ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತು ನಮ್ಮ ಕ್ರಿಕೆಟ್ ಲೋಕದ ಸುಲ್ತಾನ್ ವಿರಾಟ್ ಕೊಹ್ಲಿ ಅಂದ್ರೆ ಇಡೀ ದೇಶಕ್ಕೆ ಅಚ್ಚುಮೆಚ್ಚು. ಈ ಕ್ಯೂಟ್ ಜೋಡಿಯನ್ನು ಫ್ಯಾನ್ಸ್ ಪ್ರೀತಿಯಿಂದ 'ವಿರುಷ್ಕಾ' ಅಂತಾನೇ ಕರೀತಾರೆ. ಇವರಿಬ್ಬರು ಎಲ್ಲೇ ಹೋದ್ರು, ಏನೇ ಮಾಡಿದ್ರು ಅದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗೋದು ಗ್ಯಾರಂಟಿ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿರೋ ಕಿಂಗ್ ಕೊಹ್ಲಿ, ಇತ್ತೀಚೆಗಷ್ಟೇ ಪತ್ನಿ ಅನುಷ್ಕಾ ಜೊತೆ ವೃಂದಾವನಕ್ಕೆ ಭೇಟಿ ಕೊಟ್ಟಿದ್ದರು. ಇದರ ಬೆನ್ನಲ್ಲೇ ಏರ್‌ಪೋರ್ಟ್‌ನಲ್ಲಿ ಅನುಷ್ಕಾ ಹಿಡಿದಿದ್ದ ಮೊಬೈಲ್ ಸ್ಕ್ರೀನ್ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ!
ಫ್ಯಾನ್ಸ್ ಅಂದುಕೊಂಡಿದ್ದೇ ಬೇರೆ, ಅಲ್ಲಿ ನೋಡಿದ್ದೇ ಬೇರೆ!
ಸಾಮಾನ್ಯವಾಗಿ ನಾವೆಲ್ಲಾ ನಮ್ಮ ಮೊಬೈಲ್‌ನ ವಾಲ್‌ಪೇಪರ್‌ನಲ್ಲಿ ನಮಗೆ ಅತಿ ಹೆಚ್ಚು ಇಷ್ಟ ಆಗೋ ಗಂಡ, ಹೆಂಡತಿ ಅಥವಾ ಮಕ್ಕಳ ಫೋಟೋಗಳನ್ನು ಹಾಕಿಕೊಳ್ಳುತ್ತೇವೆ. ಅದೇ ತರಹ ಅನುಷ್ಕಾ ಶರ್ಮಾ ಕೂಡ ತಮ್ಮ ಮೊಬೈಲ್‌ನಲ್ಲಿ ಗಂಡ ವಿರಾಟ್ ಕೊಹ್ಲಿ ಅಥವಾ ಮಕ್ಕಳ ಕ್ಯೂಟ್ ಫೋಟೋ ಹಾಕಿಕೊಂಡಿರಬಹುದು ಅಂತ ಫ್ಯಾನ್ಸ್ ಕಣ್ಣಿಟ್ಟು ಕಾಯುತ್ತಿದ್ದರು. ಆದರೆ, ಏರ್‌ಪೋರ್ಟ್‌ನಲ್ಲಿ ಅನುಷ್ಕಾ ಫೋನ್ ಹಿಡಿದುಕೊಂಡಿದ್ದಾಗ ಅವರ ಮೊಬೈಲ್ ವಾಲ್‌ಪೇಪರ್ ಸೂಕ್ಷ್ಮವಾಗಿ ಗಮನಿಸಿದ ಅಭಿಮಾನಿಗಳಿಗೆ ಭಾರಿ ಅಚ್ಚರಿ ಕಾದಿತ್ತು. ಯಾಕಂದ್ರೆ ಅವರ ಮೊಬೈಲ್ ಸ್ಕ್ರೀನ್ ಮೇಲೆ ವಿರಾಟ್ ಫೋಟೋ ಇರಲೇ ಇಲ್ಲ! ಬದಲಿಗೆ ವೃಂದಾವನದ ಖ್ಯಾತ ಸಂತ ಪ್ರೇಮಾನಂದ್ ಮಹಾರಾಜ್ ಅವರ ಫೋಟೋ ಇತ್ತು.
Did you guys notice #AnushkaSharma 's phone wallpaper?? pic.twitter.com/BH5F8TIsA9
— The Climax India (@TheClimaxIndia) June 2, 2026
ಗುರೂಜಿ ಮೇಲೆ ದಂಪತಿಗೆ ಅಪಾರ ಭಕ್ತಿ!
