"ಇಲ್ಲದೇ ಇರೋ ಏರ್‌ಬೇಸ್ ಮೇಲೆ ಬಾಂಬ್ ಹಾಕಿದ್ವಿ" - ಪಾಕ್ ಸೇನೆಯ ಹೊಸ ಕಾಮಿಡಿ; ಇಂಟರ್ನೆಟ್‌ನಲ್ಲಿ ಬಾರಿ ವೈರಲ್!!

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಅಥವಾ ಸಣ್ಣ ಮಟ್ಟದ ಜಟಾಪಟಿ ನಡೆದಾಗಲೆಲ್ಲಾ ಪಾಕಿಸ್ತಾನದ ಸೇನೆ ಏನಾದ್ರೂ ಒಂದು ಎಡವಟ್ಟು ಮಾಡಿಕೊಂಡು ಇಡೀ ಜಗತ್ತಿನ ಮುಂದೆ ನಗೆಪಾಟಲಾಗುವುದು ನಮಗೆಲ್ಲಾ ಗೊತ್ತೇ ಇದೆ. ಈಗ ಅಂತಹದ್ದೇ ಒಂದು ಹೊಸ ಹೈ-ಲೆವೆಲ್ ಕಾಮಿಡಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡ್ತಾ ಇದೆ. ಭಾರತದಲ್ಲಿ ಅಸ್ತಿತ್ವದಲ್ಲೇ ಇಲ್ಲದ, ಕೇವಲ ಕಾಗದದ ಮೇಲೂ ಇಲ್ಲದ, ಮ್ಯಾಪ್ನಲ್ಲಿಲ್ಲದ ಭಾರತದ ಏರ್‌ಬೇಸ್‌ಗಳನ್ನು ನಾವು ಧ್ವಂಸ ಮಾಡ್ಬಿಟ್ವಿ ಅಂತ ಪಾಕಿಸ್ತಾನದ ಆರ್ಮಿ ಆಫೀಸರ್ ಒಬ್ಬರು ಟಿವಿಯಲ್ಲಿ ಲೈವ್ ಆಗಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ!

ಟಿವಿ ಲೈವ್‌ನಲ್ಲಿ ಸುಳ್ಳು ಹೇಳಿದ ಪಾಕ್ ಕ್ಯಾಪ್ಟನ್! | Photo Credit: https://x.com/yuvasankalpin
ಟಿವಿ ಲೈವ್‌ನಲ್ಲಿ ಸುಳ್ಳು ಹೇಳಿದ ಪಾಕ್ ಕ್ಯಾಪ್ಟನ್! | Photo Credit: https://x.com/yuvasankalpin

ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕ್ ನಡುವೆ ಸಖತ್ ಟೆನ್ಷನ್ ಕ್ರಿಯೇಟ್ ಆಗಿತ್ತು. ಭಾರತ ಇದಕ್ಕೆ ಪ್ರತಿಯಾಗಿ 'ಆಪರೇಷನ್ ಸಿಂಧೂರ್' ನಡೆಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿತ್ತು. ಇದಕ್ಕೆ ಕೌಂಟರ್ ಕೊಡಲು ಪಾಕಿಸ್ತಾನ ಕೂಡ 'ಆಪರೇಷನ್ ಬುನ್ಯಾನ್-ಉನ್-ಮರ್ಸೂಸ್' ಎಂಬ ಹೆಸರಿನಲ್ಲಿ ಭಾರತದ ಮೇಲೆ ಡ್ರೋನ್ ಮತ್ತು ಮಿಸೈಲ್ ದಾಳಿ ಮಾಡಿದ್ದಾಗಿ ಭೀಗಿಕೊಂಡಿತ್ತು. ಆದ್ರೆ ಈಗ ಪಾಕ್ ಮಿಲಿಟರಿ ಅಧಿಕಾರಿಯೊಬ್ಬರ ಇಂಟರ್ವ್ಯೂ ವಿಡಿಯೋ ವೈರಲ್ ಆಗಿದ್ದು, ಮುನೀರ್ ಸೇನೆಯ ಅಸಲಿ ಯೋಗ್ಯತೆ ಇಂಟರ್ನೆಟ್‌ನಲ್ಲಿ ಹರಾಜಾಗಿದೆ.

