Apr 26, 2026 Languages : ಕನ್ನಡ | English

ಕನ್ನಡ ಬರುತ್ತೆ ತಾನೇ ಎಂದು ಸ್ಟ್ರೀಟ್ ಫೋಟೋಗ್ರಾಫರ್ ಗೆ ಚಳಿ ಬಿಡಿಸಿದ ಕನ್ನಡತಿಯರು!! ಬಾರಿ ವೈರಲ್

ಬೆಂಗಳೂರು ನಗರದ ಕೆ.ಆರ್ ಮಾರ್ಕೆಟ್‌ನಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಇದು ಕರ್ನಾಟಕ.. ಕನ್ನಡವೇ ಸಾರ್ವಭೌಮ” ಎಂದು ಯುವತಿಯರು ಒತ್ತಿ ಹೇಳಿದ ವಿಡಿಯೋ ಜನರಲ್ಲಿ ಚರ್ಚೆಗೆ ಕಾರಣವಾಗಿದೆ.

ಸ್ಟ್ರೀಟ್ ಫೋಟೋಗ್ರಾಫರ್ ಇಂಗ್ಲಿಷ್ ಮಾತಿಗೆ ಯುವತಿಯರ ಕಿಡಿ
ಸ್ಟ್ರೀಟ್ ಫೋಟೋಗ್ರಾಫರ್ ಇಂಗ್ಲಿಷ್ ಮಾತಿಗೆ ಯುವತಿಯರ ಕಿಡಿ

ಸ್ಟ್ರೀಟ್ ಫೋಟೋಗ್ರಾಫರ್ ಯುವತಿಯರ ಬಳಿ ಹೋಗಿ, “I am a street photographer.. Can I click your photos?” ಎಂದು ಇಂಗ್ಲಿಷ್‌ನಲ್ಲಿ ಕೇಳಿದ್ದ. ಇದನ್ನು ಕೇಳಿದ ಯುವತಿಯರು ತಕ್ಷಣ ಪ್ರತಿಕ್ರಿಯಿಸಿ, “ಕನ್ನಡ ಬರುತ್ತಾ?” ಎಂದು ಪ್ರಶ್ನಿಸಿದರು.

ಫೋಟೋಗ್ರಾಫರ್ “ಬರುತ್ತೆ” ಎಂದು ಉತ್ತರಿಸಿದರೂ, ಮುಂದುವರಿದು ಇಂಗ್ಲಿಷ್‌ನಲ್ಲಿ ಮಾತನಾಡಲು ಯತ್ನಿಸಿದಾಗ ಯುವತಿಯರು ಗರಂ ಆಗಿ, “ಕನ್ನಡದಲ್ಲಿ ಮಾತಾಡು ಗುರು” ಎಂದು ಕಿಡಿ ಉಗಿದರು.

ಯುವತಿಯರು “ಕನ್ನಡ ಗೊತ್ತಿದ್ದರೂ ಕನ್ನಡದಲ್ಲಿ ಮಾತಾಡದೆ, ಇಂಗ್ಲಿಷ್‌ನಲ್ಲಿ ಪೋಸ್ ಕೊಡೋದು ಏಕೆ? ಇದು ಕರ್ನಾಟಕ, ಇಲ್ಲಿ ಕನ್ನಡವೇ ಸಾರ್ವಭೌಮ” ಎಂದು ಸ್ಪಷ್ಟವಾಗಿ ಹೇಳಿದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವರು ಯುವತಿಯರ ಧೈರ್ಯವನ್ನು ಮೆಚ್ಚಿ, “ಕನ್ನಡದ ಹಕ್ಕು ಉಳಿಸಲು ಇಂತಹ ಪ್ರತಿಕ್ರಿಯೆಗಳು ಅಗತ್ಯ” ಎಂದು ಕಾಮೆಂಟ್ ಮಾಡಿದ್ದಾರೆ.

ಕೆ.ಆರ್ ಮಾರ್ಕೆಟ್‌ನಲ್ಲಿ ನಡೆದ ಈ ಘಟನೆ ಕನ್ನಡದ ಪ್ರಾಮುಖ್ಯತೆಯನ್ನು ನೆನಪಿಸುವಂತಾಗಿದೆ. ಕನ್ನಡ ಗೊತ್ತಿದ್ದರೂ ಕನ್ನಡದಲ್ಲಿ ಮಾತನಾಡದವರ ವಿರುದ್ಧ ಯುವತಿಯರು ತೋರಿದ ಗರಂ ಜನರಲ್ಲಿ ಚರ್ಚೆಗೆ ಕಾರಣವಾಗಿದೆ. ವಿಡಿಯೋ ವೈರಲ್ ಆಗಿರುವುದರಿಂದ, ಕನ್ನಡದ ಗೌರವ ಉಳಿಸುವ ಹೋರಾಟಕ್ಕೆ ಮತ್ತೊಂದು ಉದಾಹರಣೆ ಸಿಕ್ಕಂತಾಗಿದೆ. 

Latest News