Apr 11, 2026 Languages : ಕನ್ನಡ | English

ಪ್ರೀತಿಗೆ ಬಲಿಯಾದ ಪ್ರೇಮಿಗಳು: ವೈರಲ್ ಆಗಿದ್ದ ಮುಸ್ಲಿಂ ಹುಡುಗಿ - ಕ್ರಿಶ್ಚಿಯನ್ ಹುಡುಗನ ಕ್ರೂರ ಹ*ತ್ಯೆ!!

ಪಾಕಿಸ್ತಾನದಿಂದ ಒಂದು ಅತ್ಯಂತ ನೋವಿನ ಮತ್ತು ಬೆಚ್ಚಿಬೀಳಿಸುವ ಸುದ್ದಿ ಕೇಳಿಬರುತ್ತಿದೆ. ಪ್ರೀತಿ ಅನ್ನೋದಕ್ಕೆ ಜಾತಿ, ಧರ್ಮದ ಹಂಗಿಲ್ಲ ಅಂತ ನಾವೆಲ್ಲ ಅಂದುಕೊಂಡರೆ, ಅಲ್ಲಿನ ಕಟ್ಟುಪಾಡುಗಳು ಒಬ್ಬ ಯುವಜೋಡಿಯ ಪ್ರಾಣವನ್ನೇ ಬಲಿಪಡೆದಿವೆ ಎಂಬ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.

ಪಾಕಿಸ್ತಾನದಲ್ಲಿ ಪ್ರೇಮಿಗಳ ದಾರುಣ ಅಂತ್ಯ; | Photo Credit: https://x.com/realMaalouf
ಪಾಕಿಸ್ತಾನದಲ್ಲಿ ಪ್ರೇಮಿಗಳ ದಾರುಣ ಅಂತ್ಯ; | Photo Credit: https://x.com/realMaalouf

ಒಬ್ಬ ಮುಸ್ಲಿಂ ಹುಡುಗಿ ಮತ್ತು ಕ್ರಿಶ್ಚಿಯನ್ ಹುಡುಗ ಪರಸ್ಪರ ಪ್ರೀತಿಸಿ, ಜೊತೆಯಾಗಿ ಬದುಕಲು ನಿರ್ಧರಿಸಿದ್ದರು. ಇವರಿಬ್ಬರ ಪ್ರೀತಿಯ ವಿಡಿಯೋಗಳು ಈ ಹಿಂದೆ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದವು. ಆದರೆ, ಈಗ ಸಿಗುತ್ತಿರುವ ಮಾಹಿತಿಯ ಪ್ರಕಾರ, ಈ ಜೋಡಿಯನ್ನು ಹ*ತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಪಾಕಿಸ್ತಾನದಲ್ಲಿ ಶರಿಯಾ ಕಾನೂನಿನ ಕಟ್ಟುಪಾಡುಗಳು ಬಹಳ ಬಿಗಿಯಾಗಿವೆ. ಅಲ್ಲಿನ ಸಂಪ್ರದಾಯದ ಪ್ರಕಾರ, ಒಬ್ಬ ಮುಸ್ಲಿಂ ಹುಡುಗಿ ಬೇರೆ ಧರ್ಮದ (ವಿಶೇಷವಾಗಿ ಕ್ರಿಶ್ಚಿಯನ್ ಅಥವಾ ಹಿಂದೂ) ಹುಡುಗನನ್ನು ಪ್ರೀತಿಸುವುದು ಅಥವಾ ಮದುವೆಯಾಗುವುದು ದೊಡ್ಡ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಜೋಡಿ ಪರಸ್ಪರ ಪ್ರೀತಿಸಿ, ಧರ್ಮದ ಎಲ್ಲ ಅಡೆತಡೆಗಳನ್ನು ಮೀರಿ ಒಂದಾಗಲು ಬಯಸಿದ್ದರು. ಇವರಿಬ್ಬರ ಪ್ರೀತಿಯ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅಲ್ಲಿನ ಕೆಲವು ಸಂಪ್ರದಾಯವಾದಿಗಳು ಇವರ ವಿರುದ್ಧ ತಿರುಗಿಬಿದ್ದಿದ್ದರು ಎನ್ನಲಾಗಿದೆ.

ವರದಿಗಳ ಪ್ರಕಾರ, ಈ ಜೋಡಿಯನ್ನು "ಗೌರವದ ಹೆಸರಲ್ಲಿ ಹ*ತ್ಯೆ" ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅಂದರೆ, ಕುಟುಂಬದ ಅಥವಾ ಧರ್ಮದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂಬ ಕಾರಣಕ್ಕೆ ಇವರನ್ನು ಕೊ*ಲೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ಹೊಸದೇನಲ್ಲದಿದ್ದರೂ, ಈ ಬಾರಿ ಒಂದು ವೈರಲ್ ಜೋಡಿಗೆ ಇಂತಹ ಸ್ಥಿತಿ ಬಂದಿರೋದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಅತ್ಯಂತ ಆಘಾತಕಾರಿ ವಿಷಯವೆಂದರೆ, ಪಾಕಿಸ್ತಾನ ಸರ್ಕಾರ ಮತ್ತು ಅಲ್ಲಿನ ಮಾಧ್ಯಮಗಳು ಈ ಸುದ್ದಿಯನ್ನು ಸೆನ್ಸಾರ್ ಮಾಡಿವೆಯಂತೆ. ಅಂದರೆ, ಈ ಕೊ*ಲೆಯ ವಿಷಯ ಹೊರಜಗತ್ತಿಗೆ ತಿಳಿಯದಂತೆ ಅಲ್ಲಿನ ವ್ಯವಸ್ಥೆ ಸುದ್ದಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂಟರ್ನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿರುವ ಅಕೌಂಟ್‌ಗಳ ಮೇಲೆ ನಿಗಾ ಇಡಲಾಗುತ್ತಿದೆ ಮತ್ತು ಸುದ್ದಿಯನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ಜಗತ್ತಿನಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಪ್ರೀತಿ ಮಾಡೋದು ಇಷ್ಟೊಂದು ದೊಡ್ಡ ಅಪರಾಧನಾ?", "ಒಬ್ಬ ಮನುಷ್ಯ ತನಗೆ ಇಷ್ಟ ಬಂದವರ ಜೊತೆ ಬದುಕುವ ಹಕ್ಕು ಇಲ್ವಾ?" ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಅನ್ನೋದಕ್ಕೆ ಇದೊಂದು ಸಾಕ್ಷಿ ಅಂತ ಮಾನವ ಹಕ್ಕುಗಳ ಕಾರ್ಯಕರ್ತರು ಕಿಡಿಕಾರುತ್ತಿದ್ದಾರೆ.

ಪ್ರೀತಿಯ ಹೆಸರಲ್ಲಿ ಒಂದಾಗಬೇಕಿದ್ದ ಎರಡು ಜೀವಗಳು ಈ ರೀತಿ ಕ್ರೂರವಾಗಿ ಅಂತ್ಯವಾಗಿರೋದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತ ವಿಷಯ. ಸುದ್ದಿಯನ್ನು ಎಷ್ಟು ದಿನ ಅಂತ ಮುಚ್ಚಿಡಲು ಸಾಧ್ಯ? ಸತ್ಯ ಯಾವತ್ತಿದ್ದರೂ ಹೊರಬಂದೇ ಬರುತ್ತೆ.

Latest News