ನಮ್ಮ ಬೆಂಗಳೂರು ಡಿಜಿಟಲ್ ವ್ಯವಹಾರದಲ್ಲಿ ನಂಬರ್ ಒನ್. ಟೀ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ವರೆಗೆ ಎಲ್ಲೂ ಈಗ ನಗದು ವ್ಯವಹಾರ ಅಷ್ಟಾಗಿ ನಡೆಯುತ್ತಿಲ್ಲ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಈಗ ಹೊಸ ರೀತಿಯ 'ಡಿಜಿಟಲ್ ಪೇಮೆಂಟ್ ಸ್ಕ್ಯಾಮ್' ಶುರು ಮಾಡಿದ್ದಾರೆ. ಇತ್ತೀಚೆಗೆ ಮರಾಠಹಳ್ಳಿಯ ಜನಪ್ರಿಯ ಕ್ಯಾಫೆಯೊಂದರಲ್ಲಿ ನಡೆದ ಘಟನೆ ಕೇಳಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!
ಏನಿದು ಫೇಕ್ ಆ್ಯಪ್ ಕಿರಿಕಿರಿ?
ಮರಾಠಹಳ್ಳಿಯ ಕ್ಯಾಫೆಯೊಂದಕ್ಕೆ ಬಂದ ವ್ಯಕ್ತಿಯೊಬ್ಬ ಫುಡ್ ಆರ್ಡರ್ ಮಾಡಿದ್ದಾನೆ. ತಿಂದು ಮುಗಿಸಿದ ಮೇಲೆ ಪೇಮೆಂಟ್ ಮಾಡೋ ನಾಟಕವಾಡಿದ್ದಾನೆ. ಇವನ ಹತ್ತಿರ ಇದ್ದದ್ದು ಅಸಲಿ 'ಫೋನ್-ಪೇ' ಆ್ಯಪ್ ಅಲ್ಲ, ಬದಲಾಗಿ ಅದನ್ನೇ ಹೋಲುವ ಒಂದು ನಕಲಿ (Fake) ಆ್ಯಪ್. ಅವನು ಸ್ಕ್ಯಾನ್ ಮಾಡಿ ಮೊತ್ತ ಎಂಟರ್ ಮಾಡಿದ ತಕ್ಷಣ, ಆ್ಯಪ್‌ನಲ್ಲಿ "Payment Successful" ಅಂತ ದೊಡ್ಡದಾಗಿ ಮೆಸೇಜ್ ಬಂದಿದೆ.
ಕ್ಯಾಫೆ ಸಿಬ್ಬಂದಿಗೆ ಆ ಸ್ಕ್ರೀನ್ ತೋರಿಸಿದ ಖದೀಮ, ಅಷ್ಟಕ್ಕೆ ನಿಲ್ಲಿಸದೆ "ನನ್ನ ಹತ್ತಿರ ಕ್ಯಾಶ್ ಇಲ್ಲ, ನಿಮ್ಮ ಆ್ಯಪ್‌ಗೆ ಇನ್ನೂ 500 ರೂಪಾಯಿ ಜಾಸ್ತಿ ಕಳಿಸ್ತೀನಿ, ನನಗೆ ಕ್ಯಾಶ್ ಕೊಡಿ" ಅಂತ ಹೇಳಿ ಅಲ್ಲಿಂದ ಹಣವನ್ನೂ ಇಸ್ಕೊಂಡು ಪರಾರಿಯಾಗಿದ್ದಾನೆ.
🚨 Payment fraud alert in Bangalore!
— ಸನಾತನ (सनातन) (@sanatan_kannada) April 17, 2026
A man was caught in Marathalli using a spoof PhonePe app to fake payments at a cafe. He shows a fake transaction on his phone after requesting money from the staff.
This is reportedly part of a gang operating across many cafes and stores in… pic.twitter.com/ai8c9MN235
ಮೋಸ ನಡೆಯೋದು ಹೇಗೆ?
