May 7, 2026 Languages : ಕನ್ನಡ | English

ದಳಪತಿ - ಸಂಗೀತಾ ಲವ್ ಸ್ಟೋರಿ - ಸಿನಿಮಾ ಸ್ಟೈಲ್‌ನಲ್ಲಿ ಶುರುವಾಗಿ ವಿಚ್ಛೇದನದ ಹಂತಕ್ಕೆ ತಲುಪಿದ ಪಯಣ ಇಲ್ಲಿದೆ ನೋಡಿ!!

ವಿಜಯ್ ಕೇವಲ ಎರಡು ವರ್ಷಗಳ ಹಿಂದೆ ಪಕ್ಷ ಕಟ್ಟಿ, ಈಗ ತಮಿಳುನಾಡಿನ ಆಡಳಿತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ದೇಶಾದ್ಯಂತ ಈಗ ಅವರದ್ದೇ ಚರ್ಚೆ. ಆದರೆ ಈ ಸಂಭ್ರಮದ ನಡುವೆಯೂ ವಿಜಯ್ ಅವರ ವೈಯಕ್ತಿಕ ಜೀವನ ಮಾತ್ರ ಸವಾಲುಗಳ ಸುಳಿಯಲ್ಲಿದೆ. ಇತ್ತೀಚೆಗೆ ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ದೊಡ್ಡ ಮಟ್ಟದ ಕೋಲಾಹಲಕ್ಕೆ ಕಾರಣವಾಗಿದೆ.

ಒಂದೆಡೆ ಗೆಲುವಿನ ನಗೆ, ಮತ್ತೊಂದೆಡೆ ಸಂಸಾರದಲ್ಲಿ ಬಿರುಕು | Photo Credit: https://x.com/NalinisKitchen | https://x.com/CinemaXverse
ಒಂದೆಡೆ ಗೆಲುವಿನ ನಗೆ, ಮತ್ತೊಂದೆಡೆ ಸಂಸಾರದಲ್ಲಿ ಬಿರುಕು | Photo Credit: https://x.com/NalinisKitchen | https://x.com/CinemaXverse

ಅಭಿಮಾನಿಯೇ ಅರ್ಧಾಂಗಿಯಾದ ಕಥೆ!

ವಿಜಯ್ ಮತ್ತು ಸಂಗೀತಾ ಅವರ ಪ್ರೇಮಕಥೆ ಯಾವುದೋ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ. ಸಂಗೀತಾ ಸ್ವರ್ಣಲಿಂಗಂ ಅವರು ಲಂಡನ್‌ನಲ್ಲಿ ಬೆಳೆದ ಶ್ರೀಲಂಕಾದ ದೊಡ್ಡ ಉದ್ಯಮಿಯ ಮಗಳು. 1996ರಲ್ಲಿ ತೆರೆಕಂಡ ವಿಜಯ್ ಅವರ ‘ಪೂವೆ ಉನಕ್ಕಾಗ’ (ಈ ಹೂವು ನಿಮಗಾಗಿ) ಸಿನಿಮಾ ನೋಡಿ ಸಂಗೀತಾ ಅವರು ವಿಜಯ್ ಅವರ ದೊಡ್ಡ ಅಭಿಮಾನಿಯಾದರು. ಕೇವಲ ಅಭಿಮಾನಿಯಾಗಿ ಇರದೇ, ಯಾರಿಗೂ ತಿಳಿಯದಂತೆ ಲಂಡನ್‌ನಿಂದ ಭಾರತಕ್ಕೆ ಬಂದು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.

ಪತ್ರಗಳ ಮೂಲಕ ಶುರುವಾದ ಸ್ನೇಹ

ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಸಂಗೀತಾ ಅವರು ವಿಜಯ್‌ಗೆ ನಿಯಮಿತವಾಗಿ ಪತ್ರಗಳನ್ನು ಬರೆಯುತ್ತಿದ್ದರು. ಆ ಪತ್ರಗಳೇ ಇವರಿಬ್ಬರ ಭೇಟಿಗೆ ಕಾರಣವಾಯಿತು. ಮೊದಲು ಸ್ನೇಹಿತರಾದ ಇವರು, ನಂತರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು. ಈ ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ. ವಿಜಯ್ ಅವರ ಮಗ ಈಗ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

20 ವರ್ಷಗಳ ಸಂಸಾರದಲ್ಲಿ ಬಿರುಕು?

ಸುಮಾರು ಎರಡು ದಶಕಗಳ ಕಾಲ ಅನ್ಯೋನ್ಯವಾಗಿದ್ದ ಈ ಜೋಡಿಯ ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯಗಳು ಮೂಡಿವೆ ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆಯ ಹೊತ್ತಿನಲ್ಲೇ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತು. ರಾಜಕೀಯದಲ್ಲಿ ವಿಜಯ್ ಗೆಲುವಿನ ನಗೆ ಬೀರಿದ್ದರೂ, ವೈಯಕ್ತಿಕವಾಗಿ ಜೀವನದ ಒಂದು ಮುಖ್ಯ ಅಧ್ಯಾಯವನ್ನು ಕೊನೆಗೊಳಿಸುವ ಹಂತಕ್ಕೆ ಬಂದಿದ್ದಾರೆ.

ರಾಜಕೀಯದ ಹಾದಿ ಸುಲಭವಲ್ಲ!

ಒಂದೆಡೆ ಹೊಸ ಸರ್ಕಾರ ರಚಿಸುವ ಸರ್ಕಸ್, ಮತ್ತೊಂದೆಡೆ ವೈಯಕ್ತಿಕ ಜೀವನದ ಏರಿಳಿತಗಳು – ಈ ಎರಡರ ನಡುವೆ ವಿಜಯ್ ಹೇಗೆ ಬ್ಯಾಲೆನ್ಸ್ ಮಾಡಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಸಿನಿಮಾ ನಾಯಕನಾಗಿ ಮೆರೆದಿದ್ದ 'ದಳಪತಿ', ಈಗ ಜನರ ನಾಯಕನಾಗಿ ಯಾವ ರೀತಿ ಆಡಳಿತ ನೀಡಲಿದ್ದಾರೆ ಎಂದು ಇಡೀ ದೇಶ ಕಾದು ನೋಡುತ್ತಿದೆ.

ವಿಜಯ್ ಅವರ ಈ ಏಳುಬೀಳಿನ ಪಯಣ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ರಾಜಕೀಯ ವಿಶ್ಲೇಷಕರಿಗೂ ಅಚ್ಚರಿ ಮೂಡಿಸಿರುವುದಂತೂ ಸುಳ್ಳಲ್ಲ.

Latest News