ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಕೇವಲ ಮನೋರಂಜನೆ ನೀಡುವುದಿಲ್ಲ, ಬದಲಾಗಿ ಸಮಾಜದ ನೈತಿಕತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತವೆ. ಇತ್ತೀಚೆಗೆ ಸಿನಿಮಾ ಥಿಯೇಟರ್ ಒಂದರಲ್ಲಿ ಯುವಕನೊಬ್ಬ ಇಬ್ಬರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ನೋಡಿದ ಜನರು 'ಇದು ಸಿನಿಮಾ ಮಂದಿರವೋ ಅಥವಾ ಓಯೋ (OYO) ರೂಮೋ?" ಎಂದು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.
ರಾತ್ರಿ ಹೊತ್ತಿನ ಸಿನಿಮಾ ಪ್ರದರ್ಶನದ ವೇಳೆ ಸಾರ್ವಜನಿಕ ಸ್ಥಳವೆಂಬ ಪರಿವೆಯೇ ಇಲ್ಲದೆ ಈ ಯುವಕ ಮತ್ತು ಯುವತಿಯರು ನಡೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿದೆ. ಸಿನಿಮಾ ನೋಡಲು ಕುಟುಂಬ ಸಮೇತ ಬರುವವರಿಗೆ ಇಂತಹ ದೃಶ್ಯಗಳು ಮುಜುಗರ ಉಂಟುಮಾಡುತ್ತವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇಂದಿನ ಯುವ ಪೀಳಿಗೆಯ ಹಾದಿ ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. 'ಸಿನಿಮಾ ನೋಡಲು ಹೋಗುವುದು ಮನೋರಂಜನೆಗಾಗಿ, ಆದರೆ ಅದನ್ನ ಇಂತಹ ಅಸಭ್ಯ ಕೆಲಸಗಳಿಗೆ ಬಳಸಿಕೊಳ್ಳುವುದು ಎಷ್ಟು ಸರಿ?' ಎನ್ನುವುದು ಬಹುತೇಕರ ವಾದ ಆಗಿದೆ.
ಈ ಘಟನೆಯು ಇಂದಿನ ತಲೆಮಾರಿನ ಮೌಲ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪ್ರೀತಿ ಅಥವಾ ಗೆಳೆತನ ಎನ್ನುವುದು ವೈಯಕ್ತಿಕ ವಿಚಾರವಾದರೂ, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಾಗ ಒಂದು ಮಿತಿ ಇರಬೇಕು. ಥಿಯೇಟರ್‌ಗಳು ಸಾರ್ವಜನಿಕ ಆಸ್ತಿಯಾಗಿದ್ದು, ಅಲ್ಲಿ ಹಿರಿಯರು, ಮಕ್ಕಳು ಮತ್ತು ಗೃಹಿಣಿಯರು ಇರುತ್ತಾರೆ. ಇಂತಹ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದು ಸಾಂಸ್ಕೃತಿಕ ಅವನತಿಯ ಸಂಕೇತ ಎಂದು ಅನೇಕರು ಟೀಕಿಸುತ್ತಿದ್ದಾರೆ. "ಫ್ರೀಡಂ" ಅಥವಾ ಸ್ವಾತಂತ್ರ್ಯ ಎನ್ನುವ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಧೋರಣೆ ಹೆಚ್ಚಾಗುತ್ತಿರುವುದು ಅಪಾಯಕಾರಿ ಮುನ್ಸೂಚನೆಯಾಗಿದೆ.
ಈ ವಿಡಿಯೋ ನೋಡಿದ ಮೇಲೆ ಸಿನಿಮಾ ಮಂದಿರಗಳ ಭದ್ರತೆ ಮತ್ತು ನಿಯಮಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಕತ್ತಲೆಯನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ವ್ಯಕ್ತಿಗಳ ವಿರುದ್ಧ ಥಿಯೇಟರ್ ಮಾಲೀಕರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಚಿತ್ರಮಂದಿರದ ಸಿಬ್ಬಂದಿಗಳು ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸುವುದರಿಂದ ಇಂತಹ ಘಟನೆಗಳನ್ನು ತಡೆಯಬಹುದು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದರೆ ಮಾತ್ರ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯ.
ಸಮಾಜದ ದೃಷ್ಟಿಯಿಂದ ನೋಡಿದರೆ ಇದು ಖಂಡಿತವಾಗಿಯೂ ಸರಿಯಾದ ನಡೆಯಲ್ಲ. ಯುವಜನತೆ ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆಗಳು ಕೇವಲ ವೈಯಕ್ತಿಕ ಘನತೆಯನ್ನು ಕುಗ್ಗಿಸುವುದಲ್ಲದೆ, ಇಡೀ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ನವ ಪೀಳಿಗೆಯು ಆಧುನಿಕತೆಯ ಜೊತೆಗೆ ಸಂಸ್ಕಾರ ಮತ್ತು ಗೌರವವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ.
Theater ❌
— RMVA (@LovelyRmva) March 3, 2026
OYO Room ☑️ pic.twitter.com/B5J4NTBoff
ಮನೋರಂಜನೆಯ ತಾಣಗಳು ಪ್ರೀತಿಯ ವಿಕೃತ ಪ್ರದರ್ಶನಕ್ಕೆ ವೇದಿಕೆಯಾಗಬಾರದು. ನಾವು ಬೆಳೆಯುತ್ತಿರುವ ಸಮಾಜವು ಸುಸಂಸ್ಕೃತವಾಗಿರಬೇಕೆಂದರೆ, ಇಂತಹ ಘಟನೆಗಳನ್ನ ಕೇವಲ 'ವೈರಲ್ ವಿಡಿಯೋ' ಎಂದು ನೋಡಿ ನಗುವ ಬದಲು, ಜಾಗೃತಿ ಮೂಡಿಸುವುದು ಮತ್ತು ಪ್ರತಿಭಟಿಸುವುದು ಮುಖ್ಯವಾಗಿದೆ.