ಅಸಲಿಗೆ, ವಿರಾಟ್ ಮತ್ತು ಅನುಷ್ಕಾ ದಂಪತಿಗೆ ವೃಂದಾವನದ ಪ್ರೇಮಾನಂದ್ ಮಹಾರಾಜ್ ಗುರೂಜಿ ಅಂದ್ರೆ ಸಿಕ್ಕಾಪಟ್ಟೆ ಭಕ್ತಿ ಮತ್ತು ಗೌರವ. ಅವರಿಗೆ ಭಾರತದಲ್ಲಿ ಯಾವಾಗ ಬಿಡುವು ಸಿಗುತ್ತೋ, ತಕ್ಷಣ ವೃಂದಾವನಕ್ಕೆ ಓಡಿ ಹೋಗಿ ಗುರೂಜಿ ಎದುರು ಮಂಡಿಯೂರಿ ಕುಳಿತು ಅವರ ಹಿತವಚನಗಳನ್ನು ಕೇಳುತ್ತಾರೆ, ಆಶೀರ್ವಾದ ಪಡೀತಾರೆ.
ಈ ಬಾರಿಯೂ ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಕಪ್ ಗೆಲ್ಲುತ್ತಿದ್ದಂತೆಯೇ ಈ ಜೋಡಿ ನೇರವಾಗಿ ವೃಂದಾವನಕ್ಕೆ ದೌಡಾಯಿಸಿ ಗುರೂಜಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಆ ವಿಡಿಯೋಗಳು ಕೂಡ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದವು. ಈಗ ಅದೇ ಗುರೂಜಿ ಫೋಟೋವನ್ನು ಅನುಷ್ಕಾ ತಮ್ಮ ಫೋನ್‌ನ ವಾಲ್‌ಪೇಪರ್ ಮಾಡಿಕೊಂಡಿರುವುದು ಅವರಲ್ಲಿರೋ ಆಧ್ಯಾತ್ಮಿಕ ಭಕ್ತಿಯನ್ನು ಎದ್ದು ಕಾಣಿಸುವಂತೆ ಮಾಡಿದೆ.
ಲಂಡನ್ ಲೈಫ್ ಮತ್ತು ವೃಂದಾವನ ಸನ್ನಿಧಿ!
ನಮ್ಮ ಕಿಂಗ್ ಕೊಹ್ಲಿ ಈಗಾಗಲೇ ಟೆಸ್ಟ್ ಮತ್ತು ಅಂತಾರಾಷ್ಟಯ ಟಿ20 ಕ್ರಿಕೆಟ್‌ಗೆ ಅಧಿಕೃತವಾಗಿ ರಿಟೈರ್ಮೆಂಟ್ ಘೋಷಣೆ ಮಾಡಿರುವುದರಿಂದ, ಈಗ ಕೇವಲ ಒನ್ ಡೇ (ODI) ಮತ್ತು ಐಪಿಎಲ್ ಮ್ಯಾಚ್‌ಗಳನ್ನು ಮಾತ್ರ ಆಡುತ್ತಿದ್ದಾರೆ. ಹಾಗಾಗಿ ಮ್ಯಾಚ್ ಇಲ್ಲದ ಸಮಯದಲ್ಲಿ ತಮ್ಮ ಖಾಸಗಿ ಜೀವನಕ್ಕೆ ಹೆಚ್ಚು ಒತ್ತು ನೀಡುವ ಕೊಹ್ಲಿ, ಫ್ಯಾಮಿಲಿ ಜೊತೆ ಲಂಡನ್‌ನಲ್ಲಿ ಸೈಲೆಂಟ್ ಆಗಿ ಕಾಲ ಕಳೆಯುತ್ತಾರೆ. ಆದರೆ ಲಂಡನ್‌ನಿಂದ ಭಾರತಕ್ಕೆ ಲ್ಯಾಂಡ್ ಆದ ತಕ್ಷಣ ಮಾತ್ರ ನೇರವಾಗಿ ವೃಂದಾವನಕ್ಕೆ ಹೋಗಿ ಪ್ರೇಮಾನಂದ್ ಮಹಾರಾಜರ ದರ್ಶನ ಪಡೆಯುವುದನ್ನು ಮಾತ್ರ ಮರೆಯಲ್ಲ.