ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಅಂದ್ರೆ ಸಾಕು, ನಮಗೆ ಅವರ ಶಿಸ್ತು ಮತ್ತು ಧೈರ್ಯದ ನೆನಪಾಗುತ್ತೆ. ಆದ್ರೆ, ಅಂತಹ ಸ್ಟಾರ್ ನಟನ ಮಗಳಿಗೇ ಸೈಬರ್ ಕ್ರಿಮಿನಲ್‌ಗಳು ಕಾಟ ಕೊಟ್ಟಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಇತ್ತೀಚೆಗೆ ಮಹಾರಾಷ್ಟ್ರ ಸೈಬರ್ ವಿಭಾಗದ ಎಡಿಜಿಪಿ ಯಶಸ್ವಿ ಯಾದವ್ ಅವರು ಈ ಶಾಕಿಂಗ್ ವಿಷಯ ಬಹಿರಂಗಪಡಿಸಿದ್ದಾರೆ. ಅಕ್ಷಯ್ ಕುಮಾರ್ ಮಗಳು ಕೂಡ 'ಸೆ*ಕ್ಸ್‌ಟಾರ್ಷನ್' (Sextortion) ಎಂಬ ವಿಕೃತ ಜಾಲಕ್ಕೆ ಸಿಲುಕಿದ್ದರು ಅನ್ನೋದು ಈಗ ಇಡೀ ದೇಶದ ಗಮನ ಸೆಳೆದಿದೆ.
ಏನಿದು ಅಕ್ಷಯ್ ಮಗಳ ಧೈರ್ಯದ ಕಥೆ?
ಯಶಸ್ವಿ ಯಾದವ್ ಅವರು ಮಾಧ್ಯಮಗಳ ಜೊತೆ ಮಾತಾಡ್ತಾ, "ಅಕ್ಷಯ್ ಕುಮಾರ್ ನಮ್ಮ ಹತ್ತಿರ ಬಂದಾಗ ಒಂದು ಭಯಾನಕ ವಿಷಯ ಹಂಚಿಕೊಂಡರು. ಅವರ ಮಗಳನ್ನ ಯಾರೋ ಸೈಬರ್ ವಂಚಕರು ಬ್ಲ್ಯಾಕ್ ಮೇಲ್ ಮಾಡ್ತಿದ್ದರಂತೆ. ಇದನ್ನ ನಾವು ಸೆ*ಕ್ಸ್‌ಟಾರ್ಷನ್ ಅಂತ ಕರೀತೀವಿ," ಎಂದು ಹೇಳಿದ್ದಾರೆ.
ಆದರೆ, ಈ ಕಥೆಯಲ್ಲಿ ಮೆಚ್ಚಬೇಕಾದ ವಿಷಯ ಅಂದ್ರೆ ಆ ಹುಡುಗಿಯ ಧೈರ್ಯ. ಸಾಮಾನ್ಯವಾಗಿ ಇಂತಹ ವಿಷ್ಯ ನಡೆದಾಗ ಹುಡುಗಿಯರು ಭಯಪಟ್ಟು ಸುಮ್ಮನಾಗಿಬಿಡ್ತಾರೆ. ಆದ್ರೆ ಅಕ್ಷಯ್ ಮಗಳು ಮಾತ್ರ ದೃತಿಗೆಡದೆ ತಕ್ಷಣ ಅಪ್ಪ-ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. "ನನಗೆ ಇಂಥ ತೊಂದರೆ ಆಗ್ತಿದೆ" ಅಂತ ಆಕೆ ಪೋಷಕರಿಗೆ ಹೇಳಿದ್ದರಿಂದಲೇ ಅಕ್ಷಯ್ ಕುಮಾರ್ ಪೊಲೀಸ್ ಇಲಾಖೆಗೆ ದೂರು ಕೊಡಲು ಸಾಧ್ಯವಾಯ್ತು. ಪೊಲೀಸರು ಕೂಡ ಅಷ್ಟೇ ವೇಗವಾಗಿ ಆಕ್ಷನ್ ತಗೊಂಡು ಕೇಸ್ ಸಾಲ್ವ್ ಮಾಡಿದ್ದಾರೆ.
ಇವತ್ತಿನ ಡಿಜಿಟಲ್ ಜಗತ್ತಿನಲ್ಲಿ ಇದು ಅತಿ ದೊಡ್ಡ ಪಿಡುಗು. ವಂಚಕರು ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡಿ ನಿಮ್ಮ ಜೊತೆ ಫ್ರೆಂಡ್ ಶಿಪ್ ಮಾಡ್ತಾರೆ, ಆಮೇಲೆ ವಿಡಿಯೋ ಕಾಲ್ ಅಥವಾ ಚಾಟಿಂಗ್ ಮೂಲಕ ನಿಮ್ಮ ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನ ರೆಕಾರ್ಡ್ ಮಾಡ್ಕೊಳ್ತಾರೆ. ಆಮೇಲೆ ಅದನ್ನ ಇಟ್ಕೊಂಡು 'ದುಡ್ಡು ಕೊಡು, ಇಲ್ಲದಿದ್ರೆ ಇದನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೀನಿ' ಅಂತ ಬೆದರಿಸ್ತಾರೆ. ಇದನ್ನೇ ಸೆ*ಕ್ಸ್‌ಟಾರ್ಷನ್ ಅನ್ನೋದು.
