ಪಾಂಡವರ ರಾಜಧಾನಿ ಮತ್ತೆ ದೆಹಲಿಯ ಹೆಸರಾಗಬಹುದೇ? - 'ಇಂದ್ರಪ್ರಸ್ಥ' ಕುರಿತು ಹೆಚ್ಚಿದ ಬಾರಿ ಚರ್ಚೆ!!

ದೆಹಲಿಯ ಹೆಸರನ್ನು ಇಂದ್ರಪ್ರಸ್ಥ ಎಂದು ಬದಲಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಬದಲಾವಣೆಯ ಬಗ್ಗೆ ಕೇಂದ್ರ ಸರ್ಕಾರವು ಗಂಭೀರವಾಗಿ ಯೋಚಿಸುತ್ತಿರುವುದು ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ದೆಹಲಿಯನ್ನು 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಸರ್ಕಾರದ ಮುಂದಿಟ್ಟಿದ್ದಾರೆ. ಪುರಾಣಗಳ ಪ್ರಕಾರ, ಪಾಂಡವರಿಗಾಗಿ ಶ್ರೀಕೃಷ್ಣನ ಸಲಹೆಯಂತೆ ಮಯಾಸುರನು ನಿರ್ಮಿಸಿದ ಅದ್ಭುತ ನಗರವೇ ಈ ಇಂದ್ರಪ್ರಸ್ಥ. ಇಂದಿನ ದೆಹಲಿಯ 'ಪುರಾಣ ಕಿಲಾ' ಇರುವ ಜಾಗವೇ ಅಂದಿನ ಪಾಂಡವರ ರಾಜಧಾನಿಯಾಗಿತ್ತು ಎಂದು ಪುರಾತತ್ವ ಇಲಾಖೆಯ ತಜ್ಞರು ದೀರ್ಘಕಾಲದಿಂದ ಅಭಿಪ್ರಾಯಪಡುತ್ತಾ ಬಂದಿದ್ದಾರೆ. 

ದೆಹಲಿಯ ಹೆಸರು ಬದಲಾವಣೆ – ಇಂದ್ರಪ್ರಸ್ಥ ಪ್ರಸ್ತಾವನೆಗೆ ಭಾರಿ ಚರ್ಚೆ!!
ದೆಹಲಿಯ ಹೆಸರು ಬದಲಾವಣೆ – ಇಂದ್ರಪ್ರಸ್ಥ ಪ್ರಸ್ತಾವನೆಗೆ ಭಾರಿ ಚರ್ಚೆ!!

ಇಂದ್ರಪ್ರಸ್ಥ ಎಂಬ ಹೆಸರು ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ನೆನಪಿಸುತ್ತದೆ. ವಿದೇಶಿ ಆಡಳಿತಗಾರರು ಬಿಟ್ಟುಹೋದ ನೆನಪುಗಳಿಂದ ಮುಕ್ತವಾಗಿ, ಭಾರತದ ನಿಜವಾದ ಚರಿತ್ರೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ದೆಹಲಿಯನ್ನು ಇಂದ್ರಪ್ರಸ್ಥವಾಗಿ ಬದಲಿಸುವುದು ಅಗತ್ಯ ಎಂಬುದು ಬೆಂಬಲಿಗರ ವಾದವಾಗಿದೆ. ದೆಹಲಿಯ ಹೆಸರು ಬದಲಿಸುವ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಭಾರತದ ಹಳೆಯ ಸಂಸ್ಕೃತಿಯನ್ನು ಮತ್ತೆ ತರಲು ಮತ್ತು ಇಂದಿನ ಯುವಕರಿಗೆ ಸರಿಯಾದ ಇತಿಹಾಸ ತಿಳಿಸಲು ಈ ಬದಲಾವಣೆ ಅವಶ್ಯಕ ಎಂಬುದು ಇದರ ಬೆಂಬಲಿಗರ ವಾದ. 

