ನಿಜಕ್ಕೂ ಯಶ್ ಯಾವಾಗ ಬರ್ತಾರೆ? ಅಭಿಮಾನಿಗಳ ಪ್ರಶ್ನೆಗೆ ಖುದ್ದು ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಉತ್ತರ;

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ (Yash) ಸಿನಿಮಾ ಅನೌನ್ಸ್ ಆಗಿ ದಿನಗಳು ಉರುಳುತ್ತಾ ಹೋದಂತೆಲ್ಲಾ ಅಭಿಮಾನಿಗಳಲ್ಲಿ ಕುತೂಹಲ, ಆತಂಕ, ಕಾತರ ಎಲ್ಲವೂ ಡಬಲ್ ಆಗ್ತಾ ಹೋಗೋದು ಕಾಮನ್. ಕೆಜಿಎಫ್-2 ಬಿಡುಗಡೆಯಾಗಿ ಇಷ್ಟು ದಿನಗಳಾದ್ರೂ ಯಶ್ ಅವರ ಮುಂದಿನ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic) ಬಗ್ಗೆ ಅಪ್‌ಡೇಟ್‌ಗಳಿಗಾಗಿ ಫ್ಯಾನ್ಸ್ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯ್ತಾ ಇದ್ದಾರೆ. ಈಗಾಗಲೇ ಚಿತ್ರದ ರಿಲೀಸ್ ಡೇಟ್ ಎರಡು ಬಾರಿ ಪೋಸ್ಟ್‌ಪೋನ್ ಆಗಿರೋದ್ರಿಂದ, "ಟಾಕ್ಸಿಕ್ ಯಾವಾಗ ಬರುತ್ತೆ?", "ಯಶ್ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ?" ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆ ಎಲ್ಲರನ್ನೂ ಕಾಡ್ತಾ ಇತ್ತು.

ಯಶ್ ಮಾಸ್ ಎಂಟ್ರಿ; | Photo Credit: https://www.instagram.com/battlegroundsmobilein_official/reels/
ಯಶ್ ಮಾಸ್ ಎಂಟ್ರಿ; | Photo Credit: https://www.instagram.com/battlegroundsmobilein_official/reels/

ಸಾಮಾಜಿಕ ಜಾಲತಾಣಗಳಿಂದ ಹಿಡಿದು ನ್ಯೂಸ್ ಚಾನೆಲ್‌ಗಳವರೆಗೂ ಎಲ್ಲೇ ನೋಡಿದ್ರೂ ‘ಯಶ್ ಯಾವಾಗ ಬರ್ತಾರೆ?’ ಅನ್ನೋ ಚರ್ಚೆಗಳೇ ಜೋರಾಗಿದ್ದವು. ಇದೀಗ ಇಡೀ ದೇಶವೇ ಕೇಳ್ತಾ ಇದ್ದ ಈ ಪ್ರಶ್ನೆಗೆ ಸ್ವತಃ ಯಶ್ ಅವರೇ ಖುದ್ದಾಗಿ ಉತ್ತರ ಕೊಟ್ಟಿದ್ದಾರೆ! "ಟಾಕ್ಸಿಕ್ ಬರುತ್ತೆ, ಅದೂ ಧಮಾಕಾ ಮಾಡಿಕೊಂಡೇ ಬರುತ್ತೆ, ಆದ್ರೆ ಸ್ವಲ್ಪ ವೇಯ್ಟ್ ಮಾಡಿ" ಅಂತ ಯಶ್ ಪ್ರೀತಿಯಿಂದಲೇ ಫ್ಯಾನ್ಸ್‌ಗೆ ತಿಳಿಸಿದ್ದಾರೆ. ಆದರೆ ಇಲ್ಲಿ ಅಸಲಿ ಟ್ವಿಸ್ಟ್ ಇರೋದೇ ಬೇರೆ, ಯಶ್ ಥಿಯೇಟರ್‌ಗಿಂತ ಮುಂಚೆ ನಾಳೆಯೇ ನಿಮ್ಮ ಮೊಬೈಲ್‌ಗೆ ಬರ್ತಾ ಇದ್ದಾರೆ!

