Feb 16, 2026 Languages : ಕನ್ನಡ | English

ಶಿವರಾತ್ರಿಗೆ ಮುನ್ನ ಗ್ರಾಹಕರಿಗೆ ದರ ಏರಿಕೆ ಶಾಕ್ - ಬೆಂಗಳೂರಿನಲ್ಲಿ ಮಲ್ಲಿಗೆ ದರ ₹1400ಕ್ಕೆ ಜಿಗಿತ!!

ನಾಳೆ ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಶಿವನ ಪೂಜೆಗೆ ಭಕ್ತರು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಹಬ್ಬದ ಮುನ್ನಾದಿನ ಮಾರುಕಟ್ಟೆಗೆ ಹೋದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೂವು ಮತ್ತು ಹಣ್ಣುಗಳ ದರ ಗಗನಕ್ಕೇರಿರುವುದು ಗ್ರಾಹಕರನ್ನು ಅಚ್ಚರಿಗೊಳಿಸಿದೆ.

ಯಾವ ಹಣ್ಣು, ಹೂವಿನ ದರ ಎಷ್ಟಿದೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್.
ಯಾವ ಹಣ್ಣು, ಹೂವಿನ ದರ ಎಷ್ಟಿದೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್.
  • ಬೆಂಗಳೂರು ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್ ಮತ್ತು ಯಶವಂತಪುರ ಪ್ರದೇಶಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ದರವನ್ನು ಏರಿಸಿದ್ದಾರೆ.

ಹೂಗಳ ದರ ಏರಿಕೆ

ಶಿವರಾತ್ರಿ ಪೂಜೆಗೆ ಅಗತ್ಯವಾದ ಬಿಲ್ವಪತ್ರೆಗೂ ಭಾರೀ ಬೇಡಿಕೆ ಇದೆ. ಕಳೆದ ವಾರಕ್ಕೆ ಹೋಲಿಸಿದರೆ ಹೂಗಳ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ.

  • ಸೇವಂತಿ: ₹200 ರಿಂದ ₹250
  • ಗುಲಾಬಿ: ₹150 ರಿಂದ ₹200
  • ಮಲ್ಲಿಗೆ: ₹600 ರಿಂದ ₹1400 (ಭಾರೀ ಏರಿಕೆ)
  • ಕನಕಾಂಬರ: ₹500 ರಿಂದ ₹800
  • ಚೆಂಡು ಹೂವು: ₹40 ರಿಂದ ₹60
  • ಸುಗಂಧ ರಾಜ: ₹60 ರಿಂದ ₹120
  • ತಾವರೆ (ಒಂದಕ್ಕೆ): ₹25 ರಿಂದ ₹40
  • ಕಾಕಡ: ₹300 ರಿಂದ ₹400

ಮಲ್ಲಿಗೆ ಮತ್ತು ಕನಕಾಂಬರ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿರುವುದೇ ಇದರ ಪ್ರಮುಖ ಕಾರಣ.

ಹಣ್ಣುಗಳ ದರ ಹೀಗಿದೆ?

ಶಿವಪೂಜೆಗೆ ಬಳಸುವ ಹಣ್ಣುಗಳ ಬೆಲೆಯಲ್ಲೂ 20-30% ಏರಿಕೆ ಕಂಡುಬಂದಿದೆ.

  • ಸೇಬು: ₹140 ರಿಂದ ₹160
  • ಆರೆಂಜ್: ₹60 ರಿಂದ ₹80
  • ದಾಳಿಂಬೆ: ₹270 ರಿಂದ ₹300
  • ಪಪ್ಪಾಯ: ₹40 ರಿಂದ ₹60
  • ಕಲ್ಲಂಗಡಿ: ₹20 ರಿಂದ ₹30
  • ಯಾಲಕ್ಕಿ ಬಾಳೆಹಣ್ಣು: ₹80 ರಿಂದ ₹120
  • ಕಿವಿ: ₹280 ರಿಂದ ₹300
  • ಸಪೋಟ: ₹60 ರಿಂದ ₹80
  • ಡ್ರ್ಯಾಗನ್ ಫ್ರೂಟ್: ₹100 ರಿಂದ ₹200
  • ಕರಬೂಜ: ₹30 ರಿಂದ ₹50
  • ಬಟರ್ ಫ್ರೂಟ್: ₹250 ರಿಂದ ₹300

ಕಬ್ಬಿನ ಜಲ್ಲೆಗೂ ಬೇಡಿಕೆ ಹೆಚ್ಚಾಗಿದೆ. ಹಬ್ಬದ ದಿನದಂದು ಶಿವಪೂಜೆಗೆ ಹಣ್ಣು, ಹೂವು ಅವಶ್ಯಕವಾಗಿರುವುದರಿಂದ ಗ್ರಾಹಕರು ಬೆಲೆ ಏರಿಕೆಯ ನಡುವೆಯೂ ಖರೀದಿಸಲು ಮುಂದಾಗುತ್ತಿದ್ದಾರೆ.

ಗ್ರಾಹಕರ ಅಳಲು

“ಕಳೆದ ವಾರ ದರ ಕಡಿಮೆ ಇತ್ತು. ಈಗ ಹಬ್ಬ ಹತ್ತಿರ ಬರುತ್ತಿದ್ದಂತೆ ವ್ಯಾಪಾರಿಗಳು ದುಪ್ಪಟ್ಟು ಬೆಲೆ ಕೇಳುತ್ತಿದ್ದಾರೆ. ಆದರೆ ವರ್ಷಕ್ಕೊಮ್ಮೆ ಬರುವ ಹಬ್ಬವಾದ್ದರಿಂದ ದೇವರ ಪೂಜೆಗೆ ತೆಗೆದುಕೊಳ್ಳಲೇಬೇಕು” ಎಂದು ಮಾರುಕಟ್ಟೆಗೆ ಬಂದ ಗ್ರಾಹಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆಯ ನಡುವೆಯೂ ಶಿವಭಕ್ತರು ಜಾಗರಣೆ ಮತ್ತು ಶಿವಪೂಜೆಗೆ ಸಿದ್ಧತೆಗಳನ್ನು ಉತ್ಸಾಹದಿಂದ ಮುಂದುವರಿಸಿದ್ದಾರೆ. ಹಬ್ಬದ ಭಕ್ತಿ ಮತ್ತು ಭಾವನೆಗೆ ಬೆಲೆ ಏರಿಕೆ ಅಡ್ಡಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

Latest News