ಐಪಿಎಸ್ ಅಧಿಕಾರಿಯ ಮದುವೆ ಶಾಸ್ತ್ರದ ವಿಡಿಯೋ ವೈರಲ್ - ಸಂಪ್ರದಾಯವೋ ಅಥವಾ ಅತಿರೇಕವೋ? ಇಲ್ಲಿದೆ ನೋಡಿ ವಿಡಿಯೋ!!

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಯಾವುದೋ ಒಂದು ವಿಡಿಯೋ ವೈರಲ್ ಆಯ್ತು ಅಂದರೆ ಸಾಕು, ಅದು ಪರ-ವಿರೋಧದ ಚರ್ಚೆಗೆ ದೊಡ್ಡ ವೇದಿಕೆಯಾಗಿಬಿಡುತ್ತದೆ. ಈಗ ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಕೃಷ್ಣ ಕುಮಾರ್ ಬಿಷ್ಣೋಯ್ ಅವರ ಮದುವೆ ವಿಷಯದಲ್ಲಿ ನಡೆದಿದೆ. ರಾಜಸ್ಥಾನದ ಬಿಷ್ಣೋಯ್ ಸಮುದಾಯಕ್ಕೆ ಸೇರಿದ ಈ ಅಧಿಕಾರಿಯ ಮದುವೆ ಶಾಸ್ತ್ರದ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಒಬ್ಬ ಜವಾಬ್ದಾರಿಯುತ ಅಧಿಕಾರಿಯ ಮದುವೆಯಲ್ಲಿ ನಡೆದ ಈ ವಿಶಿಷ್ಟ ಪದ್ಧತಿಯ ಬಗ್ಗೆ ಜನ ಈಗ ತರಹೇವಾರಿ ಮಾತನಾಡುತ್ತಿದ್ದಾರೆ.

‘ದೂಧ್ ಪಿಲಾಯಿ’ ವಿಡಿಯೋ ವೈರಲ್; | Photo Credit: @bishnoimedia/ https://x.com/TyrantOppressor
‘ದೂಧ್ ಪಿಲಾಯಿ’ ವಿಡಿಯೋ ವೈರಲ್; | Photo Credit: @bishnoimedia/ https://x.com/TyrantOppressor

ಅಸಲಿಗೆ ಈ ವಿಡಿಯೋದಲ್ಲಿ ಏನಿದೆ ಅಂದರೆ, ಕೃಷ್ಣ ಕುಮಾರ್ ಅವರು ಮದುವೆಯ ಮೆರವಣಿಗೆಗೆ ಹೊರಡುವ ಮುನ್ನ 'ದೂಧ್ ಪಿಲಾಯಿ' ಎಂಬ ವಿಶೇಷ ಶಾಸ್ತ್ರ ನಡೆದಿದೆ. ಈ ಪದ್ಧತಿಯಲ್ಲಿ ತಾಯಿ ತನ್ನ ಮಗನ ಮುಖವನ್ನು ಸೆರಗಿನಿಂದ ಮುಚ್ಚಿ, ಮಗನನ್ನು ತನ್ನ ಎದೆಗೆ ಹತ್ತಿರವಾಗಿ ಅಪ್ಪಿಕೊಂಡು ಸಾಂಕೇತಿಕವಾಗಿ ಹಾಲುಣಿಸುವಂತೆ ಮಾಡುತ್ತಾರೆ. ಇದು ನೋಡಲು ಸ್ವಲ್ಪ ವಿಚಿತ್ರವಾಗಿ ಕಂಡರೂ, ಇದರ ಹಿಂದೆ ದೊಡ್ಡ ಭಾವನಾತ್ಮಕ ಅರ್ಥವಿದೆ. ಮಗ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುವ ಮುನ್ನ, ಅವನನ್ನು ಇಷ್ಟು ದಿನ ಸಲಹಿದ ತಾಯಿಯ ತ್ಯಾಗವನ್ನು ನೆನಪಿಸುವುದು ಮತ್ತು ಅವನು ಈಗ ಸಂಪೂರ್ಣವಾಗಿ ಬೆಳೆದು ನಿಂತಿದ್ದಾನೆ ಎನ್ನುವುದನ್ನು ತೋರಿಸುವುದು ಈ ಸಂಪ್ರದಾಯದ ಉದ್ದೇಶ.

ಆದರೆ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆಯೇ ನೆಟ್ಟಿಗರು ಎರಡು ಭಾಗವಾಗಿ ವಿಂಗಡಣೆಯಾಗಿದ್ದಾರೆ. ಒಂದು ಕಡೆ ಕೃಷ್ಣ ಕುಮಾರ್ ಅವರ ಬೆಂಬಲಿಗರು ಮತ್ತು ಬಿಷ್ಣೋಯ್ ಸಮುದಾಯದವರು, "ಇದು ನಮ್ಮ ಸಂಸ್ಕೃತಿ ಮತ್ತು ತಾಯಿ-ಮಗನ ನಡುವಿನ ಅತ್ಯಂತ ಪವಿತ್ರವಾದ ಭಾವನೆ. ಇದರಲ್ಲಿ ಯಾವುದೇ ಅಶ್ಲೀಲತೆ ಅಥವಾ ತಪ್ಪು ಇಲ್ಲ. ಸಂಪ್ರದಾಯಗಳನ್ನು ಗೌರವಿಸುವುದು ಕಲಿಯಿರಿ" ಎಂದು ತಿರುಗೇಟು ನೀಡುತ್ತಿದ್ದಾರೆ. ರಾಜಸ್ಥಾನದ ಅನೇಕ ಕಡೆ ಇಂದಿಗೂ ಇಂತಹ ಪದ್ಧತಿಗಳು ಚಾಲ್ತಿಯಲ್ಲಿವೆ ಎನ್ನುವುದು ಇವರ ವಾದ.

ಇನ್ನೊಂದು ಕಡೆ, ಈ ವಿಡಿಯೋವನ್ನು ಟೀಕಿಸುತ್ತಿರುವವರು ಬೇರೆಯದೇ ಮಾತುಗಳನ್ನು ಆಡುತ್ತಿದ್ದಾರೆ. "ಆಧುನಿಕ ಜಗತ್ತಿನಲ್ಲಿ ಇಂತಹ ಹಳೆಯ ಮತ್ತು ಮುಜುಗರ ತರುವ ಪದ್ಧತಿಗಳು ಯಾಕೆ ಬೇಕು? ಅದರಲ್ಲೂ ಒಬ್ಬ ಐಪಿಎಸ್ ಅಧಿಕಾರಿಯಂತಹ ಪ್ರಭಾವಿ ವ್ಯಕ್ತಿಗಳು ಇಂತಹವುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸಮಾಜಕ್ಕೆ ಯಾವ ಸಂದೇಶ ನೀಡುತ್ತದೆ?" ಎಂದು ಪ್ರಶ್ನಿಸುತ್ತಿದ್ದಾರೆ. ಇಂದಿನ ಕಾಲಕ್ಕೆ ಇಂತಹ ಆಚರಣೆಗಳು ಅಪ್ರಸ್ತುತ ಮತ್ತು ಇವುಗಳನ್ನು ಸಾರ್ವಜನಿಕವಾಗಿ ತೋರಿಸುವುದು ಸರಿಯಲ್ಲ ಎಂಬುದು ಇವರ ಅಭಿಪ್ರಾಯ.

ಇನ್ನು ಈ ಮದುವೆಯ ವಿಶೇಷತೆ ಏನೆಂದರೆ, ಕೃಷ್ಣ ಕುಮಾರ್ ಬಿಷ್ಣೋಯ್ ಅವರು ಮದುವೆಯಾಗುತ್ತಿರುವುದು ಕೂಡ ಒಬ್ಬ ಐಪಿಎಸ್ ಅಧಿಕಾರಿಯನ್ನೇ. ಅಂಶಿಕಾ ವರ್ಮಾ ಎಂಬ ಸಹ ಅಧಿಕಾರಿಯ ಜೊತೆ ಇವರ ಮದುವೆ ಸಂಭ್ರಮ ಸಾಗುತ್ತಿದೆ. ಜೋಧ್‌ಪುರ ಮತ್ತು ಬಾರ್ಮರ್‌ನಲ್ಲಿ ಅದ್ಧೂರಿಯಾಗಿ ಮದುವೆಯ ಕಾರ್ಯಕ್ರಮಗಳು ನಡೆಯುತ್ತಿವೆ. ಇಬ್ಬರು ಬುದ್ಧಿವಂತ ಮತ್ತು ಜವಾಬ್ದಾರಿಯುತ ಅಧಿಕಾರಿಗಳು ಒಂದಾಗುತ್ತಿರುವ ಈ ಸುಸಂದರ್ಭದಲ್ಲಿ, ಈ ಒಂದು ಶಾಸ್ತ್ರದ ವಿಡಿಯೋ ಮಾತ್ರ ಈಗ ದೊಡ್ಡ ಚರ್ಚಾ ವಿಷಯವಾಗಿ ಉಳಿದುಕೊಂಡಿದೆ.

ಒಟ್ಟಿನಲ್ಲಿ, ಮನುಷ್ಯ ಎಷ್ಟೇ ದೊಡ್ಡ ಅಧಿಕಾರಿಯಾಗಲಿ ಅಥವಾ ಎಷ್ಟೇ ಓದಿರಲಿ, ತನ್ನ ಮೂಲ ಸಂಪ್ರದಾಯಗಳನ್ನು ಬಿಡಬಾರದು ಎನ್ನುವುದು ಒಂದು ವರ್ಗದ ಮಾತಾದರೆ, ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎನ್ನುವುದು ಇನ್ನೊಂದು ವರ್ಗದ ವಾದ. ಈ 'ದೂಧ್ ಪಿಲಾಯಿ' ಶಾಸ್ತ್ರದ ವಿಡಿಯೋ ಮಾತ್ರ ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಅಂತರವನ್ನು ಮತ್ತೊಮ್ಮೆ ನೆನಪಿಸುತ್ತಿದೆ.

Latest News