ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ವಿವಾದ ಇರಲಿ, ಟ್ರೋಲ್ ಇರಲಿ ಅಥವಾ ಇತ್ತೀಚಿನ ಬ್ರೇಕಪ್ ಸ್ಟೋರಿ ಇರಲಿ—ಸೋನು ಗೌಡ ಸದಾ ಸುದ್ದಿಯಲ್ಲಿ ಇರುತ್ತಾರೆ. ಬಿಗ್ ಬಾಸ್ ಒಟಿಟಿಯಲ್ಲಿ ಮಿಂಚಿದ್ದ ಈ ವೈರಲ್ ಸ್ಟಾರ್, ಈಗ ಹಣ ಮಾಡೋದಕ್ಕೆ ಹೊಸ ದಾರಿ ಹುಡುಕಿಕೊಂಡಿದ್ದಾರೆ. ಅದುವೇ 'ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಶನ್'.
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೊಸ ಫೀಚರ್ ಸಖತ್ ಸದ್ದು ಮಾಡ್ತಿದೆ. ಸೆಲೆಬ್ರಿಟಿಗಳು ತಮ್ಮ ಪರ್ಸನಲ್ ಲೈಫ್ ಅಥವಾ ವಿಶೇಷ ವಿಡಿಯೋಗಳನ್ನು ನೋಡಲು ಅಭಿಮಾನಿಗಳಿಂದ ಹಣ ಪಡೆಯಬಹುದು. ಯಾರು ದುಡ್ಡು ಕಟ್ಟಿ 'ಸಬ್‌ಸ್ಕ್ರೈಬ್' ಆಗ್ತಾರೋ ಅವರಿಗೆ ಮಾತ್ರ ಸೋನು ಅವರ ಎಕ್ಸ್‌ಕ್ಲೂಸಿವ್ ಫೋಟೋ ಮತ್ತು ವಿಡಿಯೋಗಳು ಕಾಣಿಸುತ್ತವೆ. ಬಾಲಿವುಡ್‌ನ ನೇಹಾ ಶರ್ಮಾ ಹಾದಿಯಲ್ಲೇ ಈಗ ಸೋನು ಕೂಡ ಹೆಜ್ಜೆ ಇಟ್ಟಿದ್ದಾರೆ.
ಸಾಮಾನ್ಯವಾಗಿ ನಾವು ಅಮೆಜಾನ್ ಪ್ರೈಮ್ ಅಥವಾ ಹಾಟ್‌ಸ್ಟಾರ್ ಸಬ್‌ಸ್ಕ್ರೈಬ್ ಮಾಡ್ಬೇಕು ಅಂದ್ರೆ ತಿಂಗಳಿಗೆ 150 ರಿಂದ 300 ರೂಪಾಯಿ ಒಳಗೆ ಪಾವತಿಸ್ತೀವಿ. ಆದ್ರೆ ಸೋನು ಗೌಡ ಅವರ ಪರ್ಸನಲ್ ಕಂಟೆಂಟ್ ನೋಡಬೇಕಂದ್ರೆ ನೀವು ತಿಂಗಳಿಗೆ ಬರೊಬ್ಬರಿ 390 ರೂಪಾಯಿ ಕೊಡಬೇಕು! ಇದು ದೊಡ್ಡ ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಿಂತಲೂ ದುಬಾರಿಯಾಗಿದೆ ಅಂತ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
ಕೆಲವೇ ದಿನಗಳಲ್ಲಿ ಲಕ್ಷಗಳತ್ತ ಸೋನು ಸಂಪಾದನೆ?
ಅಚ್ಚರಿಯ ವಿಷಯ ಅಂದ್ರೆ, ಇಷ್ಟು ರೇಟ್ ಇದ್ರೂ ಸೋನು ಅವರಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಆಲ್ರೆಡಿ 139 ಮಂದಿ ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದಾರಂತೆ. ಈ ಲೆಕ್ಕಾಚಾರದಲ್ಲಿ ನೋಡಿದ್ರೆ ಸೋನು ಖಾತೆಗೆ ಈಗಾಗಲೇ ಸುಮಾರು 54,000 ರೂಪಾಯಿಗೂ ಅಧಿಕ ಹಣ ಬಂದಿದೆ. ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಹೆಚ್ಚಾದಂತೆ ಸೋನು ಪ್ರತಿ ತಿಂಗಳು ಲಕ್ಷ ಲಕ್ಷ ಹಣ ಎಣಿಸೋದು ಗ್ಯಾರಂಟಿ.
ಅಳುವಿನ ಕಥೆ ಹೇಳಿ ಬಿಸಿನೆಸ್ ಶುರು ಮಾಡಿದ್ರಾ ಸೋನು?
ಕಳೆದ ಕೆಲ ದಿನಗಳಿಂದ ಸೋನು ತಮ್ಮ ಹಳೆಯ ಲವ್ ಮತ್ತು ಬ್ರೇಕಪ್ ಸ್ಟೋರಿ ಹೇಳ್ತಾ ಕಣ್ಣೀರಿಡ್ತಿದ್ರು. "ನನ್ನ ಮಾಜಿ ಪ್ರೇಮಿ ಸಾವಿಗೂ ಮುನ್ನ ಇಮೇಲ್ ಮಾಡಿದ್ದ" ಅಂತ ಎಮೋಷನಲ್ ಆಗಿ ವಿಡಿಯೋ ಮಾಡ್ತಿದ್ರು. ಈ ವಿಡಿಯೋಗಳು ವೈರಲ್ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಂತೆಯೇ, ಇತ್ತ ಸೋನು ಈ ಸಬ್‌ಸ್ಕ್ರಿಪ್ಶನ್ ಪ್ಲಾನ್ ಅನೌನ್ಸ್ ಮಾಡಿದ್ದಾರೆ. ಇದನ್ನೇ ನೋಡಿ ಟ್ರೋಲರ್‌ಗಳು, "ಅಳುವಿನ ಕಥೆ ಹೇಳಿ ಈಗ ಸಬ್‌ಸ್ಕ್ರಿಪ್ಶನ್ ಮಾಡಿಸಲು ಹೊರಟಿದ್ದೀರಾ?" ಅಂತ ಕಾಲೆಳೀತಾ ಇದ್ದಾರೆ.
ಒಟ್ಟಿನಲ್ಲಿ ಸೋನು ಗೌಡ ಏನೇ ಮಾಡಿದ್ರೂ ಅದು ವೈರಲ್ ಆಗೋದಂತೂ ಖಂಡಿತ. ಮುಂದಿನ ದಿನಗಳಲ್ಲಿ ಈ 390 ರೂಪಾಯಿ ಪ್ಲಾನ್‌ನಲ್ಲಿ ಅವರು ಯಾವ ರೀತಿ ಕಂಟೆಂಟ್ ಕೊಡ್ತಾರೆ ಅನ್ನೋದೇ ಈಗ ಕುತೂಹಲ.