ವ್ಯಾಲೆಂಟೈನ್ಸ್ ಡೇ ಸ್ಪೆಷಲ್ - ಅಸಲಿಗೆ ಪ್ರೀತಿಯ ಪರಿಶುದ್ಧ ಭಾವನೆ ಹೇಗಿರುತ್ತದೆ ಗೊತ್ತಾ?

ವ್ಯಾಲೆಂಟೈನ್ಸ್ ಡೇ ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಪ್ರೀತಿಯ ಹಬ್ಬವಾಗಿದೆ. ಪ್ರೀತಿ ಅಂದ್ರೆ ಒಂದು ಪರಿಶುದ್ಧ ಭಾವನೆ. ಅದು ಕೇವಲ ಆಕರ್ಷಣೆ ಅಥವಾ ದೈಹಿಕ ಸೌಂದರ್ಯಕ್ಕೆ ಸೀಮಿತವಾಗಿರುವುದಿಲ್ಲ. ನಿಜವಾದ ಪ್ರೀತಿ ಅಂದ್ರೆ ಎರಡು ಮನಸ್ಸುಗಳ ನಡುವಿನ ಅವಿನಾಭಾವ ಸಂಬಂಧ. ಎರಡು ದೇಹ ಸೇರೋದು ಪ್ರೀತಿಯಲ್ಲ, ಎರಡು ಆತ್ಮಗಳು ಒಂದಾಗಿ ಕೊನೆಯವರೆಗೂ ಜೊತೆಗಿರುವುದು ನಿಜವಾದ ಪ್ರೀತಿ.

ಫೇಕ್ ಲವ್ ವಿರುದ್ಧ ನಿಜವಾದ ಪ್ರೀತಿ – ವ್ಯಾಲೆಂಟೈನ್ಸ್ ಸಂದೇಶ
ಫೇಕ್ ಲವ್ ವಿರುದ್ಧ ನಿಜವಾದ ಪ್ರೀತಿ – ವ್ಯಾಲೆಂಟೈನ್ಸ್ ಸಂದೇಶ

ಇಂದಿನ ಜನರೇಷನ್‌ನಲ್ಲಿ ನಿಜವಾದ ಪ್ರೀತಿಗೆ ಮೌಲ್ಯ ಕಡಿಮೆಯಾಗುತ್ತಿರುವಂತೆ ಕಾಣುತ್ತದೆ. ಹಲವರು ಪ್ರೀತಿಯನ್ನು ಕೇವಲ ಟೈಮ್ ಪಾಸ್ ಎಂದುಕೊಂಡು ಮಾಡುತ್ತಿದ್ದಾರೆ. ಮನಸ್ಸಿನಿಂದ ಪ್ರೀತಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಫೇಕ್ ಲವ್ ಅಂದ್ರೆ ಅದು ಕೇವಲ ದೈಹಿಕ ಆಕರ್ಷಣೆ ಅಥವಾ ಹೊರಗಿನ ತೋರಿಕೆಗೆ ಸೀಮಿತವಾಗಿರುತ್ತದೆ. ಇಂತಹ ಸಂಬಂಧಗಳಲ್ಲಿ ಮನಸ್ಸಿನ ಆಳದ ಬಾಂಧವ್ಯಕ್ಕಿಂತ ಹೊರಗಿನ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ.

