ನಾವು ಎಷ್ಟೇ ಜಾಗರೂಕರಾಗಿದ್ದರೂ ಕೆಲವು ಆರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತವೆ. “ನನಗೆ ಮಾತ್ರ ಯಾಕೆ ಈ ಕಾಯಿಲೆ ಬರುತ್ತೆ?” ಎಂದು ಹಲವರು ಯೋಚಿಸುತ್ತಲೇ ಇರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ನಾವು ಹುಟ್ಟಿದ ಜನ್ಮ ದಿನಾಂಕಕ್ಕೂ ದೇಹದ ದೌರ್ಬಲ್ಯಕ್ಕೂ ಸಂಬಂಧವಿದೆ. ಜನ್ಮ ಸಂಖ್ಯೆಯ ಆಧಾರದ ಮೇಲೆ ಯಾವ ಸಮಸ್ಯೆಗಳು ಎದುರಾಗಬಹುದು ಮತ್ತು ಎಚ್ಚರಿಕೆ ಹೇಗೆ ವಹಿಸಬೇಕು ಎಂಬುದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.
ಸಂಖ್ಯೆ 1 – ಸೂರ್ಯ
1, 10, 19, 28ರಂದು ಜನಿಸಿದವರು. ಹೃದಯ ಸಮಸ್ಯೆ, ಬಿಪಿ, ಮೈಗ್ರೇನ್ ತಲೆನೋವು, ಮೂಳೆ ದೌರ್ಬಲ್ಯ ಕಾಡಬಹುದು. ಇದಕ್ಕೆ ಪರಿಹಾರ, ಪ್ರತಿದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಉತ್ತಮ.
ಸಂಖ್ಯೆ 2 – ಚಂದ್ರ
2, 11, 20, 29ರಂದು ಜನಿಸಿದವರು. ಮಾನಸಿಕ ಒತ್ತಡ, ನಿದ್ರಾಹೀನತೆ, ಜೀರ್ಣಕ್ರಿಯೆ ಸಮಸ್ಯೆ, ಶೀತ-ಕೆಮ್ಮು ಕಾಣಿಸಬಹುದು. ಇದಕ್ಕೆ ಪರಿಹಾರ, ಬೆಳ್ಳಿಯ ಲೋಟದಲ್ಲಿ ನೀರು ಕುಡಿಯುವುದು ಮತ್ತು ಧ್ಯಾನ ಮಾಡುವುದು ಶ್ರೇಯಸ್ಕರ.
ಸಂಖ್ಯೆ 3 – ಗುರು
3, 12, 21, 30ರಂದು ಜನಿಸಿದವರು. ಲಿವರ್ ಸಮಸ್ಯೆ, ಮಧುಮೇಹ, ಬೊಜ್ಜು, ಚರ್ಮದ ಅಲರ್ಜಿಗಳು ಕಾಡಬಹುದು. ಇದಕ್ಕೆ ಪರಿಹಾರ, ಹಳದಿ ಬಣ್ಣದ ಆಹಾರ ಸೇವನೆ ಮತ್ತು ಅರಿಶಿನ ತಿಲಕ ಉಪಯುಕ್ತ.
ಸಂಖ್ಯೆ 4 – ರಾಹು
4, 13, 22, 31ರಂದು ಜನಿಸಿದವರು. ಗ್ಯಾಸ್ಟ್ರಿಕ್, ಉಸಿರಾಟ ತೊಂದರೆ, ವಿಚಿತ್ರ ಕಾಯಿಲೆಗಳು ಕಾಣಿಸಬಹುದು. ಇದಕ್ಕೆ ಪರಿಹಾರ, ರಾತ್ರಿ ತಡವಾಗಿ ಊಟ ತಪ್ಪಿಸಿ, ಹಕ್ಕಿಗಳಿಗೆ ಆಹಾರ ನೀಡುವುದು ಉತ್ತಮ.
