ಬೆಳಗಾವಿ ಜಿಲ್ಲೆಯ ಮಚ್ಚೆ ಎಂಬ ಗ್ರಾಮದಲ್ಲಿ ನಡೆದ ಘಟನೆ ಕನ್ನಡಿಗರ ಮನಸ್ಸಿಗೆ ಹೆಚ್ಚು ನೋವು ತಂದಿದೆ ಎಂದು ಹೇಳಬಹುದು. ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಗೆ ಕಿಡಿಗೇಡಿಗಳು ಮಸಿ ಬಳಿದ ಘಟನೆ ಊರಿನ ಜನತೆಯಲ್ಲಿ ಅಸಮಾಧಾನ ತಂದಿತು. ಕನ್ನಡ ಪರ ಹೋರಾಟಗಾರರು ತಮ್ಮ ಹೋರಾಟದ ಫಲವಾಗಿ ಈ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಸಂಗೊಳ್ಳಿ ರಾಯಣ್ಣ ಕನ್ನಡ ನೆಲದ ಸ್ವಾತಂತ್ರ್ಯ ಹೋರಾಟ ಪ್ರತೀಕವಾಗಿರುವುದರಿಂದ, ಅವರ ಮೂರ್ತಿಗೆ ಮಸಿ ಬಳಿದ ಕೆಲಸಕ್ಕೆ ಜನರು ಹೆಚ್ಚು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣವೇ ಮಚ್ಛೆ ಎಂಬ ಗ್ರಾಮದಲ್ಲಿ ಜನರು ಸೇರಿ ಪ್ರತಿಭಟನೆ ಮಾಡಿದರು. ಅತ್ತ ನಮ್ಮ ಕನ್ನಡ ಪರ ಹೋರಾಟಗಾರರು ಇದು ಕನ್ನಡಕ್ಕೆ ಹಾಗೂ ಕನ್ನಡ ನೆಲಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ಹೊರ ಹಾಕಿದರು. ಘೋಷಣೆ ಕೂಗಿ ತಮ್ಮ ಹೋರಾಟ ಮುಂದುವರೆಸಿದರು. ನಂತರ ಈ ಕೃತ್ಯಕ್ಕೆ ಕಾರಣವಾದ ಕಿಡಿಗೇಡಿಗಳನ್ನು ಆದಷ್ಟು ಬೇಗನೆ ಬಂಧನಕ್ಕೆ ಒಳಪಡಿಸಿ ಎಂದು ಒತ್ತಾಯ ಮಾಡಿದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಉನ್ನತ ಪೊಲೀಸ್ ಅಧಿಕಾರಿಯಾದ ಕಮೀಷನರ್ ಭೂಷಣ್ ಬೊರಸೆ ಅವ್ರು ಬಂದಿದ್ದು ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿದರು. ಊರಿನಲ್ಲಿ ಶಾಂತತೆಯ ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತ್ ಸಹ ಹಮ್ಮಿಕೊಂಡರು.
ಈ ಘಟನೆ ಅತ್ತ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಊರಿನ ಜನರ ಮನಸ್ಸಿನಲ್ಲಿ ರಾಯಣ್ಣನ ಬಗೆಗಿನ ಅಭಿಮಾನ ಉಕ್ಕಿ ಹರಿದ ಕ್ಷಣ ಕಂಡು ಬಂದವು. ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ನಾವು ಹೋರಾಟದಿಂದ ಪ್ರತಿಷ್ಠಾಪನೆ ಮಾಡಿದ್ದೇವೆ. ಆ ಮೂರ್ತಿಗೆ ಮಸಿ ಬಳಿದರೆ ನಮ್ಮ ಹೋರಾಟಕ್ಕೆ ದೊಡ್ಡ ಅವಮಾನ ಎಂದು ಹೇಳಿಕೊಂಡರು.
ಹೌದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಮ್ಮ ಕನ್ನಡದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ. ಅವರು ಬ್ರಿಟಿಷರ ವಿರುದ್ಧ ಹೋರಾಡಿ ಕನ್ನಡಿಗರ ಗೌರವವನ್ನು ಉಳಿಸಿದ್ದಾರೆ. ಇಂತಹ ಹೆಮ್ಮೆಯ ನಾಯಕನ ಮೂರ್ತಿಗೆ ಮಸಿ ಬಳಿದ ಘಟನೆ ನಿಜಕ್ಕೂ ಎಲ್ಲಾ ಜನರ ಮನಸ್ಸಿಗೆ ನೋವು ತಂದಿಕ್ಕಿದೆ ಎಂದು ಕನ್ನಡ ಪರ ಹೋರಾಟಗಾರರು ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು. ಘಟನೆ ನಡೆದ ಊರಿನಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿದೆ. ಜನರು ಶಾಂತಿ ಕಾಪಾಡುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಅತ್ತ ಪೊಲೀಸರು ಸಹ ಈ ಕೃತ್ಯಕ್ಕೆ ಕಾರಣರಾದ ಕೀಡಗೇಡಿಗಳನ್ನು ಪತ್ತೆಹಚ್ಚಿ ಬಂಧಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಘಟನೆ ಕನ್ನಡಿಗರ ಮನಸ್ಸಿನಲ್ಲಿ ಆಕ್ರೋಶವನ್ನು ಹುಟ್ಟಿಸಿದೆ. ಕನ್ನಡ ಪರ ಹೋರಾಟಗಾರರು “ರಾಯಣ್ಣ ಮೂರ್ತಿಗೆ ಮಸಿ ಬಳಿದವರನ್ನು ಕಠಿಣವಾಗಿ ಶಿಕ್ಷಿಸಬೇಕು” ಎಂದು ಆಗ್ರಹಿಸಿದ್ದಾರೆ. ಅತ್ತ ಮಚ್ಛೆ ಗ್ರಾಮದಲ್ಲಿ ನಡೆದ ಈ ಘಟನೆ ಕನ್ನಡದ ಗೌರವಕ್ಕೆ ಧಕ್ಕೆ ತಂದಿದ್ದು, ಜನರು ಶಾಂತಿ ಕಾಪಾಡಿಕೊಂಡು ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಘಟನೆ ಕುರಿತು ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳೆವಣಿಗೆಯ ಮಾತುಗಳು ಕೇಳಿ ಬರುತ್ತವೆ ಎಂದು ಕಾದು ನೋಡಬೇಕು