ಇಂದಿನ ಕಾಲದಲ್ಲಿ, ಕೈಯಲ್ಲಿರುವ ಫೋನ್ ಬದಲಾಯಿಸಿದಂತೆ, ಒಬ್ಬರಿಗಿಂತ ಉತ್ತಮ ವ್ಯಕ್ತಿ ಸಿಕ್ಕ ತಕ್ಷಣ ಹಳೆಯ ಪ್ರೀತಿಯನ್ನು ಮರೆತು ಬಿಡುವುದು ಟ್ರೆಂಡ್ ಆಗಿದೆ. ಆದರೆ ವಿಪರ್ಯಾಸ ಅಂದ್ರೆ ನಿಜವಾಗಿಯೂ ಮನಸ್ಸಿನಿಂದ ಪ್ರೀತಿಸುವವರಿಗೆ ಸರಿಯಾದ ಸಂಗಾತಿ ಸಿಗುವುದಿಲ್ಲ. ನಿಜವಾದ ಪ್ರೀತಿ ಅಂದ್ರೆ ಏನೇ ಕಷ್ಟ, ನೋವು, ದುಃಖ ಬಂದರೂ ಕೊನೆಯವರೆಗೂ ಮೋಸ ಮಾಡದೆ ಜೊತೆಗಿರುವುದು. ನಾವು ಖುಷಿಯಾಗಿರುವಾಗ ಯಾರಾದರೂ ನಮ್ಮ ಜೊತೆಗಿರುತ್ತಾರೆ. ಆದರೆ ನಾವು ಕುಗ್ಗಿದಾಗ, ನೋವಿನಲ್ಲಿ ಇದ್ದಾಗ, ಜೀವನದಲ್ಲಿ ಸೋತಾಗ, ಮುಂದೆ ದಾರಿ ಕಾಣದಾಗ ನಮ್ಮನ್ನು ಪ್ರೋತ್ಸಾಹಿಸಿ, ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲಿಸುವ ವ್ಯಕ್ತಿಯೇ ನಿಜವಾದ ಪ್ರೇಮಿ.

ನಿಜವಾದ ಪ್ರೀತಿಯಲ್ಲಿ ‘ನಾನು’ ಎನ್ನುವುದಕ್ಕಿಂತ ‘ನಾವು’ ಎನ್ನುವ ಭಾವನೆ ಮುಖ್ಯ. ನಂಬಿಕೆ ಮತ್ತು ಗೌರವವು ಪ್ರೀತಿಯ ಅಡಿಪಾಯ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಅನುಮಾನ ಪಡದೆ, ಪರಸ್ಪರರ ಕನಸು, ನಿರ್ಧಾರ ಮತ್ತು ವ್ಯಕ್ತಿತ್ವಕ್ಕೆ ಗೌರವ ನೀಡುವುದು ನಿಜವಾದ ಪ್ರೀತಿಯ ಲಕ್ಷಣ. ಸಂಬಂಧ ಅಂದಮೇಲೆ ಜಗಳ, ಮುನಿಸು ಸಾಮಾನ್ಯ. ಆದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು, ಸಂಬಂಧವನ್ನು ಉಳಿಸಿಕೊಳ್ಳಲು ಅಹಂಕಾರವನ್ನು ಬಿಟ್ಟುಬಿಡುವುದು ನಿಜವಾದ ಪ್ರೀತಿಯ ಗುರುತು. ನಿಜವಾದ ಪ್ರೀತಿಯ ಇನ್ನೊಂದು ಅದ್ಭುತ ಅಂಶ ಅಂದ್ರೆ, ಕಾಲ ಕಳೆದಂತೆ ಸೌಂದರ್ಯ ಕಡಿಮೆಯಾಗಬಹುದು, ಆದರೆ ಮನಸ್ಸಿನ ಪ್ರೀತಿ ಮತ್ತು ಕಾಳಜಿ ಎಂದಿಗೂ ಕಡಿಮೆಯಾಗಬಾರದು.

ಸರಳವಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿಯ ಎಲ್ಲಾ ಗುಣ-ದೋಷಗಳನ್ನು ಒಪ್ಪಿಕೊಂಡು, ಕೊನೆಯವರೆಗೂ ಅವರ ನೆರಳಾಗಿ ಜೊತೆಗಿರುವುದೇ ನಿಜವಾದ ಪ್ರೀತಿ. ಪ್ರೀತಿ ಅಂದ್ರೆ ಕೇವಲ ಹಬ್ಬದ ದಿನ ಆಚರಣೆ ಅಲ್ಲ, ಅದು ಜೀವನದ ಪ್ರತಿಯೊಂದು ಕ್ಷಣದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವ, ಗೌರವಿಸುವ, ನಂಬಿಕೆ ಇಡುವ ಶಾಶ್ವತ ಬಾಂಧವ್ಯ. 

Latest News

Related News