ಇವತ್ತು ನಾವು ಹೇಳಹೊರಟಿರೋ ಸುದ್ದಿ ಕೇಳಿದ್ರೆ ನಿಮ್ಮ ಮೈ ಜುಂ ಎನ್ನುತ್ತೆ. ಸುಮಾರು 30 ವರ್ಷಗಳ ಹಿಂದೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಭೀಕರ ಕರಾಳ ಸ್ಕ್ಯಾಂಡಲ್ ನಿಮಗೆ ನೆನಪಿರಬಹುದು. ಈಗ ಅಂತಹದ್ದೇ ಒಂದು ಪೈಶಾಚಿಕ ಕೃತ್ಯ ಮಹಾರಾಷ್ಟ್ರದ ಅಮರಾವತಿಯಲ್ಲಿ ಬಯಲಿಗೆ ಬಂದಿದೆ. ಒಬ್ಬ 19 ವರ್ಷದ ಕಿರಾತಕ ನೂರಾರು ಹುಡುಗಿಯರ ಬದುಕನ್ನ ಬೀದಿಗೆ ತಂದಿರೋ ವಿಚಾರ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ.
ನಡೆದಿದ್ದೇನು? ಏನಿದು ಅಮರಾವತಿ ಕೇಸ್?
ಅಮರಾವತಿ ಪೊಲೀಸರು ಇತ್ತೀಚೆಗೆ ಅಯಾನ್ ಅಹಮದ್ ತನ್ವೀರ್ ಅಹಮದ್ ಅನ್ನೋ 19 ವರ್ಷದ ಹುಡುಗನನ್ನ ಬಂಧಿಸಿದ್ದಾರೆ. ಈತನ ಫೋನ್ ಮತ್ತು ಲ್ಯಾಪ್‌ಟಾಪ್ ಚೆಕ್ ಮಾಡಿದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಈ ಕಿರಾತಕ ಸುಮಾರು 350ಕ್ಕೂ ಹೆಚ್ಚು ಹುಡುಗಿಯರ ಅ*ಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡಿದ್ದ! ಅಷ್ಟೇ ಅಲ್ಲ, ಈಗಾಗಲೇ 100ಕ್ಕೂ ಹೆಚ್ಚು ಅ*ಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿರೋದು ಪತ್ತೆಯಾಗಿದೆ.
ಟ್ರ್ಯಾಪ್ ಮಾಡ್ತಿದ್ದಿದ್ದು ಹೇಗೆ?
ಈ ಅಯಾನ್ ಅಹಮದ್ ಹುಡುಗಿಯರನ್ನ ಬುಟ್ಟಿಗೆ ಹಾಕಿಕೊಳ್ಳೋಕೆ ಆರಿಸಿಕೊಂಡಿದ್ದು ಸೋಶಿಯಲ್ ಮೀಡಿಯಾ ಅಸ್ತ್ರವನ್ನ. ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಹುಡುಗಿಯರ ಜೊತೆ ಫ್ರೆಂಡ್ ಶಿಪ್ ಬೆಳೆಸ್ತಿದ್ದ. ಒಮ್ಮೆ ಹುಡುಗಿಯರು ಈತನನ್ನ ನಂಬಿದ್ರು ಅಂದ್ರೆ ಸಾಕು, ಅವರನ್ನ ಲೈಂ*ಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಅಷ್ಟಕ್ಕೆ ಸುಮ್ಮನಾಗದೆ, ಆ ಸಮಯದಲ್ಲಿ ಯಾರಿಗೂ ತಿಳಿಯದಂತೆ ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ. ಆಮೇಲೆ ಅದೇ ವಿಡಿಯೋಗಳನ್ನು ತೋರಿಸಿ ಹುಡುಗಿಯರನ್ನ ಬ್ಲ್ಯಾಕ್‌ಮೇಲ್ ಮಾಡೋಕೆ ಶುರು ಮಾಡ್ತಿದ್ದ ಎನ್ನಲಾಗುತ್ತಿದೆ.
1992ರ ಅಜ್ಮೀರ್ ಸ್ಕ್ಯಾಂಡಲ್ ನೆನಪಿಸುವ ಘೋರ ಕೃತ್ಯ!
ಈ ಘಟನೆ ನೋಡಿದ್ರೆ 1992ರಲ್ಲಿ ಅಜ್ಮೀರ್‌ನಲ್ಲಿ ನಡೆದ ಭೀಕರ ಘಟನೆ ಕಣ್ಣ ಮುಂದೆ ಬರುತ್ತೆ. ಅಂದು ಅಜ್ಮೀರ್ ಷರೀಫ್ ದರ್ಗಾದ ಖಾದಿಂಗಳು ಮತ್ತು ಅಂದಿನ ಪ್ರಭಾವಿ ರಾಜಕಾರಣಿಗಳನ್ನೊಳಗೊಂಡ ಗ್ಯಾಂಗ್, ಸುಮಾರು 200ಕ್ಕೂ ಹೆಚ್ಚು ಹಿಂದೂ ಹುಡುಗಿಯರ ಬೆ*ತ್ತಲೆ ಫೋಟೋಗಳನ್ನು ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್ ಮಾಡಿತ್ತು. ಆಗಲೂ ಯಾರೂ ದೂರು ಕೊಡೋಕೆ ಧೈರ್ಯ ಮಾಡಿರಲಿಲ್ಲ. ಯಾಕಂದ್ರೆ ಆರೋಪಿಗಳು ಫುಲ್ ಪವರ್‌ಫುಲ್ ಆಗಿದ್ರು.
