Dec 13, 2025 Languages : ಕನ್ನಡ | English

ನುಡಿದಂತೆ ನಡೆ, ಇಲ್ಲ ಇದೇ ಜನ್ಮ ಕಡೆ ಎಂದಿದ್ದೇಕೆ ಡಿಕೆಶಿ? ರಾಜಕೀಯ ವಲಯದಲ್ಲಿ ಬಾರಿ ಚರ್ಚೆ!!

ಬಾಗಲಕೋಟೆ ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿವೆ. ಡಿಕೆಶಿ ಮತ್ತು ಸಿಎಂ ಇತ್ತೀಚೆಗೆ ಕೊಟ್ಟ ಮಾತಿನ ಬಗ್ಗೆ ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದರಿಂದ ರಾಜಕೀಯ ವಲಯದಲ್ಲಿ ಚರ್ಚೆ ಚುರುಕುಗೊಂಡಿದೆ. ಡಿಕೆ ಶಿವಕುಮಾರ್ ಅವರು 12ನೇ ಶತಮಾನದ ಬಸವಣ್ಣನವರ ವಚನವನ್ನು ಉಲ್ಲೇಖಿಸಿ, “ನುಡಿದಂತೆ ನಡೆ ಇಲ್ಲ, ಇದೇ ಜನ್ಮ ಕಡೆ” ಎಂದು ಹೇಳಿಕೊಂಡಿದ್ದಾರೆ. ಇಂತಹ ವಚನಗಳು ಸಹಜವಾಗಿಯೇ ಜನರಲ್ಲಿ ಜಾಗೃತಿ ಮೂಡಿಸುವಂತದ್ದು. ಅವರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮನಸ್ಥಿತಿ ನಮ್ಮದು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಪಕ್ಷದ ಬಲದ ಬಗ್ಗೆ ಅಭಿಪ್ರಾಯ ನೋಡುವುದಾದರೆ, ಅವರು ತಮ್ಮ ಟ್ವಿಟರ್ ಖಾತೆಯಲ್ಲಿ “ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ, ಗಟ್ಟಿಯಾಗಿ ಪಕ್ಷವನ್ನು ಕಟ್ಟುತ್ತಿದ್ದೇವೆ” ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರಿಂದ ಪಕ್ಷದ ಒಳಗಿನ ಬಲ ಮತ್ತು ನಿಷ್ಠೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ಪಷ್ಟವಾಗಿದೆ. ಇನ್ನೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಅವರು “ಯಾವುದೇ ಸ್ಥಾನಮಾನ, ಕುರ್ಚಿ ಶಾಶ್ವತವಲ್ಲ” ಎಂಬ ಹೇಳಿಕೆಯನ್ನು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಮಾತನಾಡಿದ ಅವರು, “ಕುರ್ಚಿ ಒಂದು ದಿನ ಎಲ್ಲರಿಗೂ ಹೋಗುವಂತದ್ದು. ಜೀವನವೇ ಶಾಶ್ವತವಲ್ಲ, ಇನ್ನು ಕುರ್ಚಿ ಏನು ಶಾಶ್ವತ ಇರುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಶಪ್ಪನವರ ಪ್ರತಿಕ್ರಿಯೆ ಸಹ ಕೇಳಿ ಬಂದಿದ್ದು, ಈ ಹೇಳಿಕೆಗೆ ಕಾಶಪ್ಪನವರು ದನಿಗೂಡಿಸಿದ್ದು, ರಾಜಕೀಯದಲ್ಲಿ ಸ್ಥಾನಮಾನ ತಾತ್ಕಾಲಿಕವಾಗಿದ್ದು, ಶಾಶ್ವತವಲ್ಲ ಎಂಬ ಅಭಿಪ್ರಾಯವನ್ನು ಪುನಃ ಒತ್ತಿ ಹೇಳಿದ್ದಾರೆ. ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಜನರಲ್ಲಿ ಕುರ್ಚಿ ಮತ್ತು ಅಧಿಕಾರದ ಶಾಶ್ವತತೆಯ ಬಗ್ಗೆ ಚಿಂತನೆ ಮೂಡಿಸಿದೆ. ನಿಮ್ಮ ಪ್ರಕಾರ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿ ಯಾರು ಮುಂದುವರೆಯಬೇಕು ಎಂದು ಕಾಮೆಂಟ್ ಮಾಡಿ, ಹಾಗೆ ಯಾರು ಸಿಎಂ ಆದರೆ ರಾಜ್ಯಕ್ಕೆ ಒಳ್ಳೆಯದು ಎನ್ನುವ ಅಂಶವನ್ನು ಸಹ ಇಲ್ಲಿ ನೀವೂ ವ್ಯಕ್ತಪಡಿಸಬಹುದು ಧನ್ಯವಾದಗಳು.

Latest News