ರಾಜ್ಯ ರಾಜಕೀಯದಲ್ಲಿ ಈಗ ಎದ್ದಿರೋ ಬಿರುಗಾಳಿಯ ಮಧ್ಯೆ, ಎಲ್ಲರ ಕಣ್ಣು ಮುಂದಿನ ಮುಖ್ಯಮಂತ್ರಿ ಅಂತಾನೇ ಬಿಂಬಿತವಾಗ್ತಿರೋ ಡಿ.ಕೆ. ಶಿವಕುಮಾರ್ ಅವರ ಮೇಲಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಕನಕಪುರ ಬಂಡೆ ಡಿಕೆಶಿ ಸಿಎಂ ಗದ್ದುಗೆ ಏರೋದು ಆಲ್ಮೋಸ್ಟ್ ಫಿಕ್ಸ್ ಆಗಿದೆ. ಆದ್ರೆ, ಈ ಹೊತ್ತಲ್ಲಿ ಇಡೀ ದೇಶಾದ್ಯಂತ ಭಾರಿ ಸೌಂಡ್ ಮಾಡ್ತಿರೋದು ಡಿಕೆಶಿ ಅವರ ಆರ್ಥಿಕ ಶಕ್ತಿ!
ಚುನಾವಣಾ ಸುಧಾರಣೆಗಳಿಗಾಗಿ ಕೆಲಸ ಮಾಡೋ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಿಡುಗಡೆ ಮಾಡಿರೋ ಲೇಟೆಸ್ಟ್ ರಿಪೋರ್ಟ್ ನೋಡಿ ಇಡೀ ದೇಶವೇ ಕಣ್ಣು ದುಂಡು ಮಾಡಿದೆ. ಯಾಕಂದ್ರೆ ಮುಂದಿನ ಸಿಎಂ ಆಗಲಿರೋ ಡಿಕೆಶಿ ಸಾಧಾರಣ ವ್ಯಕ್ತಿಯಲ್ಲ, ಇಡೀ ಭಾರತದಲ್ಲೇ 'ಅತಿ ಶ್ರೀಮಂತ ಶಾಸಕ' ಅನ್ನೋ ಹೆಗ್ಗಳಿಕೆ ಇವರದ್ದು. ಹಾಗಾದ್ರೆ ಇವರ ಹತ್ತಿರ ಇರೋ ಒಟ್ಟು ಆಸ್ತಿ ಎಷ್ಟು? ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
1,413 ಕೋಟಿ ಒಡೆಯ! ಕಣ್ಣು ಕೋರೈಸುವ ಆಸ್ತಿ ವಿವರ
2023ರ ವಿಧಾನಸಭಾ ಎಲೆಕ್ಷನ್ ಟೈಮ್ನಲ್ಲಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದ ಅಫಿಡವಿಟ್ (Affidavit) ಪ್ರಕಾರ, ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 1,413 ಕೋಟಿ ರೂಪಾಯಿ! ಹೌದು, ನೀವು ಕೇಳಿದ್ದು ನಿಜ, ಬರೋಬ್ಬರಿ ಒಂದುವರೆ ಸಾವಿರ ಕೋಟಿಯ ಹತ್ತಿರ ಇವರ ಆಸ್ತಿ ಇದೆ. ಇವರ ಈ ಬಿಲಿಯನೇರ್ ಲೆಕ್ಕಾಚಾರವನ್ನು ಬಿಡಿಬಿಡಿಯಾಗಿ ನೋಡಿದ್ರೆ ಅವರ ರಿಯಲ್ ಪವರ್ ಏನು ಅಂತ ಅರ್ಥ ಆಗುತ್ತೆ:
ಕೈಯಲ್ಲಿರೋ ಚರಾಸ್ತಿ ಎಷ್ಟು? - ಡಿಕೆಶಿ ಅವರ ಒಟ್ಟು ಆಸ್ತಿಯಲ್ಲಿ ಬ್ಯಾಂಕ್ ಡೆಪಾಸಿಟ್, ಬೇರೆ ಬೇರೆ ಬ್ಯುಸಿನೆಸ್ ಕಂಪನಿಗಳ ಶೇರುಗಳು, ಬಾಂಡ್ಗಳು ಮತ್ತು ಬಂಗಾರ-ವಜ್ರದ ಒಡವೆಗಳ ರೂಪದಲ್ಲಿರೋ ಚರಾಸ್ತಿಯೇ ಸಿಂಹಪಾಲನ್ನು ಹೊಂದಿದೆ. ಇದರ ಮೌಲ್ಯವೇ ಬರೋಬ್ಬರಿ 1,140 ಕೋಟಿ ರೂಪಾಯಿ!
