Mar 3, 2026 Languages : ಕನ್ನಡ | English

ಇಸ್ರೇಲ್ ವಿರುದ್ಧ ಇರಾನ್‌ಗೆ ಉತ್ತರ ಕೊರಿಯಾ ಬೆಂಬಲ - ಕಿಮ್ ಜೊಂಗ್ ಉನ್ ನೀಡಿದ ಭೀಕರ ಎಚ್ಚರಿಕೆ ಏನು?

ಜಗತ್ತನ್ನೇ ಯುದ್ಧದ ಅಂಚಿಗೆ ತಳ್ಳುವಂತಹ ಹೇಳಿಕೆಯನ್ನು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನೀಡಿದ್ದಾರೆ. ಇರಾನ್‌ನ ನಾಯಕತ್ವದಲ್ಲಿನ ಅನಿಶ್ಚಿತತೆಯ ಲಾಭ ಪಡೆಯಲು ಮುಂದಾಗಿರುವ ಕಿಮ್, ಇಸ್ರೇಲ್ ಅನ್ನು ಭೂಪಟದಿಂದ ಅಳಿಸಿಹಾಕುವ ಬೆದರಿಕೆ ಹಾಕಿದ್ದಾರೆ. ಇರಾನ್‌ಗೆ ಉತ್ತರ ಕೊರಿಯಾದ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನ ವರ್ಗಾವಣೆಯಾಗುವ ಈ ಸೂಚನೆಯು, ಪ್ರಾದೇಶಿಕ ಸಂಘರ್ಷವು ಜಾಗತಿಕ ಯುದ್ಧವಾಗಿ ಬದಲಾಗುವ ಲಕ್ಷಣಗಳನ್ನು ಎಚ್ಚರಿಸುತ್ತಿದೆ.

ಆಪರೇಷನ್ ಎಪಿಕ್ ಫ್ಯೂರಿ’ಗೆ ಪ್ರತಿಕ್ರಿಯೆ – ಕಿಮ್ ಜೊಂಗ್ ಉನ್ ಹೇಳಿಕೆ!!
ಆಪರೇಷನ್ ಎಪಿಕ್ ಫ್ಯೂರಿ’ಗೆ ಪ್ರತಿಕ್ರಿಯೆ – ಕಿಮ್ ಜೊಂಗ್ ಉನ್ ಹೇಳಿಕೆ!!

ಇತ್ತೀಚೆಗೆ ನಡೆದ ಉನ್ನತ ಮಟ್ಟದ ಮಿಲಿಟರಿ ಸಭೆಯಲ್ಲಿ ಮಾತನಾಡಿದ ಕಿಮ್, ಇರಾನ್ ಕೇಳಿದರೆ ನಾವು ಇಸ್ರೇಲ್ ವಿರುದ್ಧ ಬಳಸಲು ಕ್ಷಿಪಣಿಗಳನ್ನ ನೀಡುತ್ತೇವೆ. ನಮ್ಮ ತಂತ್ರಜ್ಞಾನವು ಸಾಬೀತಾಗಿದೆ, ಇಸ್ರೇಲ್ ಅನ್ನು ನಾಶಪಡಿಸಲು ನಮ್ಮ ಒಂದು ಕ್ಷಿಪಣಿ ಸಾಕು, ಎಂದು ಗುಡುಗಿದ್ದಾರೆ. ಇದು ಕೇವಲ ಮಾತಲ್ಲ, ಬದಲಿಗೆ ಇಡೀ ವಿಶ್ವದ ಶಾಂತಿಗೆ ಎದುರಾಗಿರುವ ದೊಡ್ಡ ಬೆದರಿಕೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಆಪರೇಷನ್ ಎಪಿಕ್ ಫ್ಯೂರಿ ಕಾರ್ಯಾಚರಣೆಯನ್ನು ಉತ್ತರ ಕೊರಿಯಾ ತೀವ್ರವಾಗಿ ಟೀಕಿಸಿದೆ. ಉತ್ತರ ಕೊರಿಯಾ ಮತ್ತು ಇರಾನ್ ನಡುವೆ ದಶಕಗಳಿಂದಲೂ ರಹಸ್ಯವಾದ ಕ್ಷಿಪಣಿ ಸಂಬಂಧ ಇದೆ ಎಂದು ಗುಪ್ತಚರ ಇಲಾಖೆಗಳು ಹೇಳುತ್ತಿವೆ. ಇವುಗಳ ನಡುವಿನ ಪ್ರಮುಖ ಅಂಶಗಳು ಹೀಗಿವೆ