ಅಮರಾವತಿಯಲ್ಲೂ ಈಗ ಅದೇ ಆಗ್ತಿದೆ. ಪೊಲೀಸರು ಇದುವರೆಗೆ ಏಳು ಜನ ಸಂತ್ರಸ್ತೆಯರನ್ನು ಗುರುತಿಸಿದ್ದಾರೆ. ಆದ್ರೆ ಪಾಪ, ಸಮಾಜಕ್ಕೆ ಹೆದರಿಯೋ ಅಥವಾ ಮರ್ಯಾದೆಗೆ ಅಂಜಿಯೋ ಯಾರೂ ಕೂಡ ಕಂಪ್ಲೇಂಟ್ ಕೊಡೋಕೆ ಮುಂದೆ ಬರ್ತಿಲ್ಲ. ಪೊಲೀಸರು ಈಗ ಹುಡುಗಿಯರ ಪೋಷಕರಲ್ಲಿ ಮನವಿ ಮಾಡ್ತಿದ್ದಾರೆ, "ಧೈರ್ಯವಾಗಿ ಮುಂದೆ ಬನ್ನಿ, ಇಂತವನಿಗೆ ಶಿಕ್ಷೆ ಕೊಡಿಸೋಣ" ಅಂತ.
ಪರಿಣಾಮ ಎಷ್ಟೊಂದು ಭೀಕರ?
ಅವತ್ತು ಅಜ್ಮೀರ್ ಸ್ಕ್ಯಾಂಡಲ್ ಬಯಲಾದ ಮೇಲೆ ಎಷ್ಟೋ ಹುಡುಗಿಯರು ಮರ್ಯಾದೆಗೆ ಅಂಜಿ ಆತ್ಮಹ*ತ್ಯೆ ಮಾಡಿಕೊಂಡ್ರು, ಕೆಲವರು ಊರನ್ನೇ ಬಿಟ್ಟು ಹೋದ್ರು, ಇನ್ನು ಕೆಲವರು ಹೆಸರು ಬದಲಾಯಿಸಿಕೊಂಡು ಬದುಕುತ್ತಿದ್ದಾರೆ. ಈಗ ಅಮರಾವತಿಯಲ್ಲೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಪಿಗಳ ಧರ್ಮಾಂಧತೆ ಮತ್ತು ಪೈಶಾಚಿಕ ಕ್ರೌರ್ಯಕ್ಕೆ ನೂರಾರು ಯುವತಿಯರ ಭವಿಷ್ಯ ಈಗ ಕತ್ತಲಲ್ಲಿ ನಿಂತಿದೆ.
ಪೋಷಕರೇ ಮತ್ತು ಯುವತಿಯರೇ, ಸೋಶಿಯಲ್ ಮೀಡಿಯಾದಲ್ಲಿ ಯಾರನ್ನೋ ನಂಬೋ ಮುನ್ನ ನೂರು ಸಲ ಯೋಚನೆ ಮಾಡಿ. ಯಾರೋ ಬಂದು ಪ್ರೀತಿ ಮಾಡ್ತೀನಿ ಅಂದ ಕೂಡಲೇ ಮರುಳಾಗಬೇಡಿ. ಇವತ್ತು ಅಯಾನ್ ಅಹಮದ್ ಸಿಕ್ಕಿಬಿದ್ದಿದ್ದಾನೆ, ಆದ್ರೆ ಇಂತಹ ಸಾವಿರಾರು ಕಿರಾತಕರು ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಹೊಂಚು ಹಾಕಿ ಕೂತಿದ್ದಾರೆ. ಅನಿವಾರ್ಯವಾಗಿ ಇಂತಹ ಸಂಕಷ್ಟಕ್ಕೆ ಸಿಲುಕಿದ್ರೆ ದಯವಿಟ್ಟು ಪೊಲೀಸರಿಗೆ ತಿಳಿಸಿ, ಸುಮ್ಮನೆ ಕೂತ್ರೆ ಆತ ಇನ್ನಷ್ಟು ಹುಡುಗಿಯರ ಬದುಕು ಹಾಳು ಮಾಡ್ತಾನೆ.
Ajmer 1992-like scandal from Amravati, Maharashtra:
— Subhi Vishwakarma (@subhi_karma) April 15, 2026
A 19-year-old accused named Ayan Ahmed Tanveer Ahmed filmed over 100 obscene videos of more than 350 girls and had been blackmailing them using these video clips.
How he filmed the videos:He trapped the girls on social media… pic.twitter.com/qaMvyaTFqa
ಈ ಕೇಸ್ ಬಗ್ಗೆ ನಾವು ಕಣ್ಣಿಟ್ಟಿದ್ದೀವಿ, ಏನಾದ್ರೂ ಹೊಸ ಅಪ್‌ಡೇಟ್ ಬಂದ್ರೆ ಖಂಡಿತ ನಿಮಗೆ ತಿಳಿಸ್ತೀವಿ. ಜಾಗೃತರಾಗಿರಿ, ಸುರಕ್ಷಿತವಾಗಿರಿ. ಈ ಲೇಖನವನ್ನ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಮತ್ತು ಫ್ರೆಂಡ್ಸ್‌ಗೆ ಶೇರ್ ಮಾಡಿ ಜಾಗೃತಿ ಮೂಡಿಸಿ.