Dec 16, 2025 Languages : ಕನ್ನಡ | English

ಗೋಕರ್ಣ ಸಮುದ್ರದಲ್ಲಿ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು!! ಬೀಚ್ ಗೆ ಇಳಿಯೋರು ಹುಷಾರ್

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮುದ್ರ ತೀರದಲ್ಲಿ ನಿನ್ನೆ ಸಂಜೆ ಭೀಕರ ಘಟನೆ ಸಂಭವಿಸಿತು. ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗದ ಮೇಲ್ಗಟ್ಟ ಸರ್ಕಾರಿ ಹಿರಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡದ ಐವರು ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಅಪಾಯಕ್ಕೆ ಒಳಗಾದರು. ಲೈಫ್‌ಗಾರ್ಡ್ ಸಿಬ್ಬಂದಿಯ ತ್ವರಿತ ಕ್ರಮದಿಂದ ಅವರ ಜೀವ ಉಳಿಯಿತು. ಈ ಘಟನೆ ಪ್ರವಾಸಿಗರಲ್ಲಿ ಆತಂಕ ಹುಟ್ಟಿಸಿದರೂ, ಲೈಫ್‌ಗಾರ್ಡ್ ಸಿಬ್ಬಂದಿಯ ಧೈರ್ಯಶಾಲಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮುದ್ರ ತೀರದಲ್ಲಿ ನಿನ್ನೆ ಸಂಜೆ ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡದ ಐವರು ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಅಪಾಯಕ್ಕೆ ಒಳಗಾದರು.

ಗೋಕರ್ಣ ಸಮುದ್ರದಲ್ಲಿ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು
ಗೋಕರ್ಣ ಸಮುದ್ರದಲ್ಲಿ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

ಇದಕ್ಕೆ ಪ್ರವಾಸಿಗರ ನಿರ್ಲಕ್ಷ್ಯ ಕಾರಣ ಎಂದು ಕೇಳಿ ಬಂದಿದೆ. ಶಿವಮೊಗ್ಗದ ಮೇಲ್ಗಟ್ಟ ಸರ್ಕಾರಿ ಹಿರಿಯ ಪ್ರೌಢಶಾಲೆಯ 39 ಮಂದಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗೋಕರ್ಣ ಪ್ರವಾಸಕ್ಕೆ ತೆರಳಿದ್ದರು. ಲೈಫ್‌ಗಾರ್ಡ್ ಸಿಬ್ಬಂದಿ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ, ಕೆಲವರು ಎಚ್ಚರಿಕೆಯನ್ನು ಲೆಕ್ಕಿಸದೆ ನೀರಿಗಿಳಿದಿದ್ದರು. ಅಪಾಯದ ಕ್ಷಣ ಹೇಗಿತ್ತು ಅಂದರೆ, ಅಲೆಗಳ ಹೊಡೆತ ತೀವ್ರಗೊಂಡಾಗ, ಐವರು ನೀರಿನಲ್ಲಿ ಮುಳುಗುವ ಪರಿಸ್ಥಿತಿ ಎದುರಾಯಿತು. 10ನೇ ತರಗತಿ ವಿದ್ಯಾರ್ಥಿಗಳಾದ ನಿಯಾಜ್ ಅಹಮದ್, ಮೊಹಮ್ಮದ್ ಜಿಲಾಲ್, ಆಕಾಶ್ ಹಾಗೂ ಒಬ್ಬ ಶಿಕ್ಷಕ ಈ ಅಪಾಯಕ್ಕೆ ಸಿಲುಕಿದರು. ಬಳಿಕ ಅಪಾಯ ಅರಿತಗೊಂಡ ಸಿಬ್ಬಂದಿಗಳು ತಡ ಮಾಡದೇ ತಕ್ಷಣದ ರಕ್ಷಣೆಗೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ಲೈಫ್‌ಗಾರ್ಡ್ ಸಿಬ್ಬಂದಿ ತಕ್ಷಣವೇ ನೀರಿಗಿಳಿದು, ಮುಳುಗುತ್ತಿದ್ದವರನ್ನು ಸುರಕ್ಷಿತವಾಗಿ ತೀರಕ್ಕೆ ಕರೆತಂದರು. ಅವರ ತ್ವರಿತ ಕ್ರಮದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೀವ ಉಳಿಯಿತು.

ಅಭಿಮಾನ ಮತ್ತು ಎಚ್ಚರಿಕೆ ಬಗ್ಗೆ ತಿಳಿ ಹೇಳಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಆದರೂ ಲೈಫ್‌ಗಾರ್ಡ್ ಸಿಬ್ಬಂದಿಯ ಧೈರ್ಯಶಾಲಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಸಮುದ್ರ ತೀರದಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ವರ್ತಿಸಬೇಕು ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.