ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ದುರಂತ - ಹಾರಲು ಸಿದ್ಧವಾಗಿದ್ದ ವಿಮಾನದಲ್ಲಿ ಹೊಗೆ; ವಿಡಿಯೋ ವೈರಲ್!!

ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ನಿನ್ನೆ ಸಂಜೆ ಭೀಕರ ವಿಮಾನ ದುರಂತವೊಂದಕ್ಕೆ ಸಾಕ್ಷಿಯಾಗುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಟೇಕ್-ಆಫ್ ಆಗಲು ಇನ್ನು ಕೆಲವೇ ಕ್ಷಣಗಳು ಬಾಕಿ ಇವೆ ಎನ್ನುವಾಗ ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಇಡೀ ರನ್‌ವೇಯನ್ನು ರಣರಂಗವಾಗಿಸಿತ್ತು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಇಡೀ ಘಟನೆಯ ಮೈ ನಡುಗಿಸುವ ದೃಶ್ಯಗಳು ಭಾರಿ ವೈರಲ್ ಆಗುತ್ತಿದ್ದು, ವಿಮಾನಯಾನ ಸಂಸ್ಥೆಯ ಸುರಕ್ಷತಾ ಲೋಪಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ರೆಕ್ಕೆ ಮೇಲೆ ಹತ್ತಿ ಜೀವ ಉಳಿಸಿಕೊಂಡ 230 ಪ್ರಯಾಣಿಕರು! | Photo Credit: https://x.com/kannandeepan
ರೆಕ್ಕೆ ಮೇಲೆ ಹತ್ತಿ ಜೀವ ಉಳಿಸಿಕೊಂಡ 230 ಪ್ರಯಾಣಿಕರು! | Photo Credit: https://x.com/kannandeepan

ಕಾಕ್‌ಪಿಟ್‌ನಲ್ಲಿ ದಟ್ಟ ಹೊಗೆ;

ಮಂಗಳವಾರ ಸಂಜೆ ಬೆಂಗಳೂರಿನಿಂದ ತಮಿಳುನಾಡಿನ ಚೆನ್ನೈಗೆ ಹೊರಡಲು ಸಿದ್ಧವಾಗುತ್ತಿದ್ದ ಇಂಡಿಗೋ ಸಂಸ್ಥೆಯ ‘6E 6017’ ವಿಮಾನದಲ್ಲಿ ಈ ತಲ್ಲಣ ಸೃಷ್ಟಿಯಾಗಿದೆ. ವಿಮಾನದಲ್ಲಿ ಬರೋಬ್ಬರಿ 230ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು.

ವಿಮಾನವು ಟೇಕ್-ಆಫ್ ಆಗಲು ರನ್‌ವೇ ಮೇಲೆ ವೇಗವಾಗಿ ಚಲಿಸಲು ಆರಂಭಿಸಿದ ತಕ್ಷಣ, ದಿಢೀರನೆ ಪ್ರಯಾಣಿಕರು ಕೂರುವ ಕ್ಯಾಬಿನ್ ಹಾಗೂ ಪೈಲಟ್‌ಗಳಿರುವ ಕಾಕ್‌ಪಿಟ್ ಒಳಗಡೆ ದಟ್ಟವಾದ ಹೊಗೆ ತುಂಬಿಕೊಳ್ಳಲು ಆರಂಭಿಸಿದೆ. ಹೊಗೆಯ ತೀವ್ರತೆಗೆ ಉಸಿರಾಡಲು ಕಷ್ಟವಾಗಿ ಒಳಗಿದ್ದ ಪ್ರಯಾಣಿಕರು ಗಾಬರಿಯಿಂದ ಚೀರಾಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಪೈಲಟ್ ತಕ್ಷಣವೇ ಇಮರ್ಜೆನ್ಸಿ ಬ್ರೇಕ್ ಹಾಕಿ ವಿಮಾನವನ್ನು ರನ್‌ವೇ ಮಧ್ಯದಲ್ಲೇ ನಿಲ್ಲಿಸಿದ್ದಾರೆ.

ಘಟನೆ ನಡೆದಿದ್ದು ಎಲ್ಲಿ? - ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟೇಕ್-ಆಫ್ ಆಗಲು ಸಿದ್ಧವಾಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಯಾವ ವಿಮಾನ? - ಮಂಗಳವಾರ ಸಂಜೆ ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಾಗಿದ್ದ ಇಂಡಿಗೋ ಸಂಸ್ಥೆಯ ‘6E 6017’ ವಿಮಾನದಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನದಲ್ಲಿ 230ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ರನ್‌ವೇನಲ್ಲಿ ಆತಂಕ - ವಿಮಾನವು ರನ್‌ವೇ ಮೇಲೆ ವೇಗವಾಗಿ ಚಲಿಸಲು ಆರಂಭಿಸಿದ ತಕ್ಷಣ, ದಿಢೀರನೆ ಪ್ಯಾಸೆಂಜರ್ ಕ್ಯಾಬಿನ್ ಹಾಗೂ ಕಾಟ್‌ಪಿಟ್ ಒಳಗಡೆ ದಟ್ಟವಾದ ಹೊಗೆ ತುಂಬಿಕೊಂಡಿದೆ. ಇದರಿಂದಾಗಿ ಉಸಿರಾಡಲು ಕಷ್ಟವಾಗಿ ಪ್ರಯಾಣಿಕರು ಚೀರಾಡಿದ್ದಾರೆ.