ಕ್ಯಾಫೆ ಸಿಬ್ಬಂದಿ ಕೆಲಸದ ಒತ್ತಡದಲ್ಲಿ ಕೇವಲ ಕಸ್ಟಮರ್ ತೋರಿಸುವ ಮೊಬೈಲ್ ಸ್ಕ್ರೀನ್ ನೋಡಿ ಪೇಮೆಂಟ್ ಆಗಿದೆ ಅಂದುಕೊಳ್ಳುತ್ತಾರೆ. ಆದರೆ ಅಸಲಿಗೆ ಶಾಪ್ ಮಾಲೀಕರ ಬ್ಯಾಂಕ್ ಅಕೌಂಟ್‌ಗೆ ಒಂದು ರೂಪಾಯಿಯೂ ಜಮೆಯಾಗಿರುವುದಿಲ್ಲ. ಇಂತಹ ವಂಚಕರು ಈಗ ಗುಂಪು ಗುಂಪಾಗಿ ಕೆಫೆಗಳು, ಸಣ್ಣ ಅಂಗಡಿಗಳು ಮತ್ತು ಬೇಕರಿಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಪೀಕ್ ಅವರ್‌ಗಳಲ್ಲಿ ಸಿಬ್ಬಂದಿಗೆ ಪ್ರತಿಯೊಂದು ಪೇಮೆಂಟ್ ಚೆಕ್ ಮಾಡೋಕೆ ಟೈಮ್ ಇರಲ್ಲ ಅನ್ನೋದೇ ಇವರ ಪ್ಲಸ್ ಪಾಯಿಂಟ್!
ವ್ಯಾಪಾರಿಗಳೇ, ಈ ಸ್ಕ್ಯಾಮ್‌ನಿಂದ ಪಾರಾಗೋದು ಹೇಗೆ?
ಡಿಜಿಟಲ್ ಪೇಮೆಂಟ್ ಸುಲಭ ಹೌದು, ಆದರೆ ಸ್ವಲ್ಪ ಯಾಮಾರಿದರೂ ಅಕೌಂಟ್ ಖಾಲಿಯಾಗೋದು ಗ್ಯಾರಂಟಿ. ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ:
ಸೌಂಡ್ ಬಾಕ್ಸ್ ಬಳಸಿ: ಪೇಮೆಂಟ್ ಆದ ತಕ್ಷಣ ಧ್ವನಿ ಮೂಲಕ ಖಚಿತಪಡಿಸುವ 'ಸೌಂಡ್ ಬಾಕ್ಸ್' (Sound Box) ಇಟ್ಟುಕೊಳ್ಳುವುದು ಅತ್ಯಂತ ಸುರಕ್ಷಿತ.
ಡ್ಯಾಶ್‌ಬೋರ್ಡ್ ಚೆಕ್ ಮಾಡಿ: ಕಸ್ಟಮರ್ ಮೊಬೈಲ್ ಸ್ಕ್ರೀನ್ ನೋಡುವ ಬದಲು, ನಿಮ್ಮ ಮರ್ಚೆಂಟ್ ಆ್ಯಪ್ ಅಥವಾ ಡ್ಯಾಶ್‌ಬೋರ್ಡ್‌ನಲ್ಲಿ ಹಣ ಬಂದಿದೆಯೇ ಎಂದು ಕನ್ಫರ್ಮ್ ಮಾಡಿಕೊಳ್ಳಿ.
ಬ್ಯಾಂಕ್ SMS ನೋಡಿ: ಬ್ಯಾಂಕ್‌ನಿಂದ ಬರುವ ಅಧಿಕೃತ ಎಸ್‌ಎಂಎಸ್ ಅಲರ್ಟ್‌ಗಳನ್ನೇ ನಂಬಿ.
ಸಿಬ್ಬಂದಿಗೆ ಟ್ರೈನಿಂಗ್ ನೀಡಿ: ಗಡಿಬಿಡಿಯಲ್ಲಿ ಕೇವಲ ಸ್ಕ್ರೀನ್ ಶಾಟ್ ನೋಡಿ ನಂಬಬೇಡಿ ಎಂದು ನಿಮ್ಮ ಕೆಲಸಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ.
ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂ ತಂತ್ರಗಳೂ ಬೆಳೆಯುತ್ತಿವೆ. ಅನುಮಾನಾಸ್ಪದವಾಗಿ ವರ್ತಿಸುವವರ ಬಗ್ಗೆ ಕೂಡಲೇ ಪೊಲೀಸರಿಗೆ ದೂರು ನೀಡಿ. ಹಣ ಕಳೆದುಕೊಂಡ ಮೇಲೆ ಸಂಕಟ ಪಡುವ ಬದಲು, ಪೇಮೆಂಟ್ ರಿಸೀವ್ ಮಾಡುವಾಗಲೇ ಒಂದು ಕ್ಷಣ ಎಚ್ಚರ ವಹಿಸುವುದು ಉತ್ತಮ.