ಚಿನ್ನ-ಬೆಳ್ಳಿ ಪ್ರಿಯರಿಗೆ ಬಂಪರ್ ಆಫರ್ - ಸತತ 2ನೇ ದಿನವೂ ದರ ಪಾತಾಳಕ್ಕೆ; ಬೆಂಗಳೂರಿನ ಇಂದಿನ ನಿಖರ ರೇಟ್ ಇಲ್ಲಿದೆ!!

ಮದುವೆ ಸೀಸನ್‌ನಲ್ಲಿ ಆಭರಣ ಖರೀದಿಸಲು ಪ್ಲಾನ್ ಮಾಡ್ತಾ ಇರೋ ಜನಸಾಮಾನ್ಯರಿಗೆ ಬುಲಿಯನ್ ಮಾರುಕಟ್ಟೆಯಿಂದ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಹೌದು, ಸತತ ಎರಡನೇ ದಿನವೂ (ಮೇ 16) ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಕುಸಿತ (Massive Price Drop) ಕಂಡಿದ್ದು, ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.!

ಸತತ ಎರಡನೇ ದಿನ – ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ;
ಸತತ ಎರಡನೇ ದಿನ – ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ;

ನಿನ್ನೆ ಅಷ್ಟೇ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿದ್ದ ಹಳದಿ ಲೋಹ ಇಂದು ಮತ್ತೆ ಅಗ್ಗವಾಗಿದೆ. ಅತ್ತ ಬೆಳ್ಳಿ ದರ ಕೂಡ ನಿನ್ನೆಯ ಐತಿಹಾಸಿಕ ಪತನದ ಬೆನ್ನಲ್ಲೇ, ಇಂದು ಮತ್ತೆ ಒಂದು ಕೆಜಿಗೆ ಬರೋಬ್ಬರಿ 10,000 ರೂಪಾಯಿಗಳಷ್ಟು ಪಾತಾಳಕ್ಕೆ ಕುಸಿದಿದೆ!

ಬೆಂಗಳೂರು ಮಾರುಕಟ್ಟೆಯ ಇಂದಿನ ನಿಖರ ಚಿನ್ನದ ದರಪಟ್ಟಿ!

ಸಿಲಿಕಾನ್ ಸಿಟಿಯಲ್ಲಿ ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಸ್ಥಳೀಯ ಬೇಡಿಕೆಯ ಆಧಾರದ ಮೇಲೆ ಚಿನ್ನದ ದರ ನಿರ್ಧಾರವಾಗುತ್ತದೆ. ಇಂದಿನ ವಹಿವಾಟಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1 ಗ್ರಾಂಗೆ 14,385 ರೂಪಾಯಿ ಹಾಗೂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 15,693 ರೂಪಾಯಿ ಆಗಿದೆ;

ತೂಕ 22K ಚಿನ್ನ (ಆಭರಣ) 24K ಚಿನ್ನ (ಶುದ್ಧ) 18K ಚಿನ್ನ
1 ಗ್ರಾಂ ₹14,385 (▼ ₹90) ₹15,693 (▼ ₹98) ₹11,770
8 ಗ್ರಾಂ ₹1,15,080 ₹1,25,544 ₹94,160
10 ಗ್ರಾಂ ₹1,43,850 ₹1,56,930 ₹1,17,700
100 ಗ್ರಾಂ ₹14,38,500 ₹15,69,300 ₹11,77,000

ಗಮನಿಸಿ - ಈ ಮೇಲಿನ ದರಪಟ್ಟಿಗಳಲ್ಲಿ 3% GST ಮತ್ತು ಆಭರಣಗಳ ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಸೇರಿರುವುದಿಲ್ಲ. ನಿಮ್ಮ ನಗರದ ಅಂತಿಮ ನಿಖರ ದರಕ್ಕಾಗಿ ಸ್ಥಳೀಯ ಜ್ಯುವೆಲರಿ ಶೋರೂಮ್ ಅನ್ನು ಸಂಪರ್ಕಿಸಿ.!

ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ! (Silver Rate Today)

ಚಿನ್ನದ ಬೆಲೆ ಒಂದೆಡೆಯಾದರೆ, ಇತ್ತ ಬೆಳ್ಳಿಯ ದರ ಕೂಡ ನಿರಂತರವಾಗಿ ಕೆಳಮುಖವಾಗಿ ಚಲಿಸುತ್ತಿದೆ. ಜನವರಿಯಿಂದ ಸತತವಾಗಿ ರಾಕೆಟ್ ವೇಗದಲ್ಲಿ ಏರಿಕೆ ಕಂಡಿದ್ದ ಬೆಳ್ಳಿಯ ದರವು, ಕಳೆದ ಎರಡು ದಿನಗಳಿಂದ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ 280 ರೂಪಾಯಿ ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ 2,80,000 ರೂಪಾಯಿ ತಲುಪಿದೆ.

  • 1 ಗ್ರಾಂ ಇಂದಿನ ದರ - ₹280 (▼ ₹10)
  • 10 ಗ್ರಾಂ ಇಂದಿನ ದರ - ₹2,800
  • 100 ಗ್ರಾಂ ಇಂದಿನ ದರ - ₹28,000
  • 1 ಕೆಜಿ ಇಂದಿನ ದರ - ₹2,80,000 (▼ ₹10,000)

ದರ ಕುಸಿತಕ್ಕೆ ಅಸಲಿ ಕಾರಣವೇನು?

ಸತತ ಎರಡು ದಿನಗಳ ಈ ಭಾರಿ ಕುಸಿತಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಬಲಗೊಂಡಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ಪೆಟ್ರೋಲ್ ಬೆಲೆ ಏರಿಕೆಯಾದ ಬಳಿಕ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ಮತ್ತೊಂದು ಮುಖ್ಯ ವಿಚಾರವೆಂದರೆ, ‘ಅನಿವಾರ್ಯವಲ್ಲದಿದ್ದರೆ ಚಿನ್ನ ಖರೀದಿಸಬೇಡಿ’ ಎಂದು ಪ್ರಧಾನಿ ಮೋದಿಯವರು ಇತ್ತೀಚೆಗೆ ನೀಡಿದ್ದ ಕರೆಯೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಡಿಮ್ಯಾಂಡ್ ಮತ್ತು ಕ್ರೇಜ್ ಕೊಂಚ ಕಡಿಮೆಯಾಗಲು ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ಆಭರಣ ಖರೀದಿಗೆ ಇದೇ ಬೆಸ್ಟ್ ಟೈಮ್; 

Latest News