ಪೈಲಟ್ ಸಮಯಪ್ರಜ್ಞೆ - ಪರಿಸ್ಥಿತಿ ಕೈಮೀರುತ್ತಿರುವುದನ್ನು ತಕ್ಷಣವೇ ಗಮನಿಸಿದ ಪೈಲಟ್, ಇಮರ್ಜೆನ್ಸಿ ಬ್ರೇಕ್ ಹಾಕಿ ವಿಮಾನವನ್ನು ರನ್‌ವೇ ಮಧ್ಯದಲ್ಲೇ ನಿಲ್ಲಿಸಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಕೈಕೊಟ್ಟ ಸುರಕ್ಷತಾ ಸ್ಲೈಡ್ - ತುರ್ತು ಸ್ಥಳಾಂತರದ ವೇಳೆ ವಿಮಾನದ ಬಲಗಡೆಯ ‘ಇನ್‌ಫ್ಲೇಟಬಲ್ ಸ್ಲೈಡ್’ (ಜಾರು ಮಾರ್ಗ) ಜಾಮ್ ಆಗಿ ಓಪನ್ ಆಗಲೇ ಇಲ್ಲ. ಇದು ವಿಮಾನಯಾನ ಸಂಸ್ಥೆಯ ದೊಡ್ಡ ಸುರಕ್ಷತಾ ವೈಫಲ್ಯವನ್ನು ಬಯಲು ಮಾಡಿದೆ.

ರೆಕ್ಕೆಯ ಮೇಲೆ ಓಡಿದ ಜನರು - ಒಳಗಡೆ ಹೊಗೆ ಜಾಸ್ತಿಯಾಗಿ ಜೀವ ಉಳಿಸಿಕೊಳ್ಳಲೇಬೇಕು ಎಂದು ಹೆದರಿದ ನೂರಾರು ಪ್ರಯಾಣಿಕರು, ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಬಂದು ವಿಮಾನದ ಬಲ ರೆಕ್ಕೆಯ (Wing) ಮೇಲೆಯೇ ಓಡಾಡಲು ಶುರು ಮಾಡಿದ್ದಾರೆ.

ಪ್ರಯಾಣಿಕರ ಆಕ್ರೋಶ - ವಿಮಾನದಲ್ಲಿದ್ದ ದೀಪನ್ ಕ್ವೀಟರ್ ಕಣ್ಣನ್ ಎಂಬುವವರು ಈ ಭಯಾನಕ ದೃಶ್ಯದ ವಿಡಿಯೋವನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, "ಜನರು ರೆಕ್ಕೆಯ ಮೇಲಿಂದ ಕೆಳಗೆ ಬಿದ್ದಿದ್ದರೆ ದೊಡ್ಡ ಅನಾಹುತವೇ ಆಗ್ತಿತ್ತು" ಎಂದು ಇಂಡಿಗೋ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ್ದಾರೆ.

ಇಂಡಿಗೋ ಕಂಪನಿ ಸ್ಪಷ್ಟನೆ - "ಪ್ರಯಾಣಿಕರ ಸುರಕ್ಷತೆಗಾಗಿ ತಕ್ಷಣ ಸ್ಥಳಾಂತರ ಪ್ರಕ್ರಿಯೆ ನಡೆಸಲಾಗಿದ್ದು, ಎಲ್ಲರೂ ಸೇಫ್ ಆಗಿದ್ದಾರೆ. ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ" ಎಂದು ಇಂಡಿಗೋ ತಿಳಿಸಿದೆ. ಆದರೆ ಹೊಗೆ ಬರಲು ಅಸಲಿ ಕಾರಣವೇನು ಎಂಬುದನ್ನು ರಿವೀಲ್ ಮಾಡಿಲ್ಲ.

ಡಿಜಿಸಿಎ ತನಿಖೆಗೆ ಆದೇಶ - ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸದರಿ ವಿಮಾನದ ಹಾರಾಟವನ್ನು ಸದ್ಯಕ್ಕೆ ಬ್ಯಾನ್ (Ground) ಮಾಡಿ ಸಮಗ್ರ ತನಿಖೆಗೆ ಆರ್ಡರ್ ಮಾಡಿದೆ.

Latest News