ಮರುನಾಮಕರಣದ ಪ್ರಕ್ರಿಯೆಯು ಹಲವಾರು ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೇಂದ್ರವು ಈ ಪ್ರಸ್ತಾವನೆಯನ್ನು ಕೇವಲ ಪರಿಶೀಲನೆಯ ಹಂತದಲ್ಲಿಟ್ಟಿದ್ದು, ಇನ್ನೂ ಅಧಿಕೃತ ಮುದ್ರೆ ಒತ್ತಿಲ್ಲ. ಸಂಸತ್ತಿನ ಉಭಯ ಸದನಗಳ ಒಮ್ಮತ ಮತ್ತು ವಿವಿಧ ಇಲಾಖೆಗಳ ಅನುಮೋದನೆ ಸಿಕ್ಕಾಗ ಮಾತ್ರ ದೆಹಲಿಯು ಅಧಿಕೃತವಾಗಿ ಇಂದ್ರಪ್ರಸ್ಥವಾಗಲು ಸಾಧ್ಯ.

ದೆಹಲಿಯ ಇತಿಹಾಸ ಕೇವಲ ಒಂದು ಕಾಲಕ್ಕೆ ಸೇರಿದ್ದಲ್ಲ, ಅದು ಮೌರ್ಯರಿಂದ ಬ್ರಿಟಿಷರವರೆಗೆ ಹರಡಿಕೊಂಡಿದೆ, ಇಷ್ಟು ದೊಡ್ಡ ಇತಿಹಾಸವಿರುವ ನಗರದ ಹೆಸರನ್ನು ಬದಲಾಯಿಸಿ ಒಂದು ಕಾಲಘಟ್ಟಕ್ಕೆ ಸೀಮಿತಗೊಳಿಸುವುದು ಸೂಕ್ತವಲ್ಲ ಎನ್ನುವುದು ಇನ್ನೂ ಹಲವರ ಪ್ರಬಲ ನಿಲುವಾಗಿದೆ. ಗುಲಾಮಗಿರಿಯ ಕಹಿ ನೆನಪುಗಳನ್ನು ಇತಿಹಾಸದ ಪುಟಗಳಿಂದ ಅಳಿಸಿ, ನಮ್ಮ ಮಣ್ಣಿನ ಭವ್ಯ ಇತಿಹಾಸವನ್ನು ಮತ್ತೆ ಅನಾವರಣಗೊಳಿಸುವುದು ಈ ಬದಲಾವಣೆಯ ಹಿಂದಿನ ಮೂಲ ಸಂಕಲ್ಪವಾಗಿದೆ. ಹೆಸರು ಬದಲಿಸುವುದರಿಂದ ದೆಹಲಿಯ ಜನರಿಗೆ ಯಾವುದೇ ನೇರ ಪ್ರಯೋಜನವಿಲ್ಲ ಎನ್ನುವುದು ಹಲವರ ಅನಿಸಿಕೆ. ಅದರ ಬದಲು, ನಗರದಲ್ಲಿರುವ ಮಾಲಿನ್ಯ ಮತ್ತು ಜನಸಂದಣಿಯಂತಹ ಗಂಭೀರ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂಬುದು ಜನರ ಇಂದಿನ ತುರ್ತು ಬೇಡಿಕೆಯಾಗಿದೆ.

ಮರುನಾಮಕರಣದ ಪ್ರಕ್ರಿಯೆಯು ಹಲವಾರು ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೇಂದ್ರವು ಈ ಪ್ರಸ್ತಾವನೆಯನ್ನು ಕೇವಲ ಪರಿಶೀಲನೆಯ ಹಂತದಲ್ಲಿಟ್ಟಿದ್ದು, ಇನ್ನೂ ಅಧಿಕೃತ ಮುದ್ರೆ ಒತ್ತಿಲ್ಲ. ಸಂಸತ್ತಿನ ಉಭಯ ಸದನಗಳ ಒಮ್ಮತ ಮತ್ತು ವಿವಿಧ ಇಲಾಖೆಗಳ ಅನುಮೋದನೆ ಸಿಕ್ಕಾಗ ಮಾತ್ರ ದೆಹಲಿಯು ಅಧಿಕೃತವಾಗಿ ಇಂದ್ರಪ್ರಸ್ಥವಾಗಲು ಸಾಧ್ಯ.

Latest News