ್ನೆ ಮಾಡೋದು ನಮ್ಮ ಹಕ್ಕು. ಈ ಯುವ ವೈದ್ಯೆ ಮಾಡಿರೋ ಕೆಲಸದಿಂದ ಎಷ್ಟೋ ಜನರಿಗೆ ಧೈರ್ಯ ಬಂದಿದೆ. ಇಂತಹ ಪ್ರಾಮಾಣಿಕ ಡಾಕ್ಟರ್‌ಗಳು ನಮ್ಮ ಸಮಾಜಕ್ಕೆ ತುಂಬಾ ಬೇಕು ಅಲ್ವಾ?