ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್ - ‘ಟಾಕ್ಸಿಕ್’ ಅಖಾಡಕ್ಕೆ ಎಂಟ್ರಿ ಕೊಟ್ಟ ಐವರು ಪವರ್‌ಫುಲ್ ನಾಯಕಿಯರು!!

ರಾಕಿಂಗ್ ಸ್ಟಾರ್ ಯಶ್ ನಟನೆಯ, ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ‘ಟಾಕ್ಸಿಕ್’ (Toxic) ಸಿನಿಮಾದಿಂದ ಇಂದು (ಜುಲೈ 1) ಅತ್ಯಂತ ಆಘಾತಕಾರಿ ಮತ್ತು ರೋಮಾಂಚನಕಾರಿ ಅಪ್‌ಡೇಟ್ ಒಂದು ಹೊರಬಿದ್ದಿದೆ. ಚಿತ್ರತಂಡವು ಇಂದು ಅಧಿಕೃತವಾಗಿ ‘ಟಾಕ್ಸಿಕ್ ಲೇಡೀಸ್ ಟೀಸರ್’ (Toxic Ladies Teaser) ಬಿಡುಗಡೆ ಮಾಡಿದ್ದು, ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದೆ.

ಯಶ್ ‘ಟಾಕ್ಸಿಕ್’ ಟೀಸರ್ ಧಮಾಕಾ | Photo Credit: AI
ಯಶ್ ‘ಟಾಕ್ಸಿಕ್’ ಟೀಸರ್ ಧಮಾಕಾ | Photo Credit: AI

ಆದರೆ, ಈ ಟೀಸರ್ ಆರಂಭದಲ್ಲೇ ಚಿತ್ರತಂಡ ಪ್ರೇಕ್ಷಕರಿಗೆ ವಿಭಿನ್ನ ಹಾಗೂ ಗಂಭೀರ ಎಚ್ಚರಿಕೆಯೊಂದನ್ನು (Warning) ನೀಡಿದೆ. "ಮಕ್ಕಳು ಈ ಟೀಸರ್ ನೋಡಬೇಡಿ, ಪೋಷಕರು ನಿಮ್ಮ ಮಕ್ಕಳಿಗೆ ಇದನ್ನು ತೋರಿಸಬೇಡಿ. ಇನ್ನು ವಯಸ್ಸಾದವರು ನಿಮ್ಮ ಸ್ವಂತ ರಿಸ್ಕ್ ಮೇಲೆ ಇದನ್ನು ವೀಕ್ಷಿಸಿ" ಎಂದು ಹೇಳುವ ಮೂಲಕ ಸಿನಿಮಾದಲ್ಲಿರುವ ಕಟು ರಕ್ತಪಾತ ಮತ್ತು ತೀವ್ರತೆಯ ಝಲಕ್ ಅನ್ನು ಆರಂಭದಲ್ಲೇ ಪರಿಚಯಿಸಲಾಗಿದೆ.

ಐವರು ಪವರ್‌ಫುಲ್ ನಾಯಕಿಯರ ಪವರ್‌ಫುಲ್ ಎಂಟ್ರಿ

ಈಗ ಬಿಡುಗಡೆ ಆಗಿರುವ ವಿಶೇಷ ಟೀಸರ್‌ನಲ್ಲಿ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಿರುವ ಐವರು ಪ್ರಮುಖ ನಾಯಕಿಯರ ಪಾತ್ರಗಳ ಮಾಸ್ ಲುಕ್ ಮತ್ತು ವೈವಿಧ್ಯತೆಯನ್ನು ಅನಾವರಣಗೊಳಿಸಲಾಗಿದೆ. ಯಶ್ ಅವರ ಪಾತ್ರ ಎಷ್ಟು ಪವರ್‌ಫುಲ್ ಆಗಿದೆಯೋ, ಅದಕ್ಕೆ ಕಾಂಪ್ಲಿಮೆಂಟ್ ಕೊಡುವಂತೆ ಈ ಮಹಿಳಾ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಭಾರತೀಯ ಚಿತ್ರರಂಗದ ವಿವಿಧ ಉದ್ಯಮಗಳ ಐವರು ಸ್ಟಾರ್ ನಟಿಯರು ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಅಬ್ಬರಿಸಿದ್ದಾರೆ.