ಸ್ಥಿರಾಸ್ತಿ ಎಷ್ಟಿದೆ? - ಇನ್ನು ಬೆಂಗಳೂರು ಸೇರಿದಂತೆ ಹಲವೆಡೆ ಇರೋ ಬೆಲೆಬಾಳೋ ಕಮರ್ಷಿಯಲ್ ಬಿಲ್ಡಿಂಗ್ಗಳು, ನೂರಾರು ಎಕರೆ ಕೃಷಿ ಭೂಮಿ, ಕೃಷಿಯೇತರ ಜಮೀನು ಮತ್ತು ಆಡಂಬರದ ನಿವಾಸಗಳ ರೂಪದಲ್ಲಿರೋ ಸ್ಥಿರಾಸ್ತಿಯ ಒಟ್ಟು ಮೌಲ್ಯ 273 ಕೋಟಿ ರೂಪಾಯಿ.
ಸಾಲದ ಲೆಕ್ಕನೂ ಕಮ್ಮಿ ಇಲ್ಲ! - ಇಷ್ಟೊಂದು ಕೋಟಿಗಳ ಒಡೆಯನಾಗಿದ್ದರೂ ಡಿಕೆಶಿ ಅವರ ಹೆಸರಿನಲ್ಲಿ ದೊಡ್ಡ ಮಟ್ಟದ ಸಾಲವೂ ಇದೆ. ಅವರ ಅಫಿಡವಿಟ್ ಪ್ರಕಾರ, ಅವರ ಮೇಲಿರೋ ಒಟ್ಟು ಸಾಲ ಅಥವಾ ಆರ್ಥಿಕ ಹೊಣೆಗಾರಿಕೆಗಳು 265 ಕೋಟಿ ರೂಪಾಯಿ.
ಕೋಟಿ ಕೋಟಿ ಶಾಸಕರು - ಭಾರತದಲ್ಲೇ ಕರ್ನಾಟಕ ನಂಬರ್ ಒನ್!
ಇಲ್ಲಿ ಅತಿ ದೊಡ್ಡ ಟ್ವಿಸ್ಟ್ ಅಂದ್ರೆ, ದೇಶದ ಟಾಪ್ ಶ್ರೀಮಂತ ಶಾಸಕರ ಲಿಸ್ಟ್ ನೋಡಿದ್ರೆ ಅದರಲ್ಲಿ ಕೇವಲ ಡಿಕೆಶಿ ಮಾತ್ರವಲ್ಲ, ನಮ್ಮ ಕರ್ನಾಟಕದ ಶಾಸಕರದ್ದೇ ಕಂಪ್ಲೀಟ್ ಹವಾ ಇದೆ! ಭಾರತದ ಟಾಪ್-20 ಶ್ರೀಮಂತ ಶಾಸಕರ ಪಟ್ಟಿಯಲ್ಲಿ ನಮ್ಮ ರಾಜ್ಯದವರೇ ಬರೋಬ್ಬರಿ 12 ಜನರಿದ್ದಾರೆ. ಇಡೀ ದೇಶದಲ್ಲೇ ಅತಿ ಹೆಚ್ಚು ಅಂದರೆ ಸುಮಾರು ಶೇ. 14 ರಷ್ಟು ಕೋಟ್ಯಧಿಪತಿ ಶಾಸಕರನ್ನು ಹೊಂದುವ ಮೂಲಕ ಕರ್ನಾಟಕ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದ್ರೆ ಇವರೆಲ್ಲರಿಗಿಂತ ನಮ್ಮ ಕನಕಪುರ ಬಂಡೆ ಡಿಕೆಶಿ ಅವರೇ ಈ ಲಿಸ್ಟ್ನಲ್ಲಿ ರಾಜನಂತೆ ಮುಂಚೂಣಿಯಲ್ಲಿದ್ದಾರೆ.
