ಕಾಕ್ರೋಚ್ ಹಾವಳಿಗೆ ಬ್ರೇಕ್ ಹಾಕಲು ಬಂದ 'ಲಕ್ಷ್ಮಣರೇಖೆ' - ಬಾಳೆಹೊನ್ನೂರಿನ ಜಗದೀಶ್ಚಂದ್ರ ಈಗ 'ಹಿಟ್ ಪಾರ್ಟಿ' ರಾಷ್ಟ್ರೀಯ ಅಧ್ಯಕ್ಷ!!

ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಯಾವ ರೇಂಜ್‌ಗೆ ಮೀಮ್ಸ್ ಮತ್ತು ಟ್ರೆಂಡ್‌ಗಳು ರನ್ ಆಗ್ತಿವೆ ಅಂದ್ರೆ, ಯಾರಿಗೆ ಯಾವಾಗ ಯಾವ ವಿಷಯದ ಮೇಲೆ ಕ್ರೇಜ್ ಹುಟ್ಟಿಕೊಳ್ಳುತ್ತೆ ಅಂತ ಹೇಳೋಕೇ ಆಗಲ್ಲ. ಇತ್ತೀಚೆಗೆ ದೇಶಾದ್ಯಂತ 'ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ' ಅಂದರೆ ಜಿರಲೆಗಳ ಪಕ್ಷ ಸಖತ್ ಟ್ರೆಂಡಿಂಗ್‌ನಲ್ಲಿತ್ತು. ಇದನ್ನು ನೋಡಿ ಸುಮ್ಮನಿರದ ನಮ್ಮ ಚಿಕ್ಕಮಗಳೂರಿನ ಮಲೆನಾಡಿಗರು, ಆ ಜಿರಲೆ ಪಕ್ಷಕ್ಕೆ ಸರಿಯಾಗಿ ಕೌಂಟರ್ ಕೊಡಲು ಒಂದು ಸೂಪರ್ ಕೌಂಟರ್ ಪಕ್ಷವನ್ನೇ ಹುಟ್ಟುಹಾಕಿದ್ದಾರೆ! ಅದೇ ನಮ್ಮ 'ಲಕ್ಷ್ಮಣರೇಖೆ ಹಾಗೂ ಹಿಟ್ (HIT) ಪಕ್ಷ'!

ಜಿರಲೆ ಪಾರ್ಟಿಗೆ ಕೌಂಟರ್ ಕೊಡಲು ಹುಟ್ಟಿಕೊಳ್ತು 'ಹಿಟ್ (HIT) ಪಕ್ಷ
ಜಿರಲೆ ಪಾರ್ಟಿಗೆ ಕೌಂಟರ್ ಕೊಡಲು ಹುಟ್ಟಿಕೊಳ್ತು 'ಹಿಟ್ (HIT) ಪಕ್ಷ

ಹೌದು, ಕೇಳೋಕೆ ಸಖತ್ ಫನ್ನಿಯಾಗಿದ್ದರೂ, ಈಗ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಈ ಕೌಂಟರ್ ಪಕ್ಷದ ಜನ್ಮವಾಗಿದ್ದು, ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.

ಹಿಟ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜಗದೀಶ್ಚಂದ್ರ ಆಯ್ಕೆ!

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ಎಂಬುವವರು ಈ ವಿಭಿನ್ನ 'ಹಿಟ್ ಪಕ್ಷ'ದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಕ್ರೋಚ್ ಪಾರ್ಟಿಯ ಹಾವಳಿ ತಡೆಯಲು ತಾವೇ ಸ್ವತಃ ಮುಂದೆ ಬಂದು ಈ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

ವಿಶೇಷ ಅಂದ್ರೆ, ಈ ಪಕ್ಷ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಈ 'ಹಿಟ್ ಪಾರ್ಟಿ'ಯನ್ನು ಫಾಲೋ ಮಾಡಲು ಸ್ಟಾರ್ಟ್ ಮಾಡಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಸೇರಿದಂತೆ ಎಲ್ಲಾ ಕಡೆ ಈಗ ಜಿರಲೆ ಪಕ್ಷ ವರ್ಸಸ್ ಹಿಟ್ ಪಕ್ಷದ ವಾರ್ ಜೋರಾಗಿ ನಡೀತಿದೆ.

