Apr 17, 2026 Languages : ಕನ್ನಡ | English

ಅಮೆರಿಕ-ಇಸ್ರೇಲ್ ದಾಳಿಗೆ 176 ಕಂದಮ್ಮಗಳು ಬಲಿ 3 ಅಂಕಕ್ಕೇರಿದ ಸಾವಿನ ಸಂಖ್ಯೆ!!

ಇರಾನ್ ಮತ್ತು ಅಮೆರಿಕ-ಇಸ್ರೇಲ್ ಪಡೆಗಳ ನಡುವಿನ ಸಂಘರ್ಷ ಈಗ ಅತ್ಯಂತ ಭೀಕರ ಹಂತಕ್ಕೆ ತಲುಪಿದೆ. ಈಗಿನ, ವರದಿಗಳ ಪ್ರಕಾರ, ಇರಾನ್ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳಿಂದಾಗಿ ನೂರಾರು ಅಮಾಯಕ ಜೀವಗಳು ಬಲಿಯಾಗಿವೆ.

ಇರಾನ್ ಮೇಲೆ ದಾಳಿ – ನೂರಾರು ಜೀವ ಬಲಿ, ಮಕ್ಕಳ ಸಾವು ಮನಕಲಕಿದ ಘಟನೆ
ಇರಾನ್ ಮೇಲೆ ದಾಳಿ – ನೂರಾರು ಜೀವ ಬಲಿ, ಮಕ್ಕಳ ಸಾವು ಮನಕಲಕಿದ ಘಟನೆ

ಭಾರೀ ಪ್ರಾಣಹಾನಿ ಮತ್ತು ಮಕ್ಕಳ ಸಾವು

ಅಮೆರಿಕದ ಮಾನವ ಹಕ್ಕುಗಳ ಸಂಸ್ಥೆಗಳ ವರದಿಯ ಪ್ರಕಾರ, ಇರಾನ್ ಮೇಲಿನ ದಾಳಿಯಲ್ಲಿ ಈವರೆಗೆ ಕನಿಷ್ಠ 742 ಜನರು ಸಾವನ್ನಪ್ಪಿದ್ದಾರೆ. ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಮೃತಪಟ್ಟವರಲ್ಲಿ 176 ಪುಟ್ಟ ಮಕ್ಕಳು ಸೇರಿದ್ದಾರೆ. ಕಳೆದ 24 ಗಂಟೆಗಳಲ್ಲಿಯೇ ಸುಮಾರು 85 ಮಂದಿ ಪ್ರಾಣ ಕಳೆದುಕೊಂಡಿದ್ದು, 900ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿದ್ದು, ತುರ್ತು ಚಿಕಿತ್ಸೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತನ್ನ ಮೇಲೆ ನಡೆಯುತ್ತಿರುವ ದಾಳಿಗೆ ಇರಾನ್ ಸುಮ್ಮನೆ ಕುಳಿತಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ನಿರಂತರವಾಗಿ ಕ್ಷಿಪಣಿ ದಾಳಿ ನಡೆಸುತ್ತಿದೆ. ತನ್ನ ಸರ್ವೋಚ್ಚ ನಾಯಕನ ಹತ್ಯೆಗೆ ಅಮೆರಿಕವೇ ಕಾರಣ ಎಂದು ಆರೋಪಿಸಿರುವ ಇರಾನ್, ಇದಕ್ಕೆ ತಕ್ಕ ತಿರುಗೇಟು ನೀಡುವುದಾಗಿ ಎಚ್ಚರಿಸಿದೆ. ಈ ಮೂಲಕ ಸಂಘರ್ಷವು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಇಸ್ರೇಲ್ ಮೇಲೆ ಇರಾನ್ ಪಡೆಯ ದಾಳಿ

ಇತ್ತ ಇರಾನ್‌ನ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್' (IRGC) ಪಡೆಯು ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಟೆಲ್ ಅವೀವ್, ಹೈಫಾ ಮತ್ತು ಪೂರ್ವ ಜೆರುಸಲೇಂನ ಪ್ರಮುಖ ಸ್ಥಳಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದೆ. ಇಂದು ಬೆಳಿಗ್ಗೆಯೂ ಜೆರುಸಲೇಂನಲ್ಲಿ ಸರಣಿ ಸ್ಫೋಟದ ಸದ್ದು ಕೇಳಿಬಂದಿದ್ದು, ಅಲ್ಲಿನ ಜನರು ಭಯಭೀತರಾಗಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಈ ರಕ್ತರಂಜಿತ ಯುದ್ಧವು ಇಡೀ ಮಧ್ಯಪ್ರಾಚ್ಯ ಏಷ್ಯಾವನ್ನು ಅಸ್ಥಿರಗೊಳಿಸಿದೆ. ಅಮೆರಿಕ ನೇರವಾಗಿ ಯುದ್ಧಕ್ಕೆ ಧುಮುಕಿರುವುದರಿಂದ ಇದು ವಿಶ್ವ ಸಮರಕ್ಕೆ ದಾರಿಯಾಗುತ್ತದೆಯೇ ಎಂಬ ಆತಂಕ ಮೂಡಿಸಿದೆ. ಮಕ್ಕಳ ಸಾವು ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಚರ್ಚೆಯನ್ನು ಹುಟ್ಟುಹಾಕಿದೆ.

ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅಮಾಯಕ ಜನರ ಸಾವು ನೋವುಗಳು ಹೆಚ್ಚುತ್ತಿವೆ. ಅಂತರಾಷ್ಟ್ರೀಯ ಸಮುದಾಯವು ತಕ್ಷಣವೇ ಮಧ್ಯಪ್ರವೇಶಿಸಿ ಶಾಂತಿ ಮಾತುಕತೆ ನಡೆಸದಿದ್ದರೆ.

Latest News