ಪಾಕ್ ಸೇನೆಯ ಫಜೀತಿಗೆ ಕಾರಣವಾದ ಮುಖ್ಯಾಂಶಗಳು (Highlights):

ಇಲ್ಲದ ಏರ್‌ಬೇಸ್ ಮೇಲೆ ದಾಳಿ ಭಾಷಣ: ಪಾಕ್ ಸೇನೆಯ ಕ್ಯಾಪ್ಟನ್ ಮುನೀಬ್ ಜಮಾಲ್ ಭಾರತದ 'ರಾಜೌರಿ' ಮತ್ತು 'ಮಾಮೂನ್' ಏರ್‌ಬೇಸ್‌ಗಳನ್ನು ಉಡೀಸ್ ಮಾಡಿದ್ದಾಗಿ ಟಿವಿಯಲ್ಲಿ ಸುಳ್ಳು ಹೇಳಿದ್ದಾರೆ.

ಅಸಲಿ ಸತ್ಯ ಬಯಲು: ಭಾರತೀಯ ವಾಯುಸೇನೆಯಲ್ಲಿ (IAF) ಈ ಹೆಸರಿನ ಯಾವುದೇ ಆಪರೇಷನಲ್ ಏರ್‌ಬೇಸ್‌ಗಳೇ ಇಲ್ಲ!

ಗಾಳಿಯಲ್ಲಿ ಹಾರಿದ ಮಿಸೈಲ್: ಪಾಕಿಸ್ತಾನ ಉಡಾಯಿಸಿದ್ದ ಅತ್ಯಾಧುನಿಕ ಫತಾಹ್-2 ಮಿಸೈಲ್ ಅನ್ನು ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಗಾಳಿಯಲ್ಲೇ ಹೊಡೆದುರುಳಿಸಿತ್ತು.

ಟಿವಿ ಲೈವ್‌ನಲ್ಲೇ ಪಾಕ್ ಕ್ಯಾಪ್ಟನ್ ಬಿಟ್ಟ ಬಿಗ್ ಬಿಡುಗಡೆ!

ಆಗಿದ್ದೇನಪ್ಪಾ ಅಂದ್ರೆ, ಪಾಕಿಸ್ತಾನದ ಲೋಕಲ್ ಟಿವಿ ಚಾನೆಲ್ ಒಂದರಲ್ಲಿ ಆ ದೇಶದ 'ಫತಾಹ್-1' ಮಿಸೈಲ್ ಆಪರೇಷನ್ ಹೆಡ್ ಆಗಿದ್ದ ಕ್ಯಾಪ್ಟನ್ ಮುನೀಬ್ ಜಮಾಲ್ ಎಂಬ ಅಧಿಕಾರಿಯ ಇಂಟರ್ವ್ಯೂ ನಡೀತಾ ಇತ್ತು. ಆ ಶೋನಲ್ಲಿ ಆಂಕರ್, "ನಮ್ಮ ಮಿಸೈಲ್‌ಗಳು ಭಾರತದ ಟಾರ್ಗೆಟ್‌ಗಳನ್ನು ಸರಿಯಾಗಿ ಹಿಟ್ ಮಾಡಿದ್ವಾ?" ಅಂತ ಕೇಳಿದ್ದಕ್ಕೆ, ಕ್ಯಾಪ್ಟನ್ ಜಮಾಲ್ ಫುಲ್ ಖುಷಿಯಿಂದ ಬೀಗುತ್ತಾ, "ಹೌದು, ನಮಗೆ ಇಂಡಿಯಾದಲ್ಲಿ ಎರಡು ಮೇನ್ ಟಾರ್ಗೆಟ್‌ಗಳು ಸಿಕ್ಕಿದ್ದವು. ಒಂದು ರಾಜೌರಿ ಏರ್‌ಬೇಸ್ ಮತ್ತು ಇನ್ನೊಂದು ಮಾಮೂನ್ ಏರ್‌ಬೇಸ್. ನಮ್ಮ ಮಿಸೈಲ್‌ಗಳು ಹೋಗಿ ಆ ಎರಡೂ ಏರ್‌ಬೇಸ್‌ಗಳನ್ನು ನೆಸ್ತಾಬೂದ್ (ಧ್ವಂಸ) ಮಾಡಿ ಬಂದಿವೆ" ಅಂತ ದೊಡ್ಡದಾಗಿ ಸುಳ್ಳು ಹೇಳಿಬಿಟ್ಟರು!

