ನಾವು ಎಷ್ಟೇ ಜಾಗರೂಕರಾಗಿದ್ದರೂ ಕೆಲವೊಮ್ಮೆ ಸಣ್ಣ ಅಜಾಗರೂಕತೆ ನಮ್ಮ ಜೀವನವನ್ನೇ ಅಧೋಗತಿಗೆ ತಳ್ಳಬಹುದು. ಇಂತಹದ್ದೇ ಒಂದು ಶಾಕಿಂಗ್ ಘಟನೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದಿದೆ. 18ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಿಲ್ಲಿ ಟ್ಯಾಪ್ಲಿನ್ ಎಂಬ ಯುವತಿಗೆ ಆ ರಾತ್ರಿ ನರಕದ ದರ್ಶನವಾಯಿತು. ಅಪರಿಚಿತರು ನೀಡುವ ವಸ್ತುಗಳನ್ನು ಯಾಕೆ ಸ್ವೀಕರಿಸಬಾರದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
ಮಿಲ್ಲಿಗೆ 18 ವರ್ಷ ತುಂಬಿದ ಸಂಭ್ರಮ. ಮೊದಲ ಬಾರಿಗೆ ನೈಟ್‌ಕ್ಲಬ್‌ಗೆ ಹೋಗಿ ತನ್ನ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡಬೇಕು ಅನ್ನೋದು ಆಕೆಯ ಆಸೆಯಾಗಿತ್ತು. ಪಾರ್ಟಿ ಮೂಡ್‌ನಲ್ಲಿದ್ದ ಮಿಲ್ಲಿಗೆ ಅಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದಾನೆ. ಆತ ಒಂದು ಕಾಕ್‌ಟೈಲ್ ಗ್ಲಾಸ್ ಕೈಗಿಟ್ಟು, "ಇದು ವೋಡ್ಕಾ ಲೆಮನೇಡ್, ಒಮ್ಮೆ ಟ್ರೈ ಮಾಡು" ಎಂದು ಹೇಳಿದ್ದಾನೆ. ಆ ವ್ಯಕ್ತಿಯನ್ನು ನಂಬಿದ ಮಿಲ್ಲಿ, ಕೇವಲ ಒಂದು ಸಿಪ್ ಕುಡಿದಿದ್ದಾಳೆ ಎಂದು ಕೇಳಿಬಂದಿದೆ.
Birleşik Krallık’ta Millie Taplin, 18. doğum gününde ilk kez bir gece kulübüne giderken bir yabancı tarafından içki teklif edildi.
— Serkan Tanyildizi (@srkntnyldz) April 13, 2026
Yabancı ona bir kokteyl ikram ederek, “Vodka lemonade, dene bunu” dedi.
Millie bir yudum aldı.
Saniyeler içinde yüzü uyuştu, parmakları kasılarak… pic.twitter.com/wabGi15RRd