  • ತಂತ್ರಜ್ಞಾನ ವರ್ಗಾವಣೆ: ಇರಾನ್ ಬಳಸುತ್ತಿರುವ ಅನೇಕ ಕ್ಷಿಪಣಿಗಳು ಉತ್ತರ ಕೊರಿಯಾದ ವಿನ್ಯಾಸಗಳನ್ನು ಆಧರಿಸಿವೆ.
  • ತಜ್ಞರ ನೆರವು: ಉತ್ತರ ಕೊರಿಯಾದ ಇಂಜಿನಿಯರ್‌ಗಳು ಇರಾನ್‌ನ ಕ್ಷಿಪಣಿ ನಗರಗಳಲ್ಲಿ ವಾಸಿಸುತ್ತಿದ್ದು, ಅಲ್ಲಿನ ಶಸ್ತ್ರಾಸ್ತ್ರಗಳನ್ನ ಆಧುನೀಕರಿಸಲು ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
  • ವ್ಯಾಪಾರ: ಅಂತರಾಷ್ಟ್ರೀಯ ನಿರ್ಬಂಧಗಳನ್ನ ಎದುರಿಸುತ್ತಿರುವ ಈ ಎರಡೂ ದೇಶಗಳು, ತೈಲದ ಬದಲಿಗೆ ಶಸ್ತ್ರಾಸ್ತ್ರಗಳನ್ನ ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ಸಹಾಯ ಮಾಡಿಕೊಳ್ಳುತ್ತಿವೆ.

ಪರಮಾಣು ಶಕ್ತಿ ಹೊಂದಿರುವ ಉತ್ತರ ಕೊರಿಯಾವು ತನ್ನ ಅತ್ಯಾಧುನಿಕ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಅಥವಾ ಅಣ್ವಸ್ತ್ರ ತಂತ್ರಜ್ಞಾನವನ್ನು ಇರಾನ್‌ಗೆ ವರ್ಗಾಯಿಸಿದರೆ, ಅದು ಜಗತ್ತಿನ ಪಾಲಿಗೆ ದೊಡ್ಡ ಗಂಡಾಂತರವಾಗಲಿದೆ. ಈ ಬೆಳವಣಿಗೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳಲ್ಲಿ ಭಾರೀ ಏರಿಳಿತ ಕಾಣುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳ ದರಗಳು ಸಾಮಾನ್ಯ ಜನರ ಕೈಗೆಟುಕದಷ್ಟು ದುಬಾರಿಯಾಗುತ್ತಿವೆ. ಈ ಕಿಮ್-ಇರಾನ್ ಮೈತ್ರಿಯು ವಿಶ್ವದ ಭದ್ರತೆ ಮತ್ತು ಆರ್ಥಿಕತೆ ಎರಡನ್ನೂ ಅಸ್ತವ್ಯಸ್ತಗೊಳಿಸುವ ಮುನ್ಸೂಚನೆ ನೀಡುತ್ತಿದೆ.

ಕಿಮ್ ಜೊಂಗ್ ಉನ್ ಅವರ ಇತ್ತೀಚಿನ ನಡೆ ಮಧ್ಯಪ್ರಾಚ್ಯದ ಬಿಕ್ಕಟ್ಟನ್ನು ಜಾಗತಿಕ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ. ಈ ಪ್ರಚೋದನೆಗೆ ಶ್ವೇತಭವನ ಮೌನವಾಗಿದ್ದರೂ, ಟ್ರಂಪ್ ಅವರ ಈ ಹಿಂದಿನ ಎಚ್ಚರಿಕೆಗಳು ಪ್ರತಿಕಾರದ ಮುನ್ಸೂಚನೆ ನೀಡಿವೆ. ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಪೂರೈಕೆಯನ್ನು ತಡೆಯುವುದೇ ಈಗ ಇಸ್ರೇಲ್ ಮತ್ತು ಅಂತರಾಷ್ಟ್ರೀಯ ಸಮುದಾಯದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಪರಿಸ್ಥಿತಿಯು ಜಾಗತಿಕ ರಕ್ಷಣಾ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Latest News