2026 ರಲ್ಲಿ ಗಣಪತಿ ಭಕ್ತರಿಗೆ ಗಣೇಶ ಹಬ್ಬವೂ ಒಂದು ವಿಶೇಷ ಹಾಗೂ ವಿಶಿಷ್ಟವಾದ ಹಬ್ಬವಾಗಿದೆ. ಸಂಕಷ್ಟಕರ ಚತುರ್ಥಿ ದಿನವನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಇದೊಂದು ನಮ್ಮ ಹಿಂದೂ ಧರ್ಮದ ಧಾರ್ಮಿಕ ಹಬ್ಬವಾಗಿದೆ. ಈ ಗಣೇಶ ಚತುರ್ಥಿ ದಿನಕ್ಕೆ ಹಲವಾರು ಭಕ್ತರು ವ್ರತ ಮಾಡುತ್ತಾರೆ. ಜೊತೆಗೆ ಉಪವಾಸ ವ್ರತ ಕೈಗೊಳ್ಳುತ್ತಾರೆ. ಹಿಂದೂ ಧರ್ಮದ ಆಚರಣೆಗಳಲ್ಲಿ ಈ ಉಪವಾಸವೂ ಅತ್ಯಂತ ಪವಿತ್ರ ಉಪವಾಸವಾಗಿದೆ. ಈ ಕಾರ್ಯ ಕೈಗೊಂಡರೆ ದೇವರ ಅನುಗ್ರಹ, ಗಣೇಶನ ಕೃಪೆ ನಮ್ಮ ಮೇಲೆ ಸದಾ ಇರುತ್ತದೆ ಎನ್ನುತ್ತಾರೆ ಗಣೇಶ ಪ್ರಿಯರು.ಈ ವರ್ಷದ ಸಂಕಷ್ಟಕರ ಗಣಪತಿ ದಿನಾಂಕಗಳು ಈ ಕೆಳಗಿನಂತಿದೆ.
2026ರ ಸಂಕಷ್ಟಿ ಚತುರ್ಥಿ ದಿನಾಂಕಗಳು
| ತಿಂಗಳು | ದಿನಾಂಕ | ವಾರ | ಗಣೇಶನ ರೂಪ |
|---|---|---|---|
| ಜನವರಿ | ಜನವರಿ 6 | ಮಂಗಳವಾರ | ಲಂಬೋದರ ಸಂಕಷ್ಟಿ (ಸಕಟ್ ಚೌಥ್) |
| ಫೆಬ್ರವರಿ | ಫೆಬ್ರವರಿ 5 | ಗುರುವಾರ | ದ್ವಿಜಪ್ರಿಯ ಸಂಕಷ್ಟಿ |
| ಮಾರ್ಚ್ | ಮಾರ್ಚ್ 6 | ಶುಕ್ರವಾರ | ಭಾಲಚಂದ್ರ ಸಂಕಷ್ಟಿ |
| ಏಪ್ರಿಲ್ | ಏಪ್ರಿಲ್ 5 | ಭಾನುವಾರ | ವಿಕಟ ಸಂಕಷ್ಟಿ |
| ಮೇ | ಮೇ 5 | ಮಂಗಳವಾರ | ಏಕದಂತ ಸಂಕಷ್ಟಿ (ಅಂಗಾರಕಿ ಚತುರ್ಥಿ) |
| ಜೂನ್ | ಜೂನ್ 3 | ಬುಧವಾರ | ವಿಭುವನ ಸಂಕಷ್ಟಿ |
| ಜುಲೈ | ಜುಲೈ 3 | ಶುಕ್ರವಾರ | ಕೃಷ್ಣಪಿಂಗಲ ಸಂಕಷ್ಟಿ |
| ಆಗಸ್ಟ್ | ಆಗಸ್ಟ್ 2 | ಭಾನುವಾರ | ಗಜಾನನ ಸಂಕಷ್ಟಿ |
| ಆಗಸ್ಟ್ | ಆಗಸ್ಟ್ 31 | ಸೋಮವಾರ | ಹೆರಂಬ ಸಂಕಷ್ಟಿ (ಬಹುಳ ಚತುರ್ಥಿ) |