'ಜಿರಲೆಗಳಿಗೆ ನಾವ್ಯಾರು ಹೆದರುವುದಿಲ್ಲ': ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೆಂಡಿಂಗ್!

ಈ ಕೌಂಟರ್ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಕ್ಯಾಂಪೇನ್ ಶುರು ಮಾಡಿದ್ದಾರೆ. "ಜಿರಲೆಗಳಿಗೆ ನಾವ್ಯಾರು ಹೆದರುವುದಿಲ್ಲ" ಎಂಬ ಹೊಸ ಟ್ರೆಂಡಿಂಗ್ ಲೈನ್ ಈಗ ಎಲ್ಲೆಡೆ ಸೌಂಡ್ ಮಾಡ್ತಿದೆ.

ಇದರ ಜೊತೆಗೆ ಹಿಟ್ ಪಾರ್ಟಿಯ ಪದಾಧಿಕಾರಿಗಳು ಕೆಲವು ಪ್ರಮುಖ ಗೈಡ್‌ಲೈನ್ಸ್‌ಗಳನ್ನು ಕೂಡ ರಿಲೀಸ್ ಮಾಡಿದ್ದಾರೆ:

  • ಸೋಶಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಪಾರ್ಟಿ ಇರುವಷ್ಟು ದಿನವೂ ನಮ್ಮ 'ಹಿಟ್' ಕಾರ್ಯಕರ್ತರು ಅಲರ್ಟ್ ಆಗಿರಬೇಕು.
  • ಎಲ್ಲೇ ಜಿರಲೆಗಳು ಎಂಟ್ರಿ ಕೊಟ್ಟರೂ ತಕ್ಷಣವೇ 'ಹಿಟ್' ಸ್ಪ್ರೇ ಅಥವಾ 'ಲಕ್ಷ್ಮಣರೇಖೆ' ಸೀಮೆಸುಣ್ಣ ಬಳಸಿ ಅವುಗಳನ್ನು ಶಮನ ಮಾಡಲು ಸಿದ್ಧರಿರಬೇಕು.
  • ಮನೆ ಇರಲಿ, ಹೊರಗಡೆ ಇರಲಿ, ಜಿರಲೆಗಳ ಕಾಟಕ್ಕೆ ನಮ್ಮ ಹತ್ತಿರ ಪಕ್ಕಾ ಅಸ್ತ್ರಗಳಿವೆ ಅಂತ ಧೈರ್ಯ ತುಂಬುತ್ತಿದ್ದಾರೆ.

ಮಲೆನಾಡಿನ ಹೊಸ ಸ್ಟೈಲ್ ಕ್ರೇಜ್: ರಾಜಕೀಯದ ಸೀರಿಯಸ್ ವಿಷಯಗಳ ಮಧ್ಯೆ, ಇಂತಹ ಮಜಾವಾದ ಟ್ರೆಂಡ್‌ಗಳು ಜನರಿಗೆ ಸಖತ್ ಎಂಟರ್ಟೈನ್‌ಮೆಂಟ್ ನೀಡುತ್ತಿವೆ. ಬಾಳೆಹೊನ್ನೂರಿನ ಜಗದೀಶ್ಚಂದ್ರ ಅವರ ಈ ಐಡಿಯಾಕ್ಕಂತೂ ನೆಟ್ಟಿಗರು ಫಿದಾ ಆಗಿದ್ದಾರೆ.

ದೇಶಾದ್ಯಂತ ಜಿರಲೆಗಳ ಪಾರ್ಟಿ ಹವಾ ಇರೋ ಟೈಮ್‌ನಲ್ಲೇ, ಅದಕ್ಕೆ ಟಕ್ಕರ್ ಕೊಡಲು ಕಾಫಿನಾಡಿನಿಂದಲೇ 'ಲಕ್ಷ್ಮಣರೇಖೆ-ಹಿಟ್' ಅಸ್ತ್ರ ಹಿಡಿದು ಜನ ರೆಡಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಎರಡೂ 'ಪಾರ್ಟಿ'ಗಳ ನಡುವಿನ ಸೋ

Latest News