Feb 16, 2026 Languages : ಕನ್ನಡ | English

ರಾಯ್ ನಿಧನದ ಬೆನ್ನಲ್ಲೇ ಗಂಭೀರ ಅನುಮಾನ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್ - ಪ್ರಕರಣದಲ್ಲಿ ಹೊಸ ತಿರುವು!!

ಉದ್ಯಮಿ ಸಿ.ಜೆ. ರಾಯ್ ಆತ್ಮ*ತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. “ರಾಯ್ ಅವರೇ ಗುಂಡು ಹೊಡೆದುಕೊಂಡರಾ? ಅಥವಾ ಯಾರಾದರೂ ಗುಂಡು ಹೊಡೆದರಾ?” ಎಂಬ ಪ್ರಶ್ನೆಯನ್ನು ಅವರು ಸಾರ್ವಜನಿಕವಾಗಿ ಎತ್ತಿದ್ದಾರೆ.

ಸಿಜೆ ರಾಯ್ ಗೆ ಯಾರಾದ್ರು ಗುಂಡು ಹೊಡೆದ್ರಾ ಎಂದು ಪ್ರಶ್ನಿಸಿದ ಪ್ರದೀಪ್ ಈಶ್ವರ್?
ಸಿಜೆ ರಾಯ್ ಗೆ ಯಾರಾದ್ರು ಗುಂಡು ಹೊಡೆದ್ರಾ ಎಂದು ಪ್ರಶ್ನಿಸಿದ ಪ್ರದೀಪ್ ಈಶ್ವರ್?

ಅನುಮಾನಗಳ ಹುತ್ತ

ಪ್ರದೀಪ್ ಈಶ್ವರ್ ಅವರ ಪ್ರಕಾರ, ಆತ್ಮ*ತ್ಯೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಅಲ್ಲಿ ಇದ್ದವರು ಐಟಿ ಅಧಿಕಾರಿಗಳು ಮಾತ್ರ. ಒಳಗಡೆ ಏನಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ಆರೋಪಿಸಿದಂತೆ, ಬಿಜೆಪಿ ನಾಯಕರು ಚುನಾವಣೆಗೆ ನೂರಾರು ಕೋಟಿ ಹಣ ಕೇಳಿದ್ದರು. ಆ ಹಣ ನೀಡದಿದ್ದ ಕಾರಣ ಸಿ.ಜೆ. ರಾಯ್ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ

ಪ್ರದೀಪ್ ಈಶ್ವರ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಇಂತಹ ಭ್ರಷ್ಟ ಬಿಜೆಪಿಯಿಂದ ದೇಶ ಅಭಿವೃದ್ಧಿ ಆಗುವುದಿಲ್ಲ” ಎಂದು ಹೇಳಿದ್ದಾರೆ. “ಅಶೋಕಣ್ಣ, ಸುನೀಲಣ್ಣ, ಯತ್ನಾಳ್, ಮೈಸೂರಿನ ಒಂದು ಕೋತಿ ಎಲ್ಲದಕ್ಕೂ ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಈ ಪ್ರಕರಣದ ಬಗ್ಗೆ ಯಾಕೆ ಯಾರೂ ಬಾಯಿ ಬಿಡುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.

ಕಿರುಕುಳದ ಆರೋಪ

ಸಿ.ಜೆ. ರಾಯ್ ಅವರಿಗೆ ಯಾವುದೇ ಸಾಲ ಇಲ್ಲ, ಆರ್ಥಿಕ ಸಮಸ್ಯೆಯೂ ಇರಲಿಲ್ಲ. ಆದರೆ ಕಳೆದ ಒಂದು ತಿಂಗಳಿನಿಂದ ಐಟಿ ಇಲಾಖೆ ನಿರಂತರ ಕಿರುಕುಳ ನೀಡುತ್ತಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಇದೇ ಕಿರುಕುಳವೇ ಆತ್ಮ*ತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಬೇಡಿಕೆ

ಕೇಂದ್ರದಲ್ಲಿ ಬಿಜೆಪಿ ಇದ್ದರೆ ಇದೇ ರೀತಿಯ ಕಿರುಕುಳ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. “ಸಿಬಿಐ ತನಿಖೆಗೆ ಕೊಟ್ಟರೆ ಅದೂ ಅವರ ಕೈಯಲ್ಲೇ ಇದೆ, ನ್ಯಾಯ ಸಿಗುವುದಿಲ್ಲ. ಆದ್ದರಿಂದ ಎಸ್ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು” ಎಂದು ಅವರು ಹೇಳಿದ್ದಾರೆ.

ರಾಜಕೀಯ ಬಣ್ಣ ಪಡೆದ ಪ್ರಕರಣ

ಕನಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಪ್ರದೀಪ್ ಈಶ್ವರ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಸಿ.ಜೆ. ರಾಯ್ ಆತ್ಮ*ತ್ಯೆ ಪ್ರಕರಣ ಈಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಎಸ್ಐಟಿ ತನಿಖೆ ನಡೆಯಬೇಕೆಂಬ ಬೇಡಿಕೆ ಗಟ್ಟಿಯಾಗಿ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

Latest News