ಗೂಗಲ್ ಮ್ಯಾಪ್ ಚಕ್ ಮಾಡಿದ ನೆಟ್ಟಿಗರು; ಬಯಲಾಯ್ತು ಪಾಕ್ ಸುಳ್ಳು!

ಕ್ಯಾಪ್ಟನ್ ಜಮಾಲ್ ಈ ಸ್ಟೇಟ್‌ಮೆಂಟ್ ಕೊಟ್ಟ ತಕ್ಷಣ ಡಿಫೆನ್ಸ್ ಎಕ್ಸ್‌ಪರ್ಟ್‌ಗಳು ಮತ್ತು ನೆಟ್ಟಿಗರು ಭಾರತದ ಮ್ಯಾಪ್ ಹಾಗೂ ವಾಯುಸೇನೆಯ ಲಿಸ್ಟ್ ಚೆಕ್ ಮಾಡೋಕೆ ಸ್ಟಾರ್ಟ್ ಮಾಡಿದರು. ಆಮೇಲೆ ಅಲ್ವಾ ಗೊತ್ತಾಗಿದ್ದು ಪಾಕ್ ಸೇನೆ ಮಾಡಿರೋ ಬಿಗ್ ಕಾಮಿಡಿ! ಅಸಲಿ ಸತ್ಯ ಏನೆಂದರೆ:

ರಾಜೌರಿ (Rajouri): ಇದು ಜಮ್ಮು-ಕಾಶ್ಮೀರದ ಒಂದು ಜಿಲ್ಲೆಯ ಹೆಸರು. ಆದರೆ ಇಲ್ಲಿ ಭಾರತೀಯ ವಾಯುಸೇನೆಯ ಯಾವುದೇ ಆಪರೇಷನಲ್ ಏರ್‌ಬೇಸ್ (Airbase) ಇಲ್ಲವೇ ಇಲ್ಲ!

ಮಾಮೂನ್ (Mamun): ಇದು ಪಂಜಾಬ್‌ನ ಪಠಾಣ್‌ಕೋಟ್ ಹತ್ತಿರ ಇರೋ ಮಿಲಿಟರಿ ಕ್ಯಾಂಟೋನ್ಮೆಂಟ್ (ಸೇನಾ ಚಾವಣಿ) ವಲಯ ಅಷ್ಟೇ, ಇದೂ ಕೂಡ ಯಾವುದೇ ಏರ್‌ಬೇಸ್ ಅಲ್ಲ.

