Mar 14, 2026 Languages : ಕನ್ನಡ | English

ಹಣವಿದ್ದರೆ ಸಾಲದು, ಗುಣವೂ ಬೇಕು - 'ಅಪ್ಪರ್ ಕ್ಲಾಸ್' ಹುಡುಗಿಯರ ಭೀಕರ ಜಗಳಕ್ಕೆ ನೆಟ್ಟಿಗರು ಫುಲ್ ಶಾಕ್!! ವಿಡಿಯೋ;

ಹಣವಿದ್ದರೆ ಸಾಕು, ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಮತ್ತು ಅವರು ಶಿಸ್ತಿನಿಂದ ಇರುತ್ತಾರೆ ಎಂಬುದು ಇಂದಿನ ಪೋಷಕರ ದೊಡ್ಡ ನಂಬಿಕೆ. ಅದಕ್ಕಾಗಿಯೇ ವರ್ಷಕ್ಕೆ ಹತ್ತು ಲಕ್ಷ ರೂಪಾಯಿಗಳಿಗೂ ಅಧಿಕ ಶುಲ್ಕ ನೀಡಿ ಸೋನೆಪತ್‌ನ ಜಿಂದಾಲ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಕಳುಹಿಸಲಾಗುತ್ತದೆ. ಆದರೆ, ಇತ್ತೀಚೆಗೆ ಈ ವಿಶ್ವವಿದ್ಯಾಲಯದಿಂದ ಹೊರಬಂದಿರುವ ಒಂದು ವಿಡಿಯೋ ಈ ನಂಬಿಕೆಯನ್ನು ಅಕ್ಷರಶಃ ಹುಸಿಗೊಳಿಸಿದೆ ಎನ್ನಬಹುದು. ಶಿಕ್ಷಣ ಎನ್ನುವುದು ಕೇವಲ ಪದವಿ ಪಡೆಯುವುದಲ್ಲ, ಅದು ನಡವಳಿಕೆಯನ್ನು ರೂಪಿಸುವುದು ಎಂಬುದನ್ನು ಈ ಘಟನೆ ಮರೆತಂತಿದೆ.

ಶ್ರೀಮಂತ ವಿದ್ಯಾರ್ಥಿನಿಯರ ಜಗಳ ವೈರಲ್; | Photo Credit: X@mujifren
ಶ್ರೀಮಂತ ವಿದ್ಯಾರ್ಥಿನಿಯರ ಜಗಳ ವೈರಲ್; | Photo Credit: X@mujifren

ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರತಿಷ್ಠಿತ ಶ್ರೀಮಂತ ಕುಟುಂಬದ ವಿದ್ಯಾರ್ಥಿನಿಯರು ಅತ್ಯಂತ ವಿಕೃತವಾಗಿ ಪರಸ್ಪರ ಜಗಳವಾಡುತ್ತಿರುವುದು ಕಂಡುಬಂದಿದೆ. ಬೀದಿಗಳಲ್ಲಿ ನಡೆಯುವ ಗಲಾಟೆಗಿಂತಲೂ ಭೀಕರವಾಗಿ ಈ ಮೇಲ್ವರ್ಗದ ಹುಡುಗಿಯರು ಪರಸ್ಪರ ಕೂದಲು ಎಳೆದಾಡುತ್ತಾ, ಹೊಡೆದಾಡುತ್ತಾ ಇರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಕಡೆ ಗಂಭೀರವಾದ ಜಗಳ ನಡೆಯುತ್ತಿದ್ದರೆ, ಅದರ ಪಕ್ಕದಲ್ಲೇ ಕುಳಿತಿರುವ ವಿದ್ಯಾರ್ಥಿಯೊಬ್ಬ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಆರಾಮವಾಗಿ ತನ್ನ ಪಾಡಿಗೆ ತಾವು ಸಿಹಿ ತಿನ್ನುತ್ತಿರುವುದು ಘಟನೆಯ ವಿಲಕ್ಷಣತೆಯನ್ನು ತೋರಿಸುತ್ತದೆ. ಜಗಳ ಬಿಡಿಸಬೇಕಾದ ಸುತ್ತಮುತ್ತಲ ವಿದ್ಯಾರ್ಥಿಗಳು ಹೊಡಿ ಹೊಡಿ ಎಂದು ಕೂಗುತ್ತಾ ಜಗಳವನ್ನು ಇನ್ನಷ್ಟು  ಪ್ರೋತ್ಸಾಹಿಸುತ್ತಿರುವುದು ನಾಗರಿಕ ಸಮಾಜಕ್ಕೆ ದೊಡ್ಡ ಅವಮಾನವಾಗಿದೆ.

