Jan 25, 2026 Languages : ಕನ್ನಡ | English

ಪತಂಗೋತ್ಸವದಲ್ಲಿ ಬೃಹತ್ ಭಜರಂಗಿ ಗಾಳಿಪಟ - ಹನುಮಾನ್ ಕಾಣುತ್ತಲೇ ಕೈ ಮುಗಿದ ದೃಶ್ಯ!!

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ಪತಂಗೋತ್ಸವದಲ್ಲಿ ಅಚ್ಚರಿಯ ದೃಶ್ಯ ಕಂಡುಬಂದಿದೆ. ಆಕಾಶದಲ್ಲಿ ಹಾರಾಡಿದ ಬೃಹತ್ ಭಜರಂಗಿ ಗಾಳಿಪಟ ಎಲ್ಲೆಡೆ ವೈರಲ್ ಆಗಿ ಜನಮನ ಸೆಳೆದಿದೆ. ಹೌದು ರಾಮ ಭಕ್ತ ಹನುಮಾನದ ಆಕೃತಿ ಹೊಂದಿದ ಈ ಗಾಳಿಪಟವನ್ನು ನೋಡಿದ ಜನರು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮತ್ತಷ್ಟು ಉತ್ಸಾಹಗೊಂಡರು. ಇದು ಕಣಗಳಿ ಫೌಂಡೇಶನ್ ವತಿಯಿಂದ ಸಂಕ್ರಾಂತಿ ಹಬ್ಬದ ನಿಮಿತ್ತ ಆಯೋಜಿಸಲಾದ ಈ ಪತಂಗೋತ್ಸವದಲ್ಲಿ ನಾನಾ ಬಗೆಯ ಗಾಳಿಪಟಗಳು ಆಕಾಶದಲ್ಲಿ ಹಾರಾಡಿದವು. 

ಸಂಕ್ರಾಂತಿ ಸಂಭ್ರಮದಲ್ಲಿ ಆಕಾಶದಲ್ಲಿ ಹಾರಿದ  ಭಜರಂಗಿ ಗಾಳಿಪಟ!!
ಸಂಕ್ರಾಂತಿ ಸಂಭ್ರಮದಲ್ಲಿ ಆಕಾಶದಲ್ಲಿ ಹಾರಿದ ಭಜರಂಗಿ ಗಾಳಿಪಟ!!

ವಿಶೇಷವಾಗಿ ಬೃಹತ್ ಭಜರಂಗಿ ಗಾಳಿಪಟ ಜನರ ಗಮನ ಸೆಳೆಯಿತು. ಹನುಮಾನದ ಆಕೃತಿಯ ಗಾಳಿಪಟ ಆಕಾಶದಲ್ಲಿ ಹಾರಾಡುತ್ತಿದ್ದಂತೆ, ಜನರು ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಈ ಪತಂಗೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಗಾಳಿಪಟ ತಯಾರಿಕೆ ಹಾಗೂ ಹಾರಾಟ ಸ್ಪರ್ಧೆ ಕೂಡ ನಡೆಯಿತು. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ತೋರಿಸಿ, ಬಣ್ಣ ಬಣ್ಣದ ಗಾಳಿಪಟಗಳನ್ನು ತಯಾರಿಸಿ ಆಕಾಶದಲ್ಲಿ ಹಾರಿಸಿದರು. ಮಕ್ಕಳ ಉತ್ಸಾಹ, ಅವರ ಕಲಾತ್ಮಕತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ನೋಡಿದ ಪೋಷಕರು ಮತ್ತು ಶಿಕ್ಷಕರು ಸಂತೋಷಪಟ್ಟರು.

ಹೌದು ಸಂಕೇಶ್ವರ ಪಟ್ಟಣದ ಆಕಾಶದಲ್ಲಿ ಹಾರಾಡಿದ ಗಾಳಿಪಟಗಳು ಹಬ್ಬದ ಸಂಭ್ರಮಕ್ಕೆ ಹೊಸ ಬಣ್ಣ ತುಂಬಿದವು ಎನ್ನಬಹುದು. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪತಂಗ ಹಾರಾಟವು ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದು, ಈ ಬಾರಿ ಭಜರಂಗಿ ಗಾಳಿಪಟದ ಹಾರಾಟ ಜನರಲ್ಲಿ ಕುತೂಹಲ ಮೂಡಿಸಿದೆ. ಜನರು ತಮ್ಮ ಮೊಬೈಲ್‌ಗಳಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಬಜರಂಗಿ ಗಾಳಿಪಟದ ವಿಡಿಯೋಗಳು ಹಾಗೂ ಚಿತ್ರಗಳು ಎಲ್ಲೆಡೆ ವೈರಲ್ ಆಗಿವೆ. ಹನುಮಾನದ ಆಕೃತಿಯ ಗಾಳಿಪಟವನ್ನು ನೋಡಿದವರು “ಇದು ನಿಜಕ್ಕೂ ಅಚ್ಚರಿಯ ಸೃಜನಶೀಲತೆ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಒಟ್ಟಿನಲ್ಲಿ, ಸಂಕೇಶ್ವರ ಪಟ್ಟಣದಲ್ಲಿ ನಡೆದ ಈ ಪತಂಗೋತ್ಸವವು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದು, ಭಜರಂಗಿ ಗಾಳಿಪಟದ ಹಾರಾಟ ಜನಮನ ಸೆಳೆದಿದೆ. ವಿದ್ಯಾರ್ಥಿಗಳ ಸೃಜನಶೀಲತೆ, ಜನರ ಉತ್ಸಾಹ ಹಾಗೂ ಹಬ್ಬದ ಸಂಭ್ರಮ ಇವೆಲ್ಲವೂ ಸೇರಿ ಈ ಕಾರ್ಯಕ್ರಮವನ್ನು ನೆನಪಿನಲ್ಲಿರಿಸುವಂತದ್ದು ಮಾಡಿತು ಎಂದು ಹೇಳಬಹುದು.  

Latest News