ವಾಲೆಂಟೈನ್ಸ್ ಡೇ ಅಥವಾ ಸೇಂಟ್ ವಾಲೆಂಟೈನ್ಸ್ ಡೇ ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಇದು ಪ್ರೀತಿಯ ದಿನವೆಂದು ಪರಿಗಣಿಸಲಾಗುತ್ತದೆ. ಪ್ರೇಮಿಗಳು, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ತಮ್ಮ ಅಭಿಮಾನವನ್ನು ಹಂಚಿಕೊಳ್ಳುವ ದಿನವಾಗಿದೆ. ಅದಕ್ಕಿಂತ ಮುಂಚೆ ಕೆಲವೊಂದಿಷ್ಟು ಹೂವುಗಳ ಸಂಕೇತದ ಬಗ್ಗೆ ಅವುಗಳ ವಿಶೇಷತೆ ಬಗ್ಗೆ ತಿಳಿದುಕೊಳ್ಳೋಣ. ಗುಲಾಬಿ ಹೂವು ಎಂದರೆ ಪ್ರೀತಿಯ ಸಂಕೇತ. ಆದರೆ ಅದರ ಬಣ್ಣವೇ ಪ್ರೀತಿಯ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತದೆ. ಪ್ರತಿ ಬಣ್ಣಕ್ಕೂ ತನ್ನದೇ ಆದ ಅರ್ಥವಿದೆ. ಇದನ್ನು "Color Psychology of Roses" ಎಂದು ಕರೆಯಲಾಗುತ್ತದೆ.
ಕೆಂಪು ಗುಲಾಬಿ
ಕೆಂಪು ಗುಲಾಬಿ ಎಂದರೆ ಶಾಶ್ವತ ಪ್ರೀತಿ, ಆಕರ್ಷಣೆ ಎನ್ನಲಾಗಿದೆ. ಇದು ಪ್ರೀತಿಯ ಅತ್ಯಂತ ಬಲವಾದ ಸಂಕೇತ. ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚು ಬಳಸುವ ಬಣ್ಣ.
ಬಿಳಿ ಗುಲಾಬಿ
ಬಿಳಿ ಗುಲಾಬಿ ಶುದ್ಧತೆ, ನಿಷ್ಠೆ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಮದುವೆ, ಶಾಂತಿ ಮತ್ತು ಸ್ನೇಹದ ಸಂಕೇತವಾಗಿ ಇದನ್ನು ನೀಡಲಾಗುತ್ತದೆ. ಇದು ಪ್ರೀತಿಯ ಪವಿತ್ರತೆಯನ್ನು ತೋರಿಸುತ್ತದೆ.
ಹಳದಿ ಮತ್ತು ಗುಲಾಬಿ ಬಣ್ಣದ ಗುಲಾಬಿ
ಹಳದಿ ಗುಲಾಬಿ ಸ್ನೇಹ, ಸಂತೋಷ ಮತ್ತು ಹರ್ಷದ ಸಂಕೇತ. ಇದು ಪ್ರೀತಿಗಿಂತಲೂ ಸ್ನೇಹವನ್ನು ಹೆಚ್ಚು ಪ್ರತಿನಿಧಿಸುತ್ತದೆ. ಗುಲಾಬಿ ಬಣ್ಣದ ಗುಲಾಬಿ ಕೃತಜ್ಞತೆ, ಗೌರವ ಮತ್ತು ಮೃದುಭಾವವನ್ನು ತೋರಿಸುತ್ತದೆ. ಅಭಿಮಾನ ಮತ್ತು ಗೌರವವನ್ನು ವ್ಯಕ್ತಪಡಿಸಲು ಈ ಬಣ್ಣ ಬಳಸಲಾಗುತ್ತದೆ.
ಕಪ್ಪು ಮತ್ತು ನೇರಳೆ ಗುಲಾಬಿ
ಕಪ್ಪು ಗುಲಾಬಿ ವಿರಹ, ಅಂತ್ಯ ಅಥವಾ ಹೊಸ ಆರಂಭದ ಸಂಕೇತ. ಇದು ಅಪರೂಪದ ಬಣ್ಣವಾಗಿದ್ದು, ಆಳವಾದ ಭಾವನೆಗಳನ್ನು ತೋರಿಸುತ್ತದೆ. ನೇರಳೆ ಗುಲಾಬಿ ಮಂತ್ರಮುಗ್ಧತೆ, ಆಕರ್ಷಣೆ ಮತ್ತು ವಿಶೇಷತೆಯನ್ನು ಸೂಚಿಸುತ್ತದೆ. ಮೊದಲ ನೋಟದಲ್ಲೇ ಪ್ರೀತಿಯ ಭಾವನೆಗಳನ್ನು ತೋರಿಸಲು ಬಳಸಲಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ, ಗುಲಾಬಿಯ ಬಣ್ಣವೇ ಪ್ರೀತಿಯ ಭಾವನೆಗಳನ್ನು ಹೇಳುತ್ತದೆ. ಪ್ರೀತಿಯ ತೀವ್ರತೆ, ಸ್ನೇಹದ ಮೃದುಭಾವ ಅಥವಾ ಹೊಸ ಆರಂಭ – ಎಲ್ಲವನ್ನೂ ಗುಲಾಬಿಯ ಬಣ್ಣಗಳು ವ್ಯಕ್ತಪಡಿಸುತ್ತವೆ. ಹೀಗಾಗಿ, ಪ್ರೀತಿಯನ್ನು ವ್ಯಕ್ತಪಡಿಸುವಾಗ ಬಣ್ಣದ ಆಯ್ಕೆಗೂ ವಿಶೇಷ ಅರ್ಥವಿದೆ.