ಜನವರಿ 8, 2026ರಂದು ಯಶ್ ತಮ್ಮ 40ನೇ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಗೀತು ಮೋಹಂದಾಸ್ ನಿರ್ದೇಶನದ ಈ ಚಿತ್ರವು “Fairy Tale for Grown-ups” ಎಂಬ ವಿಶಿಷ್ಟ ಟ್ಯಾಗ್‌ಲೈನ್‌ನೊಂದಿಗೆ ಮಾರ್ಚ್ 19, 2026ರಂದು ಬಿಡುಗಡೆಯಾಗಲಿದೆ. ಟೀಸರ್‌ನಲ್ಲಿ ಯಶ್ ಬರುವ ಮುನ್ನ ಕಾರಿನಲ್ಲಿರುವ ಹಾಟ್ ದೃಶ್ಯದ ಬಗ್ಗೆ ಕೆಲವ್ರು ಇದೆಲ್ಲಾ ಬೇಕಾಗಿರಲಿಲ್ಲ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಆದರೆ ಯಶ್ ಅವರ ಎಂಟ್ರಿ ದೃಶ್ಯವು ಅಭಿಮಾನಿಗಳ ಗಮನ ಸೆಳೆದಿದೆ. ದೃಶ್ಯದಲ್ಲಿ ಯಶ್ ಪಾತ್ರ ಶಕ್ತಿಯುತ ಆಗಿ ಕಾಣಿಸಿದ್ದು, ಗಂಭೀರ ಹಾಗೂ ಆಕರ್ಷಕವಾಗಿ ಕಾಣಿಸಿಕೊಂಡಿದೆ. ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅದೊಂದು ಹಾಟ್ ದೃಶ್ಯವನ್ನು ನೋಡಿ ಪಾಸಿಟಿವ್ ಮತ್ತು ನೆಗಟಿವ್ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಟೀಸರ್‌ನ ದೃಶ್ಯಕಲೆ, ಯಶ್‌ನ ಲುಕ್ ಮತ್ತು ಹಾಲಿವುಡ್ ಮಟ್ಟದ ತಂತ್ರಜ್ಞಾನವನ್ನು ಮೆಚ್ಚಿದ್ದಾರೆ. “KGF ನಂತರದ ಮತ್ತೊಂದು ಮೈಲುಗಲ್ಲು” ಎಂದು ಪ್ರಶಂಸಿಸುತ್ತಿದ್ದಾರೆ. ಇನ್ನೊಂದೆಡೆ, ಕೆಲವರು ಟೀಸರ್‌ನ ಗಾಢ ವಾತಾವರಣ ಮತ್ತು ಹಿಂಸಾತ್ಮಕ ಶೈಲಿಯನ್ನು ಟೀಕಿಸಿದ್ದಾರೆ. ಕಥಾಹಂದರದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ “ಕೇವಲ ಶೈಲಿ, ವಿಷಯದ ಕೊರತೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ದಾಖಲಿಸಿದೆ. #ToxicTeaser #Yash #RockingStarYash ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿದ್ದು, ಅಭಿಮಾನಿಗಳ ಚರ್ಚೆ ಮುಂದುವರಿಯುತ್ತಿದೆ. ‘ಟಾಕ್ಸಿಕ್’ ಚಿತ್ರವು ಧುರಂಧರ 2 ಚಿತ್ರದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಲಿರುವುದರಿಂದ, ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ. ಕೆಲವರು “ಟಾಕ್ಸಿಕ್ ಧುರಂಧರ 2ಗೆ RIP” ಎಂದು ಹೋಲಿಕೆ ಮಾಡಿದರೆ, ಇತರರು ಯಶ್‌ನ ಪಾತ್ರವನ್ನು Rocky Bhaiಗೆ ಸಂಪೂರ್ಣ ವಿಭಿನ್ನ ಆದರೆ ಅದೇ swag ಎಂದು ಮೆಚ್ಚಿದ್ದಾರೆ.
ಒಟ್ಟಾರೆ, ‘ಟಾಕ್ಸಿಕ್’ ಟೀಸರ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರಿನಲ್ಲಿರುವ ಹಾಟ್ ಎಂಟ್ರಿ ದೃಶ್ಯವು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದರೆ, ಕೆಲವರು ಟೀಸರ್ ಮಾತ್ರ ಬೆಂಕಿ ಆಗಿದೆ ಗುರು ಎಂದು ಹೇಳುತ್ತಿದ್ದಾರೆ. ಕೆಲವ್ರು ಈ ಶೈಲಿಯನ್ನು ಟೀಕಿಸಿದ್ದಾರೆ. ಒಟ್ಟಾರೆ, ಟೀಸರ್ ಯಶ್ ಅವರ ಹೊಸ ಪ್ರಯೋಗಶೀಲತೆಯ ಸಂಕೇತವಾಗಿದ್ದು, ಮಾರ್ಚ್ 19, 2026ರಂದು ಬಿಡುಗಡೆಯಾಗುವವರೆಗೂ ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲ ಹಾಗೂ ಚರ್ಚೆ ಮುಂದುವರಿಯಲಿದೆ..