ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ಪೊಂಗಲ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಹೌದು ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ಅವರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪೂಜೆ ಮತ್ತು ಆರತಿಯನ್ನು ನೆರವೇರಿಸಿ, ಗೋಸೇವೆಯಲ್ಲೂ ಪಾಲ್ಗೊಂಡರು ಎನ್ನಲಾಗುತ್ತಿದೆ.
ಹೌದು ಪೊಂಗಲ್ ಹಬ್ಬವು ಪ್ರಕೃತಿ ಮತ್ತು ಕೃಷಿಯೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವಾಗಿದ್ದು, ಪ್ರಕೃತಿಯ ಬಗ್ಗೆ ಕೃತಜ್ಞತೆಯನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ. ಅದನ್ನು ನಮ್ಮ ದಿನನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಭೂಮಿಯು ನಮಗೆ ಆಹಾರ, ನೀರು, ಸಂಪನ್ಮೂಲಗಳನ್ನು ಅಪಾರವಾಗಿ ನೀಡುತ್ತಿರುವಾಗ, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಅಲ್ಲವೇ ಎಂಬುದಾಗಿ ಹೇಳಿದ್ದು ಈ ವಿಚಾರವನ್ನು ತಿಳಿಸಿದ್ದಾರೆ. ಮಣ್ಣನ್ನು ಆರೋಗ್ಯಕರವಾಗಿ ಉಳಿಸುವುದು, ನೀರನ್ನು ಸಂರಕ್ಷಿಸುವುದು ಮತ್ತು ಪ್ರಕೃತಿ ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸುವುದು ಮುಂದಿನ ಪೀಳಿಗೆಗೆ ಅತ್ಯಂತ ಅಗತ್ಯ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ರೈತರು ಮತ್ತು ಕೃಷಿಯ ಪಾತ್ರ ದೇಶದ ಭವಿಷ್ಯದಲ್ಲಿ ಎಷ್ಟು ಮಹತ್ವದ್ದೋ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿದರು. ಪೊಂಗಲ್ ಹಬ್ಬವು ಶ್ರಮಕ್ಕೆ ಗೌರವ ಸಲ್ಲಿಸುವ, ಪ್ರಕೃತಿಗೆ ಕೃತಜ್ಞತೆ ವ್ಯಕ್ತಪಡಿಸುವ ಸಂಸ್ಕೃತಿಯ ಸಂಕೇತವಾಗಿದ್ದು, ಇಂತಹ ಹಬ್ಬಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಪ್ರಧಾನಿ ತಿಳಿಸಿದ್ದು. ಪೊಂಗಲ್ ಹಬ್ಬದ ಸಂದೇಶದ ಮೂಲಕ ಪರಿಸರ ಸಂರಕ್ಷಣೆ, ಸುಸ್ಥಿರ ಜೀವನಶೈಲಿ ಮತ್ತು ಪ್ರಕೃತಿಯೊಂದಿಗೆ ಸಹಜ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂಬ ಸಂದೇಶವನ್ನು ದೇಶಕ್ಕೆ ಪ್ರಧಾನಿ ಮೋದಿ ಮತ್ತೊಮ್ಮೆ ತೋರಿಸಿದ್ದಾರೆ.ನಿಜಕ್ಕೂ ಈ ಸಂದರ್ಭ ಅದ್ಭುತವಾಗಿತ್ತು ಎನ್ನಬಹುದು.