ವರ್ಷಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶಿಕ್ಷಣ ಪಡೆಯುವ ಇಂತಹ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಂದ ಇಂತಹ ವರ್ತನೆಯನ್ನು ಯಾರೂ ನಿರೀಕ್ಷಿಸುವುದಿಲ್ಲ. ಇದು ಕೇವಲ ಒಂದು ಜಗಳವಲ್ಲ, ಬದಲಾಗಿ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಸಂಸ್ಕಾರ ಮತ್ತು ಮಾನವೀಯತೆಯನ್ನು ಹೇಗೆ ಕಳೆದುಕೊಳ್ಳುತ್ತಿದ್ದೇವೆ ಎಂಬುದಕ್ಕೆ ಉದಾಹರಣೆಯಾಗಿದೆ. ಹಣ ಮತ್ತು ಅಂತಸ್ತು ಬೆಳೆದಂತೆ ಮನುಷ್ಯನಲ್ಲಿ ವಿನಯ ಬೆಳೆಯಬೇಕು, ಆದರೆ ಇಲ್ಲಿ ಅಹಂಕಾರ ಮತ್ತು ಹಿಂಸೆ ಎದ್ದು ಕಾಣುತ್ತಿದೆ. ಪೋಷಕರು ಲಕ್ಷಾಂತರ ರೂಪಾಯಿಗಳನ್ನು ನೀಡಿ ಸುಸಜ್ಜಿತ ವಿಶ್ವವಿದ್ಯಾಲಯಗಳಿಗೆ ಮಕ್ಕಳನ್ನು ಕಳುಹಿಸಿದರೂ, ಅಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿರುವುದು ಕಳವಳಕಾರಿ ಸಂಗತಿ.

ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಶ್ರೀಮಂತಿಕೆಯಿಂದ ಶಿಸ್ತು ಬರುವುದಿಲ್ಲ ಎಂದು ಕಿಡಿಕಾರುತ್ತಿದ್ದಾರೆ. ಹಳ್ಳಿಗಳಲ್ಲಿ ನಡೆಯುವ ಜಗಳಗಳನ್ನು ಹೀಯಾಳಿಸುವ ಮೇಲ್ವರ್ಗದವರು, ತಾವೂ ಅದಕ್ಕಿಂತ ಭೀಕರವಾಗಿ ವರ್ತಿಸುತ್ತಿರುವುದು ಇಲ್ಲಿ ಹಾಸ್ಯಾಸ್ಪದವಾಗಿದೆ. ವಿದ್ಯಾರ್ಥಿಗಳು ಜಗಳವನ್ನು ಕ್ರೀಡೆಯಂತೆ ಸಂಭ್ರಮಿಸುತ್ತಿರುವುದು ಮತ್ತು ವಿಡಿಯೋ ಮಾಡುತ್ತಿರುವುದು ನಮ್ಮ ಇಂದಿನ ಯುವಜನತೆಯ ಮನಸ್ಥಿತಿಯನ್ನು ತೋರಿಸುತ್ತದೆ.

ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯದ ಬಗ್ಗೆ ಗಮನ ನೀಡದೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ನಡವಳಿಕೆಯ ಬಗ್ಗೆಯೂ ಕಠಿಣ ನಿಯಮಗಳನ್ನು ರೂಪಿಸಬೇಕಿದೆ. ಸಮಾಜಕ್ಕೆ ಮಾದರಿಯಾಗಬೇಕಾದ ವಿದ್ಯಾರ್ಥಿಗಳು ಹೀಗೆ ಬೀದಿರಂಪಾಟ ಮಾಡುವುದು ಅವರ ಭವಿಷ್ಯಕ್ಕೆ ಹಾಗೆ ಅವರು ಪ್ರತಿನಿಧಿಸುವ ಸಂಸ್ಥೆಗೆ ತಂದ ಅತಿ ದೊಡ್ಡ ಕಳಂಕವಾಗಿದೆ. 

Latest News