ಶ್ರೀಮಂತ ಸಿಎಂ ಮುಂದಿರೋ ಅಸಲಿ ಸವಾಲುಗಳೇನು?
ದೇಶದ ಅತ್ಯಂತ ಶ್ರೀಮಂತ ನಾಯಕರಲ್ಲಿ ಒಬ್ಬರಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಏರುತ್ತಿರುವುದು ಅವರ ಬೆಂಬಲಿಗರಿಗೆ ಭಾರಿ ಖುಷಿ ತಂದಿದೆ. ಆದ್ರೆ, ಕನ್ನಡಿಗರ ಮನಸ್ಸಿನಲ್ಲಿ ಈಗ ಬೇರೆಯದೇ ಕುತೂಹಲ ಶುರುವಾಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ಆರ್ಥಿಕ ಬಿಕ್ಕಟ್ಟಿನಲ್ಲಿದೆ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಂತಹ ಟೈಮ್ನಲ್ಲಿ ಸ್ವತಃ ಭಾರಿ ಬ್ಯುಸಿನೆಸ್ ಮೈಂಡ್ ಹೊಂದಿರೋ, ತಾವೇ ದೊಡ್ಡ ಆರ್ಥಿಕ ಶಕ್ತಿಯಾಗಿರೋ ಡಿಕೆಶಿ ಅವರು ಸಿಎಂ ಆದ್ರೆ ರಾಜ್ಯದ ಖಜಾನೆಯನ್ನು ಹೇಗೆ ತುಂಬಿಸಲಿದ್ದಾರೆ? ಕರ್ನಾಟಕವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೇಗೆ ಪಾರು ಮಾಡ್ತಾರೆ? ಮತ್ತು ಬಡವರ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಹೇಗೆ ಮುನ್ನಡೆಸಲಿದ್ದಾರೆ ಅನ್ನೋದೇ ಈಗ ಸಾರ್ವಜನಿಕ ವಲಯದಲ್ಲಿರೋ ಬಿಗ್ ಸಸ್ಪೆನ್ಸ್.
ಯಾವುದೇ ಗಾಡ್ಫಾದರ್ ಇಲ್ಲದೆ ರಾಜಕೀಯಕ್ಕೆ ಬಂದು, ಇವತ್ತು ದೇಶದಲ್ಲೇ ಅತ್ಯಂತ ಶ್ರೀಮಂತ ಶಾಸಕನಾಗಿ ಬೆಳೆದು ನಿಂತಿರೋ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜರ್ನಿ ನಿಜಕ್ಕೂ ರೋಚಕ. ಈಗ ಅವರು ಕರ್ನಾಟಕದ 'ಸಾರಥಿ' ಆಗೋದು ಗ್ಯಾರಂಟಿ ಆಗಿದ್ದು, ತಮ್ಮದೇ ಆದ ಖಡಕ್ ಸ್ಟೈಲ್ನಲ್ಲಿ ಆಡಳಿತ ನಡೆಸಿ ಕರ್ನಾಟಕದ ಭವಿಷ್ಯವನ್ನು ಹೇಗೆ ಬದಲಾಯಿಸಲಿದ್ದಾರೆ ಅನ್ನೋದನ್ನು ಇಡೀ ದೇಶವೇ ಕಾದು ನೋಡುತ್ತಿದೆ!
Comments
Leave a Comment