ಕುಡಿದ ಮತ್ತಿನಲ್ಲಿ ಪತ್ನಿಯ ತಲೆ ಬೋಳಿಸಿದ ಘಟನೆ - ಅನುಮಾನದ ಭೂತ ತಲೆ ಏರಿದರೆ ಹೀಗೆ ಆಗೋದು!!

ಬಾಗಲಕೋಟೆ (ಜಮಖಂಡಿ ತಾಲ್ಲೂಕು, ತೊದಲಬಾಗಿ ಗ್ರಾಮ): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆ ಬೋಳಿಸಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಮಹಿಳೆಯರ ಗೌರವಕ್ಕೆ ಧಕ್ಕೆ – ಗ್ರಾಮಸ್ಥರ ಬೇಸರ, ಕಠಿಣ ಕ್ರಮಕ್ಕೆ ಆಗ್ರಹ
ಮಹಿಳೆಯರ ಗೌರವಕ್ಕೆ ಧಕ್ಕೆ – ಗ್ರಾಮಸ್ಥರ ಬೇಸರ, ಕಠಿಣ ಕ್ರಮಕ್ಕೆ ಆಗ್ರಹ

ಆರೋಪಿ ಉಮೇಶ್ ಕೊಟ್ಟಲಗಿ, ತನ್ನ ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿ, ಆಕ್ರೋಶದಿಂದ ಕಬ್ಬು ಕಡಿಯುವ ಕೊಯ್ತಾ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಪತ್ನಿಯ ತಲೆ ಬೋಳಿಸೊ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಘಟನೆ ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯರ ಗೌರವ ಮತ್ತು ಸುರಕ್ಷತೆ ಕುರಿತ ಪ್ರಶ್ನೆಗಳನ್ನು ಎಬ್ಬಿಸಿದೆ. ಹಾಗೆ ಹೆಂಡ್ತಿ ಸುಂದರವಾಗಿದ್ದರೆ ಎಲ್ಲರೂ ನೋಡ್ತಾರೆ ಎಂದು ಈ ಕೆಲಸ ಮಾಡಿದ್ದಾನೆ ಎನ್ನಲಾಗಿ ಕೇಳಿ ಬಂದಿದೆ. 

ಘಟನೆಯ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾವಳಗಿ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದಾರೆ. ಪತ್ನಿಯ ಮೇಲೆ ಹಿಂಸೆ ತೋರಿದ ಈ ನಡೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಹಿಳೆಯರ ಮೇಲೆ ಇಂತಹ ವರ್ತನೆ ಅಸಹ್ಯಕರ. ಕಾನೂನು ಕ್ರಮ ಕಠಿಣವಾಗಿರಬೇಕು” ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆ ಕೇವಲ ಒಂದು ಕುಟುಂಬದ ಸಮಸ್ಯೆಯಲ್ಲ, ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಅವಮಾನಗಳ ಪ್ರತಿಬಿಂಬವಾಗಿದೆ. ಪತ್ನಿಯ ತಲೆ ಬೋಳಿಸುವಂತಹ ಕ್ರೂರ ಕೃತ್ಯವು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಮಹಿಳೆಯರ ಗೌರವವನ್ನು ಹಾಳುಮಾಡುತ್ತದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರು ಮಹಿಳೆಯರ ಸುರಕ್ಷತೆಗಾಗಿ ಕಾನೂನು ಕ್ರಮ ಗಟ್ಟಿಯಾಗಿರಬೇಕು ಎಂದು ಒತ್ತಾಯಿಸಿದ್ದಾರೆ. 

Latest News

Related News