ಅಷ್ಟೇ ಅಲ್ಲ, ಮಿಸೈಲ್ ಲಾಂಚ್ ಮಾಡುವಾಗ ಸುತ್ತಮುತ್ತ ಸಾರ್ವಜನಿಕರು ನಿಂತು ವಿಡಿಯೋ ಮಾಡ್ತಾ ಇದ್ದರಲ್ಲಾ, ಇದರಿಂದ ಮಿಲಿಟರಿ ಸೀಕ್ರೆಟ್ ಲೀಕ್ ಆಗಲ್ವಾ ಅಂತ ಆಂಕರ್ ಕೇಳಿದ್ದಕ್ಕೆ, "ಜನರು ಪಕ್ಕದಲ್ಲೇ ನಿಂತಿದ್ದರಿಂದ ನಮ್ಮ ಜವಾನರ ಜೋಶ್ ಇನ್ನು ಜಾಸ್ತಿ ಆಯ್ತು" ಅಂತ ಆಫೀಸರ್ ಸಖತ್ ಫನ್ನಿ ಲಾಜಿಕ್ ಕೊಟ್ಟಿದ್ದಾರೆ. ಇದನ್ನು ನೋಡಿ ಎಕ್ಸ್ (ಟ್ವಿಟರ್) ನಲ್ಲಿ ಜನ ಪಾಕ್ ಆರ್ಮಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಾ ಮೀಮ್ಸ್ ಹಬ್ಬಿಸುತ್ತಿದ್ದಾರೆ.

ಅಸಲಿ ಕಥೆ ಬೇರೆಯೇ ಇತ್ತು!

ಪಾಕಿಸ್ತಾನ ಏನೋ ದೊಡ್ಡದಾಗಿ ದಾಳಿ ಮಾಡಿದೆ ಅಂತ ಬಿಲ್ಡಪ್ ತಗೋತಾ ಇದೆ, ಆದ್ರೆ ಅಸಲಿ ಸತ್ಯ ಏನೆಂದರೆ ಸೆಪ್ಟೆಂಬರ್ 2025 ರ ಸುಮಾರಿಗೆ ಶ್ರೀನಗರದ ಪ್ರಸಿದ್ಧ ದಾಲ್ ಲೇಕ್ (Dal Lake) ನಿಂದ ಒಂದು ಮಿಸೈಲ್‌ನ ಅವಶೇಷಗಳನ್ನು ಆಚೆ ತೆಗೆಯಲಾಗಿತ್ತು, ಅದು ಪಾಕಿಸ್ತಾನದ ಫತಾಹ್-1 ಮಿಸೈಲ್ ಆಗಿತ್ತು. ಅಂದರೆ ಇವರ ಮಿಸೈಲ್ ಭಾರತದ ಯಾವ ಸೇನಾ ನೆಲೆಯನ್ನೂ ಮುಟ್ಟದೆ ಎಲ್ಲೋ ಕೆರೆಯಲ್ಲಿ ಬಿದ್ದಿತ್ತು! ಅಷ್ಟೇ ಅಲ್ಲ, ಪಾಕಿಸ್ತಾನ ಭಾರತದ ಪ್ರಮುಖ ರಣತಂತ್ರದ ಜಾಗದ ಮೇಲೆ ದಾಳಿ ಮಾಡಲು ಉಡಾಯಿಸಿದ್ದ ತನ್ನ ಅತ್ಯಾಧುನಿಕ 'ಫತಾಹ್-2' ಮಿಸೈಲ್ ಅನ್ನು ಭಾರತದ ರಕ್ಷಣಾ ವ್ಯವಸ್ಥೆಯು ಸಿರ್ಸಾ (Sirsa) ಬಳಿ ಗಾಳಿಯಲ್ಲೇ ಹೊಡೆದು ಪುಡಿಪುಡಿ ಮಾಡಿತ್ತು.

ಒಟ್ಟಿನಲ್ಲಿ, ತನ್ನದೇ ಮಿಸೈಲ್ ಗಾಳಿಯಲ್ಲಿ ಪೀಸ್ ಪೀಸ್ ಆಗಿದ್ದನ್ನು ಮುಚ್ಚಿ ಹಾಕಲು ಪಾಕ್ ಸೇನೆ ಈಗ ಇಲ್ಲದ ಏರ್‌ಬೇಸ್ ಕಥೆ ಕಟ್ಟಿ ಇಡೀ ಜಗತ್ತಿನ ಮುಂದೆ ಮತ್ತೊಮ್ಮೆ ಜೋಕರ್ ಆಗಿದೆ!  

Latest News