ಅಕ್ಷಯ್ ಕುಮಾರ್ ಫ್ಯಾಮಿಲಿಯಿಂದ ನಾವು ಕಲಿಯಬೇಕಾದ್ದು ಏನು?
ಈ ಘಟನೆ ನಮ್ಮೆಲ್ಲರಿಗೂ ಒಂದು ದೊಡ್ಡ ಪಾಠ! ಸ್ಟಾರ್ ನಟನ ಮಗಳಿಗೇ ಇಂತಹ ಪರಿಸ್ಥಿತಿ ಬಂದಿದೆ ಅಂದ್ರೆ, ಸಾಮಾನ್ಯ ಜನರ ಪಾಡು ಏನಾಗಬೇಡ?
ಮಕ್ಕಳ ಜೊತೆ ಫ್ರೆಂಡ್ಲಿ ಆಗಿರಿ - ಅಕ್ಷಯ್ ಕುಮಾರ್ ಅವರ ಮಗಳು ತಕ್ಷಣ ಪೋಷಕರಿಗೆ ಹೇಳಿದ್ದರಿಂದ ಸಮಸ್ಯೆ ಬಗೆಹರಿಯಿತು. ನಿಮ್ಮ ಮಕ್ಕಳು ಕೂಡ ಯಾವುದೇ ತೊಂದರೆಯಲ್ಲಿದ್ದರೂ ನಿಮ್ಮ ಹತ್ತಿರ ಬಂದು ಹೇಳಿಕೊಳ್ಳೋವಂತಹ ವಾತಾವರಣ ಮನೆಯಲ್ಲಿರಲಿ.
ಭಯಪಡಬೇಡಿ - ಇಂತಹ ವಂಚಕರಿಗೆ ನೀವು ಹೆದರಿ ದುಡ್ಡು ಕೊಟ್ಟಷ್ಟು ಅವರು ನಿಮ್ಮನ್ನ ಹೆಚ್ಚು ಕಾಡ್ತಾರೆ. ದೂರು ಕೊಡೋದೇ ಇದಕ್ಕೆ ಅಂತಿಮ ಪರಿಹಾರ.
ಅಪರಿಚಿತರ ಜೊತೆ ವಿಡಿಯೋ ಕಾಲ್ ಬೇಡ - ಯಾರೋ ಹೊಸಬರು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ ತಕ್ಷಣ ಅಕ್ಸೆಪ್ಟ್ ಮಾಡೋದು ಅಥವಾ ಅವರ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತಾಡೋದು ಸೈಬರ್ ಕ್ರೈಮ್‌ಗೆ ದಾರಿ ಮಾಡಿಕೊಡಬಹುದು.
ಮಹಾರಾಷ್ಟ್ರ ಪೊಲೀಸರು ಹೇಳುವಂತೆ, ಇಂತಹ ಕೇಸ್‌ಗಳಲ್ಲಿ ನಾಚಿಕೆ ಪಟ್ಟುಕೊಳ್ಳುವ ಅಗತ್ಯವಿಲ್ಲ. ಅಕ್ಷಯ್ ಕುಮಾರ್ ಅಂತಹ ಸೆಲೆಬ್ರಿಟಿಯೇ ಮುಂದೆ ಬಂದು ದೂರು ಕೊಟ್ಟಿದ್ದಾರೆ ಅಂದಮೇಲೆ, ನಾವು ಯಾಕೆ ಹಿಂದೆ ಸರಿಯಬೇಕು? ನೀವು ಅಥವಾ ನಿಮ್ಮ ಮನೆಯವರು ಇಂತಹ ಸಮಸ್ಯೆಗೆ ಸಿಲುಕಿದ್ರೆ ತಕ್ಷಣ 1930 ನಂಬರ್‌ಗೆ ಕಾಲ್ ಮಾಡಿ ಅಥವಾ ಸೈಬರ್ ಕ್ರೈಮ್ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ.
Mumbai, Maharashtra: On cybercrime involving actor Akshay Kumar’s daughter, Additional Director General of Police, Maharashtra Cyber, Yashasvi Yadav says, “He (Akshay Kumar) had a very shocking story to share with us. He said that his own daughter was being sextorted. The girl… pic.twitter.com/nb44pZxIcu
— IANS (@ians_india) April 24, 2026
ಡಿಜಿಟಲ್ ಲೋಕದಲ್ಲಿ ನಾವು ಎಷ್ಟು ಸ್ಮಾರ್ಟ್ ಆಗಿರ್ತೀವೋ ಅಷ್ಟು ಸೇಫ್ ಆಗಿರ್ತೀವಿ. ಅಕ್ಷಯ್ ಕುಮಾರ್ ಮಗಳ ಧೈರ್ಯ ನಮಗೆಲ್ಲರಿಗೂ ಮಾದರಿ. ಸೈಬರ್ ಕ್ರಿಮಿನಲ್‌ಗಳ ಬೆದರಿಕೆಗೆ ಮಣಿಯದೆ, ಕಾನೂನಿನ ಮೊರೆ ಹೋಗೋದೇ ಜಾಣತನ.