Apr 21, 2026 Languages : ಕನ್ನಡ | English

ಅತಿ ಭ್ರಷ್ಟ ದೇಶ ಯಾವುದು? ಭಾರತಕ್ಕೆ ಯಾವ ಸ್ಥಾನ? ಇಲ್ಲಿದೆ ನೊಡಿ!!

ಜಗತ್ತಿನ ವಿವಿಧ ದೇಶಗಳಲ್ಲಿ ಭ್ರಷ್ಟಾಚಾರದ ಮಟ್ಟವನ್ನು ಅಳೆಯುವ ಜಾಗತಿಕ ಭ್ರಷ್ಟಾಚಾರ ಪರಿಕಲ್ಪನಾ ಸೂಚ್ಯಂಕ (CPI) 2025 ಅನ್ನು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಒಟ್ಟು 182 ದೇಶಗಳನ್ನು ಒಳಗೊಂಡಿದ್ದು, ಭಾರತ ಈ ವರ್ಷ 91ನೇ ಸ್ಥಾನ ಪಡೆದುಕೊಂಡಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿ – ಭಾರತ 39 ಅಂಕಗಳೊಂದಿಗೆ 91ನೇ ಸ್ಥಾನ
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿ – ಭಾರತ 39 ಅಂಕಗಳೊಂದಿಗೆ 91ನೇ ಸ್ಥಾನ

ಕಳೆದ ವರ್ಷದೊಂದಿಗೆ ಹೋಲಿಸಿದರೆ, ಭಾರತ ಭ್ರಷ್ಟಾಚಾರ ನಿಯಂತ್ರಣದಲ್ಲಿ ಸ್ವಲ್ಪ ಮುನ್ನಡೆ ಸಾಧಿಸಿದೆ. 2024ರಲ್ಲಿ ಭಾರತ 96ನೇ ಸ್ಥಾನದಲ್ಲಿತ್ತು, ಈಗ ಐದು ಸ್ಥಾನ ಮೇಲೇರಿದೆ. ಅಷ್ಟೇ ಅಲ್ಲದೆ, ಅಂಕಗಳಲ್ಲಿಯೂ ಸುಧಾರಣೆ ಕಂಡಿದೆ. 2024ರಲ್ಲಿ 100 ಅಂಕಗಳ ಪೈಕಿ 38 ಅಂಕ ಪಡೆದಿದ್ದ ಭಾರತ, ಈ ವರ್ಷ 39 ಅಂಕ ಗಳಿಸಿದೆ. ಇದು ಚಿಕ್ಕ ಬದಲಾವಣೆಯಾದರೂ, ಒಳ್ಳೆಯ ಬೆಳವಣಿಗೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಅಭಿಪ್ರಾಯಪಟ್ಟಿದೆ.

ಈ ವರದಿ ಪ್ರಕಾರ, ಭ್ರಷ್ಟಾಚಾರ ಇನ್ನೂ ಜಗತ್ತಿನ ಬಹುತೇಕ ದೇಶಗಳಿಗೆ ದೊಡ್ಡ ಸವಾಲಾಗಿ ಉಳಿದಿದೆ. ಆದರೆ ಕೆಲ ರಾಷ್ಟ್ರಗಳಲ್ಲಿ ನಿಯಂತ್ರಣ ಸಾಧಿಸುವ ಪ್ರಯತ್ನಗಳು ಫಲ ನೀಡುತ್ತಿರುವುದು ಸಕಾರಾತ್ಮಕ ಅಂಶವಾಗಿದೆ. ವಿಶೇಷವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಕ್ರಮಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಸಾರ್ವಜನಿಕರ ಆಕ್ರೋಶ ಮತ್ತು ಒತ್ತಡದಿಂದಾಗಿ ಕೆಲ ದೇಶಗಳಲ್ಲಿ ಅಲ್ಪ ಮಟ್ಟದ ಸುಧಾರಣೆ ಕಂಡುಬಂದಿದೆ ಎಂದು ವರದಿ ಹೇಳುತ್ತದೆ.

ಅತ್ಯಂತ ಸ್ವಚ್ಛ ದೇಶಗಳು
ಭ್ರಷ್ಟಾಚಾರ ಅತಿ ಕಡಿಮೆ ಇರುವ ದೇಶಗಳ ಪಟ್ಟಿಯಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ. ಹಲವು ವರ್ಷಗಳಿಂದ ಡೆನ್ಮಾರ್ಕ್ ಈ ಸ್ಥಾನವನ್ನು ಕಾಯ್ದುಕೊಂಡಿದೆ. ನಂತರದ ಸ್ಥಾನಗಳಲ್ಲಿ ಫಿನ್‌ಲ್ಯಾಂಡ್ ಮತ್ತು ಸಿಂಗಾಪುರ ಇದ್ದವೆ.

ಅತ್ಯಂತ ಭ್ರಷ್ಟ ದೇಶಗಳು
ಇನ್ನೊಂದೆಡೆ, ದಕ್ಷಿಣ ಸುಡಾನ್ ವಿಶ್ವದಲ್ಲೇ ಅತಿ ಹೆಚ್ಚು ಭ್ರಷ್ಟ ದೇಶವೆಂದು ಗುರುತಿಸಲಾಗಿದೆ. ಇದರ ಜೊತೆಗೆ ಸೊಮಾಲಿಯಾ ಮತ್ತು ವೆನೆಜುವೆಲಾ ಕೂಡ ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿವೆ.

ಇತರೆ ಪ್ರಮುಖ ದೇಶಗಳ ಸ್ಥಾನ
ವಿಶ್ವದ ಅತಿ ಶ್ರೀಮಂತ ರಾಷ್ಟ್ರವಾದ ಅಮೆರಿಕ 29ನೇ ಸ್ಥಾನ, ಇಂಗ್ಲೆಂಡ್ 20ನೇ ಸ್ಥಾನ ಪಡೆದಿವೆ. ಭಾರತದ ನೆರೆಯ ರಾಷ್ಟ್ರಗಳಲ್ಲಿ ಪಾಕಿಸ್ತಾನ 135, ಶ್ರೀಲಂಕಾ 121, ಮತ್ತು ಚೀನಾ 76ನೇ ಸ್ಥಾನದಲ್ಲಿವೆ.

ಸಿಪಿಐ ಅಂಕಗಳ ಅರ್ಥ
ಸಿಪಿಐಯಲ್ಲಿ 0 ಅಂಕ ಅತಿ ಭ್ರಷ್ಟ, 100 ಅಂಕ ಅತಿ ಸ್ವಚ್ಛ ದೇಶ ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡದ ಪ್ರಕಾರ ಭಾರತ ಇನ್ನೂ ಸಾಕಷ್ಟು ಸುಧಾರಣೆ ಮಾಡಬೇಕಿದೆ ಎಂಬ ಸಂದೇಶವನ್ನು ತಿಳಿಸಲಿದೆ.

Latest News