ಟೀಸರ್‌ನಲ್ಲಿ ಅನಾವರಣಗೊಂಡ ನಾಯಕಿಯರ ಪಾತ್ರಗಳು ಮತ್ತು ಹೈಲೈಟ್ಸ್:

ನಯನತಾರಾ (ಪಾತ್ರದ ಹೆಸರು: ಗಂಗಾ): ಸೌತ್ ಸೂಪರ್ ಸ್ಟಾರ್ ನಯನತಾರಾ ಅವರ ಆಕ್ಷನ್ ಮತ್ತು ಸಾಹಸ ದೃಶ್ಯಗಳು ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ.

ಕಿಯಾರಾ ಅಡ್ವಾಣಿ (ಪಾತ್ರದ ಹೆಸರು: ನಾಡಿಯಾ): ಕಿಯಾರಾ ಅವರ ಸೌಂದರ್ಯ ಮತ್ತು ತೀಕ್ಷ್ಣ ನೋಟ ಪ್ರೇಕ್ಷಕರ ಗಮನ ಸೆಳೆಯುತ್ತದೆ.

ರುಕ್ಮಿಣಿ ವಸಂತ್ (ಪಾತ್ರದ ಹೆಸರು: ಮೆಲಿಸಾ): ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ ಅವರ ಧೈರ್ಯಶಾಲಿ ಪಾತ್ರ ಮತ್ತು ವಿಭಿನ್ನ ಲುಕ್ ಕೌತುಕ ಮೂಡಿಸಿದೆ.

ಹುಮಾ ಖುರೇಷಿ (ಪಾತ್ರದ ಹೆಸರು: ಎಲಿಜಬೆತ್): ಹುಮಾ ಅವರ ಪಾತ್ರದಲ್ಲಿ ತಂತ್ರ ಮತ್ತು ರಾಜತಾಂತ್ರಿಕತೆಯ ಶೇಡ್ಸ್ ಎದ್ದು ಕಾಣುತ್ತಿದೆ.

ತಾರಾ ಸುತಾರಿಯಾ (ಪಾತ್ರದ ಹೆಸರು: ರೆಬೆಕಾ): ತಾರಾ ಸುತಾರಿಯಾ ಅವರ ಬಿಂದಾಸ್ ಮತ್ತು ಗ್ಲಾಮರಸ್ ಅವತಾರ ಟೀಸರ್‌ನ ಮೆರುಗನ್ನು ಹೆಚ್ಚಿಸಿದೆ.

ಇಷ್ಟೇ ಅಲ್ಲದೆ, ಈ ಐವರು ನಾಯಕಿಯರ ಜೊತೆಗೆ ಕೆಲವು ವಿದೇಶಿ ನಟಿಯರು ಸಹ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಟೀಸರ್‌ನಲ್ಲಿ ರಿವೀಲ್ ಆಗಿದೆ.

ಯಶ್ vs ನಾಯಕಿಯರು: ಮಹಿಳೆ vs ಪುರುಷರ ಮಹಾ ಕಾಳಗ?

