ಗಿಲ್ಲಿ ಅಭಿಮಾನಿಗಳ ಉತ್ಸಾಹ ಕಂಡು ಭಾವುಕರಾದ ಗಿಲ್ಲಿ ತಾಯಿ - ಅಸಲಿಗೆ ಏನು ಹೇಳಿದರು ಗೊತ್ತಾ?

ಮಂಡ್ಯದಲ್ಲಿ ಬಿಗ್ ಬಾಸ್ ಸೀಸನ್ 12 ಫೈನಲ್‌ಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಎಲ್ಲೆಡೆ ಗಿಲ್ಲಿಯದ್ದೇ ಗುಣಗಾನ ಕೇಳಿಬರುತ್ತಿದೆ. ಸ್ಪರ್ಧೆಯ ಅಂತಿಮ ಹಂತದಲ್ಲಿ ಗಿಲ್ಲಿ ಪರವಾಗಿ ಜನರ ಅಲೆ ಏಳುತ್ತಿದ್ದು, ಅಭಿಮಾನಿಗಳ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಬಹುದು.  ಹೌದು ಗಿಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ತೋರಿಸಲು ವಿಭಿನ್ನ ರೀತಿಯಲ್ಲಿ ಮುಂದಾಗಿದ್ದಾರೆ. 

ಬಿಗ್ ಬಾಸ್ ಗಿಲ್ಲಿ ಕ್ರೇಜ್ – ತಾಯಿಯ ಸಂತೋಷದ ಪ್ರತಿಕ್ರಿಯೆ
ಬಿಗ್ ಬಾಸ್ ಗಿಲ್ಲಿ ಕ್ರೇಜ್ – ತಾಯಿಯ ಸಂತೋಷದ ಪ್ರತಿಕ್ರಿಯೆ

ಬೆಂಗಳೂರಿನಿಂದ ಸೇರಿದಂತೆ ವಿವಿಧೆಡೆಯಿಂದ ಬಂದ ಅಭಿಮಾನಿಗಳು ಗಿಲ್ಲಿಯ ತಂದೆ ತಾಯಿಗೆ ಸನ್ಮಾನ ಸಲ್ಲಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಯ ಕುಟುಂಬಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ಗಿಲ್ಲಿ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಪ್ರಕಾರ, ಈ ಬಾರಿ ಬಿಗ್ ಬಾಸ್‌ನಲ್ಲಿ ಗಿಲ್ಲಿಗೆ ಗೆಲುವು ಶತಸಿದ್ಧ. ಇತ್ತ ಗಿಲ್ಲಿ ಅಭಿಮಾನಿಗಳ ಉತ್ಸಾಹವನ್ನು ಕಂಡ ಗಿಲ್ಲಿಯ ತಾಯಿ ಸವಿತಾ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ಇಷ್ಟೊಂದು ಜನರನ್ನ ಗಿಲ್ಲಿ ಸಂಪಾದಿಸಿದ್ದಾನೆ, ಇದನ್ನ ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ” ಎಂದು ತಾಯಿ ಭಾವುಕವಾಗಿ ಹೇಳಿದ್ದಾರೆ. ಮಗನಿಗೆ ದೊರೆಯುತ್ತಿರುವ ಜನಪ್ರಿಯತೆ ತಾಯಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಬಹುದು. 

ಮತ್ತೊಂದೆಡೆ, ಗಿಲ್ಲಿಯ ಪ್ರಾಥಮಿಕ ಶಿಕ್ಷಣದ ದಾಖಲೆಗಳನ್ನು ನೀಡಿದ ದಡದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು, ಗಿಲ್ಲಿಯ ಮೂಲ ಹೆಸರು ನಟರಾಜ್.ಕೆ ಎಂದು ತಿಳಿಸಿದ್ದಾರೆ. 2004 ರಿಂದ 2011 ರವರೆಗೆ ನಟರಾಜ್ ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಈಗ ಬಿಗ್ ಬಾಸ್ ವೇದಿಕೆಯಲ್ಲಿ ಗಿಲ್ಲಿಯಾಗಿ ಪೇಮಸ್ ಆಗಿರುವುದು ಶಾಲೆಗೆ ಹೆಮ್ಮೆಯ ವಿಷಯವಾಗಿದೆ. ಮಂಡ್ಯದಲ್ಲಿ ಗಿಲ್ಲಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭಿಮಾನಿಗಳ ಹೃದಯದಲ್ಲಿ ಗಿಲ್ಲಿ ಗೆಲುವು ಸಾಧಿಸಬೇಕು ಎಂಬ ಆಶಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯ ನಡೆ, ಮಾತು, ಆಟ ಎಲ್ಲವೂ ಜನಮನ ಗೆದ್ದಿರುವುದರಿಂದ, ಅಭಿಮಾನಿಗಳ ಬೆಂಬಲವೂ ಹೆಚ್ಚುತ್ತಿದೆ.

ಒಟ್ಟಿನಲ್ಲಿ, ಬಿಗ್ ಬಾಸ್ ಸೀಸನ್ 12 ಫೈನಲ್‌ಗೆ ದಿನಗಣನೆ ನಡೆಯುತ್ತಿರುವ ಈ ಸಮಯದಲ್ಲಿ, ಮಂಡ್ಯದಲ್ಲಿ ಗಿಲ್ಲಿ ಕ್ರೇಜ್ ಹೊಸ ಬಣ್ಣ ತುಂಬಿದ್ದು, ಅಭಿಮಾನಿಗಳ ಪ್ರಾರ್ಥನೆ, ಸನ್ಮಾನ ಮತ್ತು ತಾಯಿಯ ಭಾವುಕತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. 

Latest News