ಡಿಕೆಶಿ ಮುಖದಲ್ಲಿ ಮಾಯವಾಯ್ತು ನಗು - ಸಿಎಂ ಕುರ್ಚಿ ಅವರಿಗಾ, ಇವರಿಗಾ? ಇಲ್ಲಿದೆ ನೋಡಿ!!

ಕರ್ನಾಟಕ ರಾಜಕೀಯದ ಹೈ-ವೋಲ್ಟೇಜ್ ಡ್ರಾಮಾ ಈಗ ಕೊನೆ ಹಂತದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ತಿರುವು ಪಡೆದುಕೊಳ್ಳುತ್ತಿದೆ. ಇಡೀ ರಾಜ್ಯದ ಜನ ಕಣ್ಣು ಬಿಟ್ಟುಕೊಂಡು "ಮುಂದಿನ ಸಿಎಂ ಯಾರು?" ಅಂತ ಕಾಯುತ್ತಿದ್ದಾರೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗುತ್ತಿದ್ದರೆ, ಇನ್ನೊಂದು ಕಡೆ ಸಿಎಂ ಗಾದಿಯ ಪರಮ ಪ್ರಬಲ ಆಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರ ಮುಖದಲ್ಲಿ ನಿನ್ನೆಯಿದ್ದ ನಗು ಇವತ್ತು ಮಾಯವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕುರ್ಚಿ ಸಿಗುವ ಸಂಭ್ರಮದಲ್ಲೂ ಮಾಯವಾಯ್ತು ನಗು
ಕುರ್ಚಿ ಸಿಗುವ ಸಂಭ್ರಮದಲ್ಲೂ ಮಾಯವಾಯ್ತು ನಗು

ರಾಜ್ಯಪಾಲರು ಇಲ್ಲದಿದ್ದರೂ ರಾಜೀನಾಮೆ ಪ್ರಕ್ರಿಯೆ ರೆಡಿ!

ಸದ್ಯಕ್ಕೆ ಕರ್ನಾಟಕ ರಾಜಕೀಯದಲ್ಲಿ ಪ್ರತಿಯೊಂದು ಮೂವ್‌ಮೆಂಟ್ ಕೂಡ ಫುಲ್ ಸೀಕ್ರೆಟ್ ಆಗಿದೆ. ಸಿದ್ದರಾಮಯ್ಯನವರು ಇವತ್ತೇ ಸಿಎಂ ಸ್ಥಾನಕ್ಕೆ ರಿಸೈನ್ ಮಾಡ್ತಾರೆ ಅನ್ನೋದು ಬಹುತೇಕ ಕನ್ಫರ್ಮ್ ಆಗಿದೆ. ಆದರೆ, ಇದೇ ಹೊತ್ತಿಗೆ ರಾಜ್ಯಪಾಲರು ಪತ್ನಿಯ ಅನಾರೋಗ್ಯದ ಕಾರಣದಿಂದ ದಿಢೀರ್ ಮುಂಬೈ ಹಾಗೂ ಇಂದೋರ್‌ ಪ್ರವಾಸ ಕೈಗೊಂಡಿರುವುದು ಟ್ವಿಸ್ಟ್ ಕೊಟ್ಟಿದೆ. ಗವರ್ನರ್ ಇಲ್ಲದಿದ್ದರೂ ಸಿದ್ದರಾಮಯ್ಯನವರು ಲೋಕಭವನಕ್ಕೆ ಅಥವಾ ರಾಜಭವನದ ಸೆಕ್ರೆಟರಿ ಬಳಿ ತೆರಳಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ?

ಇನ್ನೊಂದೆಡೆ, ಡಿ.ಕೆ.ಶಿವಕುಮಾರ್ ಅವರು ಇವತ್ತು ತಮ್ಮ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಭಾರಿ ಚರ್ಚೆ ನಡೀತಿದೆ. ಕಾಂಗ್ರೆಸ್‌ನಲ್ಲಿ 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ಎಂಬ ರೂಲ್ಸ್ ಇರುವುದರಿಂದ, ಮುಂದಿನ ಮುಖ್ಯಮಂತ್ರಿ ಇವರೇ ಆಗುವುದಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಹಾಗಾಗಿ ಡಿಕೆಶಿ ತಮ್ಮ ಪಕ್ಷದ ಸಂಘಟನೆಯ ಜವಾಬ್ದಾರಿಗೆ ಇವತ್ತು ಗುಡ್‌ಬೈ ಹೇಳಬಹುದು ಎನ್ನಲಾಗುತ್ತಿದೆ.

ಡಿಕೆಶಿ ಮುಖದಲ್ಲಿ ನಗುವೇಕಿಲ್ಲ? ಹೈಕಮಾಂಡ್ ಸೀಕ್ರೆಟ್ ಪ್ಲ್ಯಾನ್ ಏನು?

ಇಷ್ಟೆಲ್ಲಾ ಪಾಸಿಟಿವ್ ಬೆಳವಣಿಗೆಗಳು ಇದ್ದರೂ ಒಂದು ದೊಡ್ಡ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದೇನೆಂದರೆ—ಡಿಕೆಶಿ ಮುಖದಲ್ಲಿ ನಿನ್ನೆಯಿದ್ದ ಆ ಖುಷಿ, ನಗು ಇವತ್ತೇಕಿಲ್ಲ?