ಬಿಜಿಎಂಐ ಜೊತೆ ‘ಟಾಕ್ಸಿಕ್’ ಮಾಸ್ ಕೊಲ್ಯಾಬರೇಷನ್!

ಹೌದು, ಭಾರತದ ಅತ್ಯಂತ ಜನಪ್ರಿಯ ಆನ್‌ಲೈನ್ ಬ್ಯಾಟಲ್ ಗೇಮ್ ಆಗಿರುವ ಬಿಜಿಎಂಐ (BGMI - Battlegrounds Mobile India) ಜೊತೆ ‘ಟಾಕ್ಸಿಕ್’ ಸಿನಿಮಾ ಕೈಜೋಡಿಸಿದೆ. ಗೇಮಿಂಗ್ ಇತಿಹಾಸದಲ್ಲೇ ಇದೊಂದು ಬಿಗ್ಗೆಸ್ಟ್ ಕೊಲ್ಯಾಬರೇಷನ್ ಎನ್ನಲಾಗ್ತಾ ಇದ್ದು, ಬಿಜಿಎಂಐನ ಸ್ಪೆಷಲ್ ‘ಟಾಕ್ಸಿಕ್ ವರ್ಷನ್’ ಇದೀಗ ಆಟಗಾರರಿಗೆ ಡೌನ್‌ಲೋಡ್‌ಗೆ ಲಭ್ಯವಿದೆ.

ಇನ್ಮುಂದೆ ಗೇಮರ್ಸ್ ಕೇವಲ ಗೇಮ್ ಆಡೋದು ಅಷ್ಟೇ ಅಲ್ಲ, ಅದರೊಳಗೆ ರಾಕಿ ಭಾಯ್ ಸ್ಟೈಲ್ ಅನ್ನು ಕಣ್ಣಾರೆ ನೋಡಿ ಎಂಜಾಯ್ ಮಾಡಬಹುದು. ಈ ಹೊಸ ವರ್ಷನ್‌ನಲ್ಲಿ ಟಾಕ್ಸಿಕ್ ಸಿನಿಮಾದಲ್ಲಿ ಬಳಸಲಾಗಿರುವ ಅತ್ಯಾಧುನಿಕ ಆಯುಧಗಳು, ಗನ್ ಸ್ಕಿನ್‌ಗಳು ಗೇಮ್ ಆಡುವವರಿಗೆ ಸಿಗಲಿವೆ.

ಗೇಮ್‌ನಲ್ಲೂ ಕೇಳಲಿದೆ ಯಶ್ ಖಡಕ್ ವಾಯ್ಸ್!

ಈ ಹಿಂದೆ ಬಿಜಿಎಂಐ ಗೇಮ್‌ನ ಅಪ್‌ಡೇಟ್‌ಗಳಲ್ಲಿ ಟೀಮ್ ಇಂಡಿಯಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ವಾಯ್ಸ್ ಪ್ಯಾಕ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಈಗ ಸೌತ್ ಸಿನಿಲೋಕದ ಸುಲ್ತಾನ್ ಯಶ್ ಅವರ ಖಡಕ್ ಧ್ವನಿ ಗೇಮ್‌ನೊಳಗೆ ಎಂಟ್ರಿ ಕೊಟ್ಟಿದೆ.