| ಸೆಪ್ಟೆಂಬರ್ | ಸೆಪ್ಟೆಂಬರ್ 29 | ಮಂಗಳವಾರ | ವಿಘ್ನರಾಜ ಸಂಕಷ್ಟಿ (ಅಂಗಾರಕಿ ಚತುರ್ಥಿ) |
| ಅಕ್ಟೋಬರ್ | ಅಕ್ಟೋಬರ್ 29 | ಗುರುವಾರ | ವಕ್ರತುಂಡ ಸಂಕಷ್ಟಿ (ಕರ್ವಾ ಚೌಥ್) |
| ನವೆಂಬರ್ | ನವೆಂಬರ್ 27 | ಶುಕ್ರವಾರ | ಗಣಾಧಿಪ ಸಂಕಷ್ಟಿ |
| ಡಿಸೆಂಬರ್ | ಡಿಸೆಂಬರ್ 26 | ಶನಿವಾರ | ಅಖುರಥ ಸಂಕಷ್ಟಿ |
ಈ ಪವಿತ್ರ ದಿನಗಳಲ್ಲಿ ಗಣೇಶನ ವಿವಿಧ ರೂಪಗಳನ್ನು ಪೂಜಿಸುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥ ಬೇಡಿಕೆ ಸಲ್ಲಿಸಿ ಭಕ್ತಿ ವ್ಯಕ್ತಪಡಿಸುತ್ತಾರೆ.
ಸಂಕಷ್ಟಹರ ಚತುರ್ಥಿಯ ಮಹತ್ವ ಇಲ್ಲಿದೆ ನೋಡಿ.
- 'ಸಂಕಷ್ಟ' ಎಂಬ ಈ ಪದವು ಸಂಸ್ಕೃತದ್ದಾಗಿದೆ. 'ಕಷ್ಟದ ಸಮಯ' ಅಥವಾ 'ತೊಂದರೆ' ಎಂಬ ಅರ್ಥವನ್ನು ಇದು ನೀಡುತ್ತದೆ.
- 'ಹರ' ಎಂದರೆ 'ತೊಲಗಿಸುವವನು' ಅಥವಾ ಭಕ್ತರನ್ನು ರಕ್ಷಣೆ ಮಾಡುವುದು ಎಂದರ್ಥ ಅಥವಾ 'ರಕ್ಷಕ' ಎಂದು ಕರೆಯುತ್ತಾರೆ.
- ಆದ್ದರಿಂದ ಸಂಕಷ್ಟಹರ ಚತುರ್ಥಿ ಎಂದರೆ "ತೊಂದರೆಗಳನ್ನು ತೊಲಗಿಸುವ ದಿನ".
ಭಗವಾನ್ ಗಣೇಶನು, ಶಿವ ಮತ್ತು ಪಾರ್ವತಿಯ ಪ್ರೀತಿಯ ಮಗನಾಗಿ , ಬುದ್ಧಿ, ಜ್ಞಾನ ಮತ್ತು ಎಲ್ಲಾ ವಿಘ್ನಗಳನ್ನು ನಿವಾರಿಸುವ ದೇವರಾಗಿ ಅಪಾರ ಭಕ್ತರಿಂದ ಪೂಜಿಸಲ್ಪಡುತ್ತಾರೆ. ಈ ದಿನದ ಉಪವಾಸವನ್ನು ಶ್ರದ್ಧೆಯಿಂದ ಆಚರಿಸುವುದರಿಂದ ಭಕ್ತರಿಗೆ ಈ ಕೆಳಗಿನ ಲಾಭಗಳು ದೊರೆಯುತ್ತವೆ ನೋಡಿ.
- ವಿಘ್ನಗಳ ನಿವಾರಣೆ: ವೃತ್ತಿಪರ, ವೈಯಕ್ತಿಕ ಅಥವಾ ಆರ್ಥಿಕ ಅಡಚಣೆಗಳನ್ನು ನಿವಾರಿಸಲು ಗಣೇಶನ ಅನುಗ್ರಹವನ್ನು ಪ್ರಾರ್ಥಿಸಲಾಗುತ್ತದೆ.