ಈ ಹೊಸ ಟೀಸರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ‘ಟಾಕ್ಸಿಕ್’ ಸಿನಿಮಾದ ಮುಖ್ಯ ಕಥಾಹಂದರವು ‘ಯಶ್ ವಿರುದ್ಧ ನಾಯಕಿಯರು’ ಎಂಬ ಸೂತ್ರದ ಮೇಲೆ ಸಾಗುವ ಮುನ್ಸೂಚನೆ ಸಿಗುತ್ತಿದೆ. ಟೀಸರ್‌ನ ಕೆಲವು ಆರಂಭಿಕ ದೃಶ್ಯಗಳಲ್ಲಿ ಯಶ್ ಅವರು ನಾಯಕಿಯರೊಡನೆ ಹಗುರವಾಗಿ ಚೆಲ್ಲಾಟ ಆಡುತ್ತಿದ್ದರೆ, ಇನ್ನು ಕೆಲವು ದೃಶ್ಯಗಳಲ್ಲಿ ನಾಯಕಿಯರೇ ಯಶ್ ಅವರನ್ನು ಕೊನೆಗಾಣಿಸಲು ಸ್ಕೆಚ್ ಹಾಕುವ ರಗಡ್ ಸನ್ನಿವೇಶಗಳಿವೆ.

ವಿಶೇಷವಾಗಿ ಟೀಸರ್‌ನ ಕೊನೆಯ ದೃಶ್ಯವು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡುತ್ತದೆ. ಹಲವು ಮಹಿಳೆಯರು ಒಂದೇ ರೀತಿಯ ಉಡುಪನ್ನು ಧರಿಸಿ, ಯಶ್ ವಿರುದ್ಧ ಭೀಕರ ಫೈಟಿಂಗ್ ಮಾಡುತ್ತಿದ್ದಾರೆ. ಈ ವೇಳೆ ಯಶ್ ಅವರು ಅತ್ಯಂತ ನಿರ್ದಯಿಯಾಗಿ ಒಬ್ಬ ಮಹಿಳೆಯ ಬಾಯಿಗೆ ಬಂದೂಕನ್ನಿಟ್ಟು ಗುಂಡು ಹಾರಿಸುವ ದೃಶ್ಯ ಸಿನಿಮಾದ ಕ್ರೌರ್ಯ ಮತ್ತು ತೀವ್ರತೆಯನ್ನು ಬಿಂಬಿಸುತ್ತದೆ. ಒಟ್ಟಾರೆಯಾಗಿ ಇಡೀ ಚಿತ್ರವು ಮಹಿಳಾ ಸೈನ್ಯ ಮತ್ತು ಒಬ್ಬನೇ ಪುರುಷನ ನಡುವೆ ನಡೆಯುವ ಮಹಾ ಯುದ್ಧದಂತೆ ಕಾಣಿಸುತ್ತಿದೆ. ಚಿತ್ರದ ಕಥೆಯು ಸಂಪೂರ್ಣವಾಗಿ ನಾಯಕಿ ಪ್ರಧಾನ ಅಥವಾ ಮಹಿಳಾ ಪಾತ್ರಗಳ ಸುತ್ತಲೇ ಸಾಗಲಿದೆ ಎಂಬ ಚರ್ಚೆಗಳು ಈಗ ಗಾಂಧಿನಗರದಲ್ಲಿ ಶುರುವಾಗಿದೆ.

ಬಿಡುಗಡೆಗೆ ಜಾಗತಿಕ ಮಟ್ಟದಲ್ಲಿ ಕ್ಷಣಗಣನೆ

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಪೋಸ್ಟರ್ ಹಾಗೂ ಮೊದಲ ಟೀಸರ್ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದವು. ಇತ್ತೀಚೆಗಷ್ಟೇ ಚಿತ್ರತಂಡ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದು, ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಈ ‘ಟಾಕ್ಸಿಕ್ ಲೇಡೀಸ್ ಟೀಸರ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ಹತ್ತರಷ್ಟು ಹೆಚ್ಚಿಸಿದೆ. ಕೇವಲ ಪುರುಷ ಪ್ರಧಾನ ಮಾಸ್ ಸಿನಿಮಾಗಳ ನಡುವೆ, ಇಷ್ಟು ದೊಡ್ಡ ಮಟ್ಟದ ಮಹಿಳಾ ತಾರಾಗಣವನ್ನು ಇಟ್ಟುಕೊಂಡು ಯಶ್ ಮಾಡುತ್ತಿರುವ ಈ ಹೊಸ ಪ್ರಯೋಗ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Latest News