ಎಷ್ಟೋ ವರ್ಷಗಳ ಕನಸು ನನಸಾಗುವ, ಸಿಎಂ ಕುರ್ಚಿ ಸಿಗುವ ಈ ಸಂಭ್ರಮದ ಸಮಯದಲ್ಲಿ ಡಿಕೆಶಿ ಮುಖದಲ್ಲಿ ನಗು ಮಾಯವಾಗಿದೆ. ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಡಿಕೆಶಿ ಅವರ ಬಾಡಿ ಲ್ಯಾಂಗ್ವೇಜ್ ಸರಿ ಇರಲಿಲ್ಲ. ಮುಖ ಗಂಭೀರವಾಗಿತ್ತು, ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೂ ಉತ್ತರಿಸದೆ ಸೀದಾ ಹೊರಟು ಹೋದರು. ಇದು ರಾಜಕೀಯ ವಲಯದಲ್ಲಿ ನೂರಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹಾಗಾದರೆ ಡೆಲ್ಲಿಯಲ್ಲಿ ಹೈಕಮಾಂಡ್ ಬೇರೆ ಏನಾದರೂ ಶಾಕಿಂಗ್ ಪ್ಲ್ಯಾನ್ ಮಾಡಿದೆಯಾ? ಡಿಕೆಶಿಗೆ ಸಿಎಂ ಪಟ್ಟ ಸಿಗುವುದು ಡೌಟಾ? ಎಂಬ ಚರ್ಚೆಗಳು ಗರಿಗೆದರಿವೆ.

ದಲಿತ ಸಿಎಂ ಕಾರ್ಡ್: ಹೋಮ-ಹವನ ಮಾಡಿಸಿದ ಪರಮೇಶ್ವರ್!

ಡಿಕೆಶಿ ಮುಖ ಬಾಡಲು ಅಸಲಿ ಕಾರಣ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಎಂಟ್ರಿ ಇರಬಹುದು ಎನ್ನಲಾಗುತ್ತಿದೆ. ಹೌದು, ಸದ್ದಿಲ್ಲದೆ ಸಿಎಂ ರೇಸ್‌ಗೆ ಧುಮುಕಿರುವ ಪರಮೇಶ್ವರ್, ತಮಗೂ ಮುಖ್ಯಮಂತ್ರಿಯಾಗುವ ಹಂಬಲವಿದೆ ಎಂದು ಬಹಿರಂಗವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಣ ಕೂಡ ಡಿಕೆಶಿಗೆ ಚೆಕ್ ಇಡಲು 'ದಲಿತ ಸಿಎಂ' ಕಾರ್ಡ್ ಉರುಳಿಸಿದೆ. ಅಷ್ಟೇ ಅಲ್ಲ, ಪರಮೇಶ್ವರ್ ಅವರು ಸಿಎಂ ಗಾದಿ ಸಿಗಲಿ ಎಂದು ನಿನ್ನೆಯಷ್ಟೇ ಭರ್ಜರಿ ಪೂಜೆ ಮತ್ತು ಹೋಮ-ಹವನಗಳನ್ನು ಮಾಡಿಸಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ. ಇದು ಡಿಕೆಶಿ ಬಣದ ನಿದ್ದೆಗೆಡಿಸಿದೆ.

ಒಂದೆಡೆ ಕಣ್ಣೀರು, ಇನ್ನೊಂದೆಡೆ ಕುಣಿತ!

ಸಿಎಂ ನಿವಾಸ ಮತ್ತು ವಿಧಾನಸೌಧದ ಸುತ್ತಮುತ್ತ ಸದ್ಯಕ್ಕೆ ಎರಡು ಬೇರೆ ಬೇರೆ ರೀತಿಯ ಚಿತ್ರಣಗಳು ಕಾಣಿಸುತ್ತಿವೆ. ಸಿದ್ದರಾಮಯ್ಯನವರು ಅಧಿಕಾರ ಬಿಡುತ್ತಿದ್ದಾರೆ ಎಂಬ ಬೇಸರದಲ್ಲಿ ವಿಧಾನಸೌಧದ ಸಿಬ್ಬಂದಿ ಸೇರಿದಂತೆ ಅವರ ನೂರಾರು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದು ಕಡೆ, "ನಮ್ಮ ಸಾಹೇಬ್ರೇ ಮುಂದಿನ ಸಿಎಂ" ಎಂದು ಡಿಕೆಶಿ ಬೆಂಬಲಿಗರು ಹರ್ಷದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ, ಸಿಹಿ ಹಂಚುತ್ತಿದ್ದಾರೆ.

ಕರ್ನಾಟಕ ರಾಜಕೀಯದ ಈ 'ಕುರ್ಚಿ ಪುರಾಣ' ಸದ್ಯಕ್ಕಂತೂ ಬಿಗ್ ಸಸ್ಪೆನ್ಸ್ ಕ್ರಿಯೇಟ್ ಮಾಡಿದೆ. ಸಿಎಂ ಕುರ್ಚಿ ಕೊನೆಗೂ ಕನಕಪುರ ಬಂಡೆ ಡಿಕೆಶಿಗೆ ಸಿಗುತ್ತಾ ಅಥವಾ ಕೊನೆ ಕ್ಷಣದಲ್ಲಿ ಟ್ವಿಸ್ಟ್ ಕೊಟ್ಟು ದಲಿತ ನಾಯಕ ಪರಮೇಶ್ವರ್ ಅವರಿಗೆ ಅದೃಷ್ಟ ಒಲಿಯುತ್ತಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಈ ಹೈ-ವೋಲ್ಟೇಜ್ ರಾಜಕೀಯ ಡ್ರಾಮಾವನ್ನು ನೋಡ್ತಾ ಇರಬೇಕಷ್ಟೇ!

Latest News