ಸಂಖ್ಯೆ 5 – ಬುಧ
5, 14, 23ರಂದು ಜನಿಸಿದವರು. ನರಮಂಡಲದ ದೌರ್ಬಲ್ಯ, ಆತಂಕ, ನೆನಪಿನ ಶಕ್ತಿ ಕುಂದುವುದು, ಚರ್ಮದ ಸಮಸ್ಯೆಗಳು ಕಾಣಿಸಬಹುದು. ಇದಕ್ಕೆ ಪರಿಹಾರ, ಹಸಿರು ತರಕಾರಿ ಸೇವನೆ ಮತ್ತು ಪ್ರಾಣಾಯಾಮ ಅಗತ್ಯ.
ಸಂಖ್ಯೆ 6 – ಶುಕ್ರ
6, 15, 24ರಂದು ಜನಿಸಿದವರು. ಕಿಡ್ನಿ ಸಮಸ್ಯೆ, ಗಂಟಲಿನ ಸೋಂಕು, ಹಾರ್ಮೋನ್ ಅಸಮತೋಲನ ಕಾಣಿಸಬಹುದು. ಇದಕ್ಕೆ ಪರಿಹಾರ, ಸ್ವಚ್ಛತೆಗೆ ಆದ್ಯತೆ ನೀಡಿ, ಸಕ್ಕರೆ ಕಡಿಮೆ ಮಾಡಿ, ಬಿಳಿ ಬಟ್ಟೆ ಧರಿಸಿ.
ಸಂಖ್ಯೆ 7 – ಕೇತು
7, 16, 25ರಂದು ಜನಿಸಿದವರು. ಚರ್ಮದ ಸೋಂಕು, ರಕ್ತದ ಅಶುದ್ಧತೆ, ಮಾನಸಿಕ ಗೊಂದಲಗಳು ಕಾಣಿಸಬಹುದು. ಇದಕ್ಕೆ ಪರಿಹಾರ, ನಾಯಿಗಳಿಗೆ ಆಹಾರ ನೀಡುವುದು, ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗುವುದು ಉತ್ತಮ.
ಸಂಖ್ಯೆ 8 – ಶನಿ
8, 17, 26ರಂದು ಜನಿಸಿದವರು. ಕೀಲು ನೋವು, ಮಲಬದ್ಧತೆ, ದೀರ್ಘಕಾಲದ ಕಾಯಿಲೆಗಳ ಅಪಾಯ. ಇದಕ್ಕೆ ಪರಿಹಾರ, ಸಾಸಿವೆ ಎಣ್ಣೆಯಿಂದ ಪಾದ ಮಸಾಜ್ ಮಾಡಿ, ಬಡವರಿಗೆ ಸಹಾಯ ಮಾಡಿ, ಸಕ್ರಿಯವಾಗಿರಿ.
ಸಂಖ್ಯೆ 9 – ಮಂಗಳ
9, 18, 27ರಂದು ಜನಿಸಿದವರು. ಗಾಯಗಳು, ಅಪಘಾತಗಳು, ರಕ್ತದ ಒತ್ತಡ ಸಮಸ್ಯೆಗಳು ಕಾಣಿಸಬಹುದು. ಇದಕ್ಕೆ ಪರಿಹಾರ, ವ್ಯಾಯಾಮ ಕಡ್ಡಾಯ, ಹೆಚ್ಚು ನೀರು ಕುಡಿಯಿರಿ, ಕೆಂಪು ಬೇಳೆ ದಾನ ಮಾಡಿ.
ಯಾವುದೇ ಸಂಖ್ಯೆ ಇರಲಿ, ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯುವುದು ಇವತ್ತಿನಿಂದಲೇ ಅಭ್ಯಾಸ ಮಾಡಿಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಉತ್ತಮ. ಸರಿಯಾದ ಆಹಾರ, ವ್ಯಾಯಾಮ ಮತ್ತು ಶಿಸ್ತುಬದ್ಧ ಜೀವನಶೈಲಿ ಅನುಸರಿಸಿದರೆ, ಯಾವುದೇ ಸಂಖ್ಯೆಯವರಿಗೂ ಆರೋಗ್ಯಕರ ಜೀವನ ಸಾಧ್ಯ ಎಂದು ಹೇಳಬಹುದು.