ಗೇಮ್ ಆಡುವಾಗ ಬರುವ ಪ್ರಮುಖ ಕಮಾಂಡ್‌ಗಳಾದ ‘ಎನಿಮೀಸ್ ಅಹೆಡ್’ (Enemies Ahead) ಮತ್ತು ‘ಫಾಲೋ ಮಿ’ (Follow Me) ಮುಂತಾದ ಡೈಲಾಗ್‌ಗಳು ಇನ್ಮುಂದೆ ಯಶ್ ಅವರದೇ ಸಿಗ್ನೇಚರ್ ಬೇಸ್ ವಾಯ್ಸ್‌ನಲ್ಲಿ ಕೇಳಿಬರಲಿವೆ. ಅಷ್ಟೇ ಅಲ್ಲದೆ, ಯಶ್ ಅವರ ವಿಶಿಷ್ಟ ಶೈಲಿಯ ಹೇರ್‌ಸ್ಟೈಲ್, ಅವರು ಧರಿಸುವ ಉಡುಪುಗಳು ಮತ್ತು ಅವರ ಖದರ್ ಆಕ್ಷನ್ ಮ್ಯಾನರಿಸಂಗಳನ್ನು ಡಿಜಿಟಲ್ ರೂಪದಲ್ಲಿ ಈ ಗೇಮ್‌ನಲ್ಲಿ ತರಲಾಗಿದೆ.

ಅಭಿಮಾನಿಗಳಿಗೆ ಸಿಗಲಿದೆ ಉಚಿತ ರಿವಾರ್ಡ್ಸ್!

ಯಶ್ ಅವರ ಈ ಹೊಸ ಇನ್ನಿಂಗ್ಸ್ ಅನ್ನು ಸೆಲೆಬ್ರೇಟ್ ಮಾಡಲು ಬಿಜಿಎಂಐ ಗೇಮ್‌ನೊಳಗೆ ಕೆಲವು ಇಂಟರೆಸ್ಟಿಂಗ್ ಮಿಷನ್‌ಗಳನ್ನು (Missions) ನೀಡಲಾಗ್ತಿದೆ. ಗೇಮ್ ಆಡುವವರು ಈ ಸಣ್ಣ ಪುಟ್ಟ ಟಾಸ್ಕ್‌ಗಳನ್ನು ಕಂಪ್ಲೀಟ್ ಮಾಡಿದರೆ, ಉಚಿತವಾಗಿ ಯಶ್ ಥೀಮ್ ಆಧಾರಿತ ವಿಶೇಷ ರಿವಾರ್ಡ್ಸ್ ಮತ್ತು ಔಟ್‌ಫಿಟ್‌ಗಳನ್ನು ಗೆಲ್ಲಬಹುದು. ಜೊತೆಗೆ ಚಿತ್ರದ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ಮಾದರಿಯ ವಿಶಿಷ್ಟ ‘ಟಾಕ್ಸಿಕ್ ಕ್ರೇಟ್‌ಗಳನ್ನು’ ಅನ್‌ಲಾಕ್ ಮಾಡುವ ಸುವರ್ಣ ಅವಕಾಶವೂ ಸಿಗಲಿದೆ.

ಬೆಳ್ಳಿ ಪರದೆ ಮೇಲೆ ಟಾಕ್ಸಿಕ್ ಅಬ್ಬರ ನೋಡಲು ಇನ್ನು ಸ್ವಲ್ಪ ದಿನ ಕಾಯಬೇಕಾಗಿದ್ದರೂ, ಗೇಮಿಂಗ್ ಲೋಕದ ಮೂಲಕ ನಾಳೆಯಿಂದಲೇ ಯಶ್ ಅಭಿಮಾನಿಗಳಿಗೆ ಹಬ್ಬದೂಟ ಸಿಗೋದು ಗ್ಯಾರಂಟಿ. ಹಾಗಾದ್ರೆ ಇನ್ನೇಕೆ ತಡ, ನಿಮ್ಮ ಮೊಬೈಲ್ ಹಿಡಿದು ರಾಕಿ ಭಾಯ್ ಸ್ಟೈಲ್‌ನಲ್ಲಿ ಅಖಾಡಕ್ಕಿಳಿಯಲು ರೆಡಿಯಾಗಿ! 

Latest News