ಬೆಂಗಳೂರಿನ 22 ವರ್ಷದ ಹುಡುಗಿ ದೀಕ್ಷಾ ಮಾಡಿರೋ ಒಂದು ಕೆಲಸ ಇಡೀ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಕೈಯಲ್ಲಿ ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲದಿದ್ರೂ, ತಿಂಗಳಿಗೆ ಬರೋ 60 ಸಾವಿರ ಸಂಬಳದ ಕೆಲಸಕ್ಕೆ ಆಕೆ ದಿಢೀರ್ ಅಂತ ರಿಸೈನ್ ಮಾಡಿ ಮನೆಗೆ ನಡೆದಿದ್ದಾಳೆ! ಇವತ್ತಿನ ದಿನಗಳಲ್ಲಿ ಇಷ್ಟು ಒಳ್ಳೆ ಸಂಬಳ ಸಿಗೋ ಕೆಲಸ ಸಿಗೋದೇ ಕಷ್ಟ ಇರಬೇಕಾದ್ರೆ, ಈ ಹುಡುಗಿ ತಗೊಂಡಿರೋ ರಿಸ್ಕ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಏನಿದು ಸ್ಟೋರಿ? ಈಕೆ ಕೆಲಸ ಬಿಡೋಕೆ ಅಸಲಿ ಕಾರಣ ಏನು? ಅನ್ನೋದನ್ನ ಅವಳೇ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾಳೆ.
9 ಟು 5 ಅಲ್ಲ ಗುರು, ಇದು 9 ಟು 9 ಲೈಫ್
ದೀಕ್ಷಾಗೆ ಕಾಲೇಜು ಮುಗಿಯುತ್ತಿದ್ದ ಹಾಗೆ ಪ್ಲೇಸ್‌ಮೆಂಟ್ ಸಿಕ್ಕಿತ್ತು. ಒಳ್ಳೆ ಮಾರ್ಕೆಟಿಂಗ್ ಕೆಲಸ ಅಂತಾನೇ ಆಕೆ ಬೆಂಗಳೂರಿಗೆ ಶಿಫ್ಟ್ ಆಗಿದ್ಲು. 22 ವರ್ಷಕ್ಕೆ 60 ಸಾವಿರ ಸಂಬಳ ಅಂದ್ರೆ ಸುಮ್ನೇನಾ? ಆಫೀಸ್‌ನಲ್ಲಿ ಒಳ್ಳೆ ಫ್ರೆಂಡ್ಸ್ ಸಿಕ್ಕಿದ್ರು, ಕೆಲಸನು ಚೆನ್ನಾಗಿಯೇ ಇತ್ತು. ಆದರೆ, ಆಕೆಗೆ ಕಾಡಿದ್ದು ಆಫೀಸ್‌ನ ದಿನಚರಿ.
ಬೆಳಗ್ಗೆ 9 ಗಂಟೆಗೆ ಆಫೀಸ್‌ಗೆ ಹೋದ್ರೆ ವಾಪಸ್ ಬರೋದಕ್ಕೆ ರಾತ್ರಿ 9 ಆಗ್ತಿತ್ತು. ಇದು 9 ಟು 5 ಲೈಫ್ ಅಲ್ಲವೇ ಅಲ್ಲ, ಕಂಪ್ಲೀಟ್ ಆಗಿ 9 ಟು 9 ಲೈಫ್ ಆಗಿಬಿಟ್ಟಿತ್ತು ಅಂತ ದೀಕ್ಷಾ ಬೇಸರ ಹೊರಹಾಕಿದ್ದಾಳೆ.
ದಿನವಿಡೀ ದನ ತರ ದುಡಿಯೋದು, ಮನೆಗೆ ಬಂದು ಸುಸ್ತಾಗಿ ಊಟ ಮಾಡಿ ಮಲಗೋದು, ಮತ್ತೆ ಮರುದಿನ ಬೆಳಗ್ಗೆ ಎದ್ದು ಅದೇ ರೊಟೀನ್ ಫಾಲೋ ಮಾಡೋದು... ಇದೇ ಅವಳ ಲೈಫ್ ಆಗಿತ್ತಂತೆ. ಇಡೀ ವಾರ ಕಷ್ಟಪಟ್ಟು ದುಡಿದು, ಕೊನೆಗೆ ವೀಕೆಂಡ್‌ನಲ್ಲಿ ಕೇವಲ ಎರಡು ದಿನ ಎಂಜಾಯ್ ಮಾಡೋಕೆ ಇಡೀ ವಾರ ಕಾಯಬೇಕಾದ ಪರಿಸ್ಥಿತಿ ಅವಳಿಗೆ ಇಷ್ಟ ಇರಲಿಲ್ಲ. ಈ ಮೆಕ್ಯಾನಿಕಲ್ ಲೈಫ್‌ನಿಂದ ಬೇಸತ್ತ ದೀಕ್ಷಾ, ಕೊನೆಗೊಂದು ದಿನ ದೊಡ್ಡ ನಿರ್ಧಾರ ಮಾಡೇ ಬಿಟ್ಲು.