ಆ ಪಾನೀಯ ಕುಡಿದ ಕೆಲವೇ ಕ್ಷಣಗಳಲ್ಲಿ ಮಿಲ್ಲಿಗೆ ಏನೋ ವಿಚಿತ್ರ ಅನುಭವವಾಗಿದೆ. ಮೊದಲು ಆಕೆಯ ಮುಖ ಜಡವಾಯಿತು, ಆಮೇಲೆ ಬೆರಳುಗಳು ವಿಚಿತ್ರವಾಗಿ ಸೆಳೆತಕ್ಕೆ ಒಳಗಾಗಿ ಮುದುಡಿಕೊಂಡವು. ಇಡೀ ದೇಹ ಒಂದು ರೀತಿಯಲ್ಲಿ ಲಾಕ್ ಆಗಿಹೋಯಿತು. ನೋಡಲು ಆಕೆ ಯಾವುದೋ ದೆವ್ವ ಹಿಡಿದವರಂತೆ ಅಥವಾ ಮರಗಟ್ಟಿದಂತೆ ಕಾಣುತ್ತಿದ್ದಳು. ಆದರೆ ಅತ್ಯಂತ ಭೀಕರ ವಿಷಯ ಅಂದ್ರೆ, ಆಕೆಗೆ ಪ್ರಜ್ಞೆ ಇತ್ತು. ತನ್ನ ಸುತ್ತಮುತ್ತ ಏನಾಗುತ್ತಿದೆ ಅನ್ನೋದು ಆಕೆಗೆ ತಿಳಿಯುತ್ತಿತ್ತು, ಆದರೆ ಒಂದು ಬೆರಳನ್ನೂ ಅಲುಗಾಡಿಸಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ತನ್ನದೇ ದೇಹದೊಳಗೆ ತಾನು ಬಂದಿಯಾಗಿದ್ದ ಆ ನರಕಯಾತನೆ ಅಷ್ಟಿಷ್ಟಲ್ಲ.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಿಲ್ಲಿಯ ಸ್ಥಿತಿಯನ್ನು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಆಕೆಗೆ ಪಾನೀಯದ ಮೂಲಕ ಎರಡು ರೀತಿಯ ಅಪಾಯಕಾರಿ ಕೆಮಿಕಲ್‌ಗಳನ್ನು ನೀಡಲಾಗಿದೆ ಎಂದು ಅಂದಾಜಿಸಿದ್ದಾರೆ. ಒಂದು ದೇಹವನ್ನು ಪಾರ್ಶ್ವವಾಯು ಮಾಡಲು ಮತ್ತು ಇನ್ನೊಂದು ಪ್ರಜ್ಞೆ ತಪ್ಪಿಸಲು ಬಳಸುವಂತದ್ದು. ಆದರೆ ಆಶ್ಚರ್ಯ ಅಂದ್ರೆ, ರಕ್ತ ಪರೀಕ್ಷೆ ಮಾಡಿದರೂ ಆ ವಿಷಕಾರಿ ವಸ್ತುಗಳು ಯಾವುವು ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅಷ್ಟೊಂದು ಪ್ಲಾನ್ ಮಾಡಿ ಆಕೆಗೆ ಡ್ರ*ಗ್ಸ್ ನೀಡಲಾಗಿತ್ತು ಎನ್ನಲಾಗಿದೆ.
ಮಿಲ್ಲಿಯ ತಾಯಿ ತನ್ನ ಮಗಳು ಅನುಭವಿಸಿದ ಯಾತನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಮಗಳು ಪಟ್ಟ ಕಷ್ಟವನ್ನು ಯಾವ ತಾಯಿಯೂ ನೋಡಬಾರದು. ಯಾರೇ ಆಗಲಿ, ಪಾರ್ಟಿಗಳಲ್ಲಿ ಅಥವಾ ಹೊರಗಡೆ ಹೋದಾಗ ಅಪರಿಚಿತರು ನೀಡುವ ಪಾನೀಯ ಅಥವಾ ತಿಂಡಿಗಳನ್ನು ಮರೆತೂ ಕೂಡ ಮುಟ್ಟಬೇಡಿ" ಎಂದು ಕಣ್ಣೀರಿಡುತ್ತಾ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಪ್ರಪಂಚದಾದ್ಯಂತ ವೈರಲ್ ಆಗಿದ್ದು, ಯುವಜನರಲ್ಲಿ ಭೀತಿ ಮತ್ತು ಜಾಗೃತಿ ಎರಡನ್ನೂ ಮೂಡಿಸಿದೆ.
ಮೋಜು-ಮಸ್ತಿ ಇರಲಿ, ಆದರೆ ಅದು ನಮ್ಮ ಜೀವಕ್ಕೆ ಕಂಟಕವಾಗಬಾರದು. ಹೋಟೆಲ್, ಪಬ್ ಅಥವಾ ಪಾರ್ಟಿಗಳಲ್ಲಿ ಅಪರಿಚಿತರ ಸ್ನೇಹ ಮಾಡುವಾಗ ಸಾವಿರ ಸಲ ಯೋಚಿಸಿ. ನಿಮ್ಮ ಡ್ರಿಂಕ್ಸ್ ಅಥವಾ ಊಟದ ಮೇಲೆ ಸದಾ ನಿಗಾ ಇರಲಿ.