- ಬಯಕೆಗಳ ಪೂರ್ಣತೆ: ಧರ್ಮಪೂರ್ಣ ಇಚ್ಛೆಗಳು ಮತ್ತು ಆಶೆಗಳ ಪೂರ್ಣತೆಗೆ ಭಕ್ತರು ಗಣೇಶನನ್ನು ಪ್ರಾರ್ಥಿಸುತ್ತಾರೆ.
- ಜ್ಞಾನ ಮತ್ತು ಐಶ್ವರ್ಯ: ಗಣೇಶನು ಜ್ಞಾನ ಮತ್ತು ಧರ್ಮದ ಪ್ರತಿರೂಪ. ಈ ದಿನದ ಪೂಜೆಯಿಂದ ಆರೋಗ್ಯ, ಸಂಪತ್ತು, ಸಂತೋಷ ಮತ್ತು ಬುದ್ಧಿವಂತಿಕೆ ದೊರೆಯುತ್ತದೆ.
- ಆಧ್ಯಾತ್ಮಿಕ ಪುಣ್ಯ: ಈ ಉಪವಾಸವು ಪಾಪಗಳನ್ನು ನಿವಾರಿಸಿ ಮೋಕ್ಷದತ್ತ ದಾರಿ ತೋರಿಸುತ್ತದೆ, ಮನಸ್ಸು ಹಾಗೂ ಆತ್ಮವನ್ನು ಶುದ್ಧಗೊಳಿಸುತ್ತದೆ.
ಪೌರಾಣಿಕ ಕಥೆಗಳ ಅನುಸಾರದಂತೆ ಈ ದಿನದ ಮಹತ್ವವನ್ನು ಪರಮಾತ್ಮ ಶಿವನು ಒಮ್ಮೆ ಘೋಷಿಸಿದಂತೆ, ಗಣೇಶನನ್ನು ಎಲ್ಲಾ ದೇವತೆಗಳಿಗಿಂತ ಶ್ರೇಷ್ಠನೆಂದು ಹೇಳುತ್ತಾ , ಯಾವುದೇ ಶುಭ ಕಾರ್ಯಕ್ಕೆ ಮೊದಲು ಗಣೇಶನ ಪೂಜೆಯನ್ನು ಮಾಡಬೇಕೆಂದು ಆದೇಶ ಮಾಡಲಾಗಿದೆ ಎಂಬ ಪ್ರತೀತಿ ಇದೆ. ಗಣೇಶನು ಶಿವ ಮತ್ತು ಪಾರ್ವತಿಯ ಪುತ್ರ. ಪುರಾಣಗಳ ಪ್ರಕಾರ, ಪಾರ್ವತಿ ದೇವಿ ತಮ್ಮ ದೇಹದ ಮಣ್ಣಿನಿಂದ ಗಣೇಶನನ್ನು ಸೃಷ್ಟಿಸಿದರು. ಶಿವನು ಗಣೇಶನ ತಲೆಯನ್ನು ಕಡಿದ ನಂತರ, ಆತನಿಗೆ ಆನೆಯ ತಲೆ ಅಳವಡಿಸಲಾಯಿತು. ಇದರಿಂದ ಗಣೇಶನು ವಿಶಿಷ್ಟ ರೂಪ ಪಡೆದರು ಎಂಬ ಪ್ರತೀತಿ ಇದೆ. ಆನೆಯ ತಲೆ ಮತ್ತು ದೊಡ್ಡ ಹೊಟ್ಟೆ ಗಣೇಶನ ಪ್ರಮುಖ ಲಕ್ಷಣ. ಇವರ ವಾಹನ ಇಲಿ (ಮೂಷಕ), ಇದು ವಿನಯ ಮತ್ತು ಸಮತೋಲನದ ಸಂಕೇತ. ಕೈಯಲ್ಲಿ ಪಾಶ, ಅಂಕುಶ, ಪರಶು ಮತ್ತು ಮೋದಕ ಇರುತ್ತವೆ. ಗಣೇಶನಿಗೆ ರಿದ್ಧಿ (ಸಮೃದ್ಧಿ) ಮತ್ತು ಸಿದ್ಧಿ (ಸಾಧನೆ) ಎಂಬ ಎರಡು ಶಕ್ತಿಗಳು ಸಂಗಾತಿಗಳಾಗಿವೆ.