ಇಂದಿನ ಕಾಲದಲ್ಲಿ ಮದುವೆ ಎಂದ ಕೂಡಲೇ ಹುಡುಗಿಯರು ಅಥವಾ ಅವರ ಪೋಷಕರು ಮೊದಲು ಕೇಳುವುದು ಹುಡುಗನ ಸಂಬಳ ಎಷ್ಟು? ಸ್ವಂತ ಮನೆ ಇದೆಯೇ? ಐಷಾರಾಮಿ ಜೀವನ ನಡೆಸಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಯುವತಿಯ ಮಾತುಗಳು ಇಡೀ ಸಮಾಜದ ಆಲೋಚನಾ ಕ್ರಮವನ್ನೇ ಬದಲಿಸುವಂತಿವೆ. ಕೋಟಿ ರೂಪಾಯಿಯ ಆಫರ್ ಬಿಟ್ಟು, ಕೇವಲ ಹತ್ತು ಸಾವಿರ ಗಳಿಸುವ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯಾಗಿ ಆರಿಸಿಕೊಂಡ ಈಕೆಯ ನಿರ್ಧಾರದ ಹಿಂದೆ ಒಂದು ಭಾವನಾತ್ಮಕ ಕಥೆಯಿದೆ.
ಒಂದು ಸಂದರ್ಶನದ ವೇಳೆ ವರದಿಗಾರನು ಆಕೆಗೆ ಒಂದು ಪ್ರಶ್ನೆ ಕೇಳಿದನು: "ಇಂದಿನ ಕಾಲದಲ್ಲಿ ಹುಡುಗಿಯರು ಅತಿ ಹೆಚ್ಚು ಸಂಬಳ ಮತ್ತು ಐಷಾರಾಮಿ ಜೀವನವನ್ನು ಬಯಸುತ್ತಾರೆ. ನಿಮ್ಮ ಪ್ರಕಾರ, ನಿಮ್ಮ ಭವಿಷ್ಯದ ಪತಿ ಎಷ್ಟು ಸಂಬಳ ಗಳಿಸಬೇಕು? ಯಾವುದೇ ಮುಜುಗರವಿಲ್ಲದೆ, ಮುಗುಳ್ನಗುತ್ತಾ ಆಕೆ ನೀಡಿದ ಉತ್ತರ ಎಲ್ಲರನ್ನೂ ಬೆಚ್ಚಿಬೀಳಿಸಿತು. ಆಕೆ ಹೇಳಿದ್ದು, 'ಕೇವಲ 10 ರಿಂದ 12 ಸಾವಿರ ರೂಪಾಯಿಗಳು ಸಾಕು.'
ವರದಿಗಾರನಿಗೆ ತನ್ನ ಕಿವಿಯನ್ನೇ ನಂಬಲಾಗಲಿಲ್ಲ. "ಕೇವಲ ಹತ್ತು ಹನ್ನೆರಡು ಸಾವಿರವೇ? ಇಂದಿನ ಅತಿಯಾದ ಬೆಲೆ ಏರಿಕೆಯ ಕಾಲದಲ್ಲಿ ಲಕ್ಷಾಂತರ ರೂಪಾಯಿ ಗಳಿಸುವವರನ್ನು ಬಿಟ್ಟು ಇಷ್ಟು ಕಡಿಮೆ ಸಂಬಳದ ಪತಿಯನ್ನು ಏಕೆ ಬಯಸುತ್ತೀರಿ?" ಎಂದು ಮತ್ತೆ ಆಶ್ಚರ್ಯದಿಂದ ಕೇಳಿದನು. ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದ ಆಕೆಯ ಮಾತುಗಳು, ಆಗ ಆ ಯುವತಿ ಅತ್ಯಂತ ಸರಳವಾಗಿ ಮತ್ತು ಗಂಭೀರವಾಗಿ ಕೊಟ್ಟ ಉತ್ತರ ಹೀಗಿತ್ತು:
ಇದು ಹಣದ ವಿಷಯವಲ್ಲ, ಇದು ಮೌಲ್ಯಗಳ ವಿಷಯ. ನನ್ನ ತಂದೆ ಕೇವಲ 10-12 ಸಾವಿರ ರೂಪಾಯಿ ಗಳಿಸುತ್ತಲೇ ನನ್ನನ್ನು ಬೆಳೆಸಿದರು. ಅಷ್ಟೇ ಕಡಿಮೆ ಆದಾಯದಲ್ಲಿ ನಾನು ಗೌರವಯುತವಾಗಿ ಮತ್ತು ಅತ್ಯಂತ ಸಂತೋಷದಿಂದ ಬೆಳೆಯಲು ಸಾಧ್ಯವಾಗಿರುವಾಗ, ನನ್ನ ಪತಿಯೊಂದಿಗೆ ಅಷ್ಟೇ ಸರಳವಾಗಿ ನನ್ನ ಜೀವನವನ್ನು ಕಟ್ಟಿಕೊಳ್ಳಲು ಏಕೆ ಸಾಧ್ಯವಿಲ್ಲ? ಎಂದಳು. ಹೌದು ಇವರ ಈ ಮಾತುಗಳು ಹಣಕ್ಕಿಂತ ಸಂಬಂಧಗಳು ಮತ್ತು ನೈತಿಕ ಮೌಲ್ಯಗಳು ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೆ ಸಾರಿದವು ಎಂದು ಹೇಳಿದರೆ ತಪ್ಪಾಗಲಾರದು.
ಹೌದು, ನಿಜವಾದ ಸಂತೋಷವಿರುವುದು ದೊಡ್ಡ ಬಂಗಲೆಯಲ್ಲಲ್ಲ, ಬದಲಿಗೆ ನಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ಪ್ರೀತಿಸುವ ವ್ಯಕ್ತಿಯ ಜೊತೆಗಿನ ಸರಳ ಜೀವನದಲ್ಲಿ. ಹಣವು ಸೌಲಭ್ಯಗಳನ್ನ ನೀಡಬಲ್ಲದು, ಆದರೆ ಮನಸ್ಸಿನ ನೆಮ್ಮದಿಯನ್ನಲ್ಲ. ಪರಸ್ಪರ ಗೌರವ ಮತ್ತು ಪ್ರೀತಿಯಿದ್ದರೆ ಎಂತಹ ಕಷ್ಟದ ಕಾಲವನ್ನೂ ಸುಲಭವಾಗಿ ದಾಟಬಹುದು ಎಂಬುದಕ್ಕೆ ಈ ಯುವತಿಯೇ ಸಾಕ್ಷಿ.
Here is the full video
— AnuCreate.in_ (@Imdead108_in) March 12, 2026
Creadit: Real Insta owner pic.twitter.com/6U5NGBcXWf
ಇಂದಿಗೂ ಇಂತಹ ಆಲೋಚನೆಯ ಹುಡುಗಿಯರು ಇದ್ದಾರೆಯೇ ಎನ್ನುವ ಪ್ರಶ್ನೆಗೆ ಖಂಡಿತವಾಗಿಯೂ ಇದ್ದಾರೆ ಎಂದು ಹೇಳಬಹುದು. ಜಗತ್ತು ಎಷ್ಟೇ ಆಧುನಿಕವಾದರೂ, ಇಂದಿಗೂ ಸರಳತೆ ಸಂಬಂಧಗಳಿಗೆ ಬೆಲೆ ಕೊಡುವ ಮನಸ್ಸುಗಳು ನಮ್ಮ ನಡುವೆಯೇ ಇವೆ. ಪ್ರಚಾರಕ್ಕೆ ಬಾರದ ಇಂತಹ ಸಾವಿರಾರು ಉದಾಹರಣೆಗಳು ನಮ್ಮ ಸಮಾಜದ ಅಡಿಪಾಯವಾಗಿವೆ. ಜೀವನ ಎಂದರೆ ಕೇವಲ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದಲ್ಲ, ಬದಲಿಗೆ ಪ್ರೀತಿಪಾತ್ರರೊಂದಿಗೆ ನೆಮ್ಮದಿಯಿಂದ ಬದುಕುವುದು. ಈ ಯುವತಿಯ ಮಾತುಗಳು ನಮಗೆಲ್ಲರಿಗೂ ಒಂದು ದೊಡ್ಡ ಪಾಠ.