ಬ್ಯಾಕಪ್ ಪ್ಲಾನ್ ಇಲ್ಲ, ಆದ್ರೂ ರಿಸೈನ್ ಮಾಡ್ದೆ
ಸಾಮಾನ್ಯವಾಗಿ ಯಾರಾದ್ರೂ ಕೆಲಸ ಬಿಡಬೇಕು ಅನ್ಕೊಂಡ್ರೆ ಕೈಯಲ್ಲಿ ಇನ್ನೊಂದು ಆಫರ್ ಲೆಟರ್ ಇಟ್ಕೊಂಡಿರ್ತಾರೆ. ಆದ್ರೆ ದೀಕ್ಷಾ ಆ ತರ ಮಾಡಿಲ್ಲ. ಮುಂದೆ ಏನ್ ಮಾಡ್ಬೇಕು ಅಂತ ನನಗೂ ಗೊತ್ತಿಲ್ಲ, ನನ್ನ ಹತ್ರ ಯಾವುದೇ ಪ್ಲಾನ್ ಇಲ್ಲ. ದಿನಾ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳೋದಕ್ಕಿಂತ, ಒಂದು ದಿನ ಸಡನ್ ಆಗಿ ರಿಸೈನ್ ಮಾಡಿಬಿಟ್ಟೆ ಅಂತ ಆಕೆ ಧೈರ್ಯವಾಗಿ ಹೇಳಿದ್ದಾಳೆ.
ಅವಳ ಪ್ರಕಾರ, ಲೈಫಲ್ಲಿ ರಿಸ್ಕ್ ತಗೊಳ್ಳದಿದ್ರೆ ಹೇಳಿಕೊಳ್ಳೋಕೆ ಯಾವುದೇ ಸ್ಟೋರಿ ಇರಲ್ಲ. ಒಂದೇ ಕಡೆ ಇಡೀ ಜೀವನ ಕಳೆಯೋಕೆ ಅವಳಿಗೆ ಇಷ್ಟವಿಲ್ಲವಂತೆ. ಒಂದು ವೇಳೆ ಈ ನಿರ್ಧಾರ ಉಲ್ಟಾ ಹೊಡೆದರೂ ಪರವಾಗಿಲ್ಲ, ಮತ್ತೆ ಮೊದಲಿನಿಂದ ಲೈಫ್ ಶುರು ಮಾಡ್ತೀನಿ ಅನ್ನೋದು ಈ ಯುವತಿಯ ಕಾನ್ಫಿಡೆನ್ಸ್.
ದೀಕ್ಷಾ ಧೈರ್ಯಕ್ಕೆ ನೆಟ್ಟಿಗರು ಏನಂದ್ರು?
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದ ಹಾಗೆ, ಕಾರ್ಪೊರೇಟ್ ಲೈಫ್‌ನಿಂದ ರೋಸಿ ಹೋಗಿರೋ ಸಾವಿರಾರು ಐಟಿ ಹಾಗೂ ಇತರ ಕಂಪನಿ ಉದ್ಯೋಗಿಗಳು ದೀಕ್ಷಾಗೆ ಸಪೋರ್ಟ್ ಮಾಡ್ತಿದ್ದಾರೆ.
- ನಿಮ್ಮ ವಿಡಿಯೋ ನೋಡಿ ನನಗೂ ಕೆಲಸ ಬಿಡೋ ಧೈರ್ಯ ಬರ್ತಿದೆ ಅಂತ ಕೆಲವರು ಕಮೆಂಟ್ ಮಾಡಿದ್ರೆ,
- ಲೈಫಲ್ಲಿ ಈ ತರ ಬ್ರೇಕ್ ತಗೊಳ್ಳೋದು ತುಂಬಾನೇ ಮುಖ್ಯ, ನೀನು ಮಾಡಿದ್ದು ಕರೆಕ್ಟ್ ಅಂತ ಇನ್ನು ಕೆಲವರು ಬೆನ್ನು ತಟ್ಟಿದ್ದಾರೆ.
ಈ ರೊಬೋಟಿಕ್ ಲೈಫ್ ಬೇಡವೇ ಬೇಡ ಅಂತ 60 ಸಾವಿರ ಸಂಬಳದ ಕೆಲಸಕ್ಕೆ ಲಾತ್ ಹೊಡೆದು ಬಂದಿರೋ ದೀಕ್ಷಾ